ವಿಶ್ವದಾದ್ಯಂತ ಪ್ರತಿವರ್ಷ
ಏಪ್ರಿಲ್ 7ರಂದು'ವಿಶ್ವ ಆರೋಗ್ಯ ದಿನ' ವನ್ನು ಆಚರಿಸಲಾಗುತ್ತದೆ.
ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮೊದಲ ಅಧಿವೇಶನದಲ್ಲಿ 1950ರಿಂದ ಜಾರಿಗೆ ಬರುವಂತೆ ಪ್ರತಿ ವರ್ಷ ಏಪ್ರಿಲ್ 7 ಅನ್ನು ವಿಶ್ವ
ಆರೋಗ್ಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾತು.
ಇನ್ನು, ಈ ವರ್ಷದ ವಿಶ್ವ
ಆರೋಗ್ಯ ದಿನದ ವಿಷಯ ಎಲ್ಲರಿಗೂ ಉತ್ತಮವಾದ ಆರೋಗ್ಯಕರ ಜಗತ್ತನ್ನು
ನಿರ್ಮಿಸುವುದಾಗಿದೆ.
ಶುಭಕೋರಿದ ಪ್ರಧಾನಿ
ಇಂದು ವಿಶ್ವ ಆರೋಗ್ಯ ದಿನ.
ಈ ಹಿನ್ನೆಲೆ ಶುಭಕೋರಿರುವ
ಪ್ರಧಾನಿ ಮೋದಿ, 'ವಿಶ್ವವನ್ನು
ಆರೋಗ್ಯವಾಗಿಡಲು
ಹಗಲು ರಾತ್ರಿ ಶ್ರಮಿಸುವ ಎಲ್ಲರಿಗೂ ಕೃತಜ್ಞತೆ &
ಮೆಚ್ಚುಗೆ ಸೂಚಿಸುವ ದಿನವಿದು. ಇನ್ನು, ಮಾಸ್ಕ್
ಧರಿಸುವುದು, ನಿಯಮಿತವಾಗಿ ಕೈ ತೊಳೆಯುವುದು
& ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ
ಮೂಲಕ ಕೋವಿಡ್ ವಿರುದ್ಧ ಹೋರಾಡುವತ್ತ ಗಮನ
ಹರಿಸೋಣ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು
& ಸದೃಢವಾಗಿರಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು
ತೆಗೆದುಕೊಳ್ಳಿ' ಎಂದು ಟ್ವಿಟ್ ಮಾಡಿದ್ದಾರೆ.
0 ಕಾಮೆಂಟ್‌ಗಳು
hrithiksuraj2@gmail.com