ಮುಷ್ಕರ: ರಾಜ್ಯದ 1 ಕೋಟಿ ಪ್ರಯಾಣಿಕರಿಗೆ ತೊಂದರೆ! ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸಂಚಾರ

 


ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ

ಬೆಂಗಳೂರಿನಲ್ಲಿ ಬಿಎಂಟಿಸಿ 

ನೆಚ್ಚಿಕೊಂಡಿರುವ 30 ಲಕ್ಷ

ಪ್ರಯಾಣಿಕರು, ಕೆಎಸ್‌ಆರ್‌ಟಿಸಿ, ಈಶಾನ್ಯ, ನೈರುತ್ಯ ಸಾರಿಗೆ ಬಸ್‌ಗಳು ಸೇರಿ 70-80 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮುಷ್ಕರದ ಹಿನ್ನೆಲೆ, ಕಲಬುರ್ಗಿಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಲಿಲ್ಲ.

ಇದರಿಂದ ಸಾರಿಗೆ ಬಸ್ ಸಂಚಾರ

 ಸಂಪೂರ್ಣ ಸ್ತಬ್ದವಾಗಿದೆ.ಇನ್ನು,

 ಬೆಂಗಳೂರಿನ ಶಾಂತಿನಗರದ

 ಬಸ್ ನಿಲ್ದಾಣದಲ್ಲಿ ಖಾಸಗಿ

 ಬಸ್‌ಗಳಿಗೆ ಜನರು 

ಮುಗಿಬಿದ್ದಿದ್ದಾರೆ.



ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸಂಚಾರ



ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ, ಪ್ರಯಾಣಿಕರ

ಅನುಕೂಲಕ್ಕಾಗಿ 5 ನಿಮಿಷಕ್ಕೊಂದು ಮೆಟ್ರೋ ರೈಲು

ಓಡಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ. ಇಂದು ರಾತ್ರಿ

9ರವರೆಗೆ ನೇರಳೆ ಮಾರ್ಗದ ಬೈಯ್ಯಪ್ಪನಹಳ್ಳಿ-ಮೈಸೂರು

ರಸ್ತೆ ನಿಲ್ದಾಣ ನಡುವೆ ಪ್ರತಿ 4.5 ನಿಮಿಷಕ್ಕೆ & ಹಸಿರು

ಮಾರ್ಗದ ನಾಗಸಂದ್ರ-ರೇಷ್ಮೆ ಸಂಸ್ಥೆ ನಿಲ್ದಾಣದವರೆಗೆ

ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸಂಚರಿಸಲಿದೆ. ಇನ್ನು,

ಟೋಕನ್ ಬಳಕೆಗೆ ಇಲ್ಲದಿರುವುದರಿಂದ ಸಾರ್ವಜನಿಕರು

ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಬಹುದಾಗಿದೆ.


ಖಾಸಗಿ ವಾಹನಗಳಿಂದ ಸುಲಿಗೆ:ಪ್ರಯಾಣಿಕರ ಪರಾದಾಟ


6ನೇ ವೇತನ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು

ಕರ್ತವ್ಯ ಬಹಿಷ್ಕರಿಸಿ ಇಂದಿನಿಂದ ಅನಿರ್ದಿಷ್ಟಾವಧಿ

ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಸಾರ್ವಜನಿಕರು

ಪರದಾಡುವಂತಾಗಿದೆ. ಇದರ ಪ್ರಯೋಜನ ಪಡೆದ ಖಾಸಗಿ

ವಾಹನಗಳು ಮತ್ತು ಆಟೋಚಾಲಕರು ಪ್ರಯಾಣಿಕರಿಂದ

ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದಾಗಿ

ಪ್ರಯಾಣಿಕರು ದೂರುತ್ತಿದ್ದಾರೆ. ಈ ಕುರಿತು ಮಾತನಾಡಿದ

ಪ್ರಯಾಣಿಕರು, 'ಬಸ್‌ನಲ್ಲಿ 25 ನೀಡಿ ಊರಿಗೆ

ಹೋಗುತ್ತಿದ್ದೆವು. ಆದರೆ ಈಗ ಆಟೋದವರು ಕೆ1,000

ಕೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.


ಖಾಸಗಿ ಬಸ್ ಮಾಲೀಕರಿಗೆ ಗುಡ್ ನ್ಯೂಸ್


ಸಾರಿಗೆ ಸಂಸ್ಥೆಗಳ ನೌಕರರು ಇಂದಿನಿಂದ ಅನಿರ್ದಿಷ್ಟ

ಕಾಲ ಮುಷ್ಕರವನ್ನು ಹಮ್ಮಿಕೊಂಡಿರುವ ಹಿನ್ನಲೆ

ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ

ಪ್ರಯಾಣಿಕರಿಗೆ ತೊಂದರೆಯಾಗದಂತೆ, ಖಾಸಗಿ

ಬಸ್‌ಗಳಿಗೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ

ನೀಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಕುರಿತಂತೆ

ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ

ಎಂ.ಸತ್ಯವತಿ ಅಧಿಸೂಚನೆ ಹೊರಡಿಸಿದ್ದಾರೆ. ರಾಜ್ಯ

ಸರ್ಕಾರದಿಂದ ಫುಲ್ ಪರ್ಮಿಟ್ ದೊರೆತಿರುವುದರಿಂದ

ಖಾಸಗಿ ಬಸ್ ಮಾಲೀಕರು ಖುಷಿಯಲ್ಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು