ಇದೇ ತಿಂಗಳಲ್ಲಿ ತೆರೆ ಕಾಣಬೇಕಿದ್ದ ಬಹುನಿರೀಕ್ಷಿತ
'ಕೆಜಿಎಫ್ ಚಾಪ್ಟರ್ 2' ಚಿತ್ರ ಲಾಕ್ ಡೌನ್ ವೇಳೆ ಶೂಟಿಂಗ್
ಸ್ಥಗಿತಗೊಂಡಿದ್ದ ಹಿನ್ನೆಲೆ ಬಿಡುಗಡೆ ಮುಂದೂಡಿಕೆಯಾಗಿತ್ತು.
ಸದ್ಯ ಉಡುಪಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ಈ ಮಧ್ಯೆ, ಚಿತ್ರ ಬಿಡುಗಡೆ ಕುರಿತು ಸುದ್ದಿಯೊಂದು
ಹರಿದಾಡುತ್ತಿದ್ದು, ಮುಂಬರುವ ಜನವರಿ 14ರಂದು
ಸಂಕ್ರಾಂತಿ ವೇಳೆ ಕೆಜಿಎಫ್ 2 ಬಿಡುಗಡೆಯಾಗಲಿದೆ
ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದಿಂದ ಇನ್ನೂ
ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.
ಕೊಟ್ಟಿಗೆಹಾರದಲ್ಲಿ 'ಕಸ್ತೂರಿ ಮಹಲ್' ಚಿತ್ರೀಕರಣ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕೃತಿ ಸೌಂದರ್ಯಕ್ಕೆ
ಹೆಸರಾಗಿರುವ ಕೊಟ್ಟಿಗೆಹಾರದಲ್ಲಿ ಕಸ್ತೂರಿ ಮಹಲ್ ಚಿತ್ರದ
ಚಿತ್ರೀಕರಣ ಅ.5ರಿಂದ ಆರಂಭವಾಗಿದ್ದು, ಮಾತಿನ ಭಾಗದ
ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಶಾನ್ವಿ ಶ್ರೀವಾಸ್ತವ್,
ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್,
ನೀನಾಸಂ ಅಶ್ವಥ್ ಮುಂತಾದವರು ಚಿತ್ರೀಕರಣದಲ್ಲಿ
ಭಾಗವಹಿಸಿದ್ದಾರೆ. ಡ್ರಿಲ್ಲರ್ ಕಥಾಹಂದರದ ಈ ಚಿತ್ರವನ್ನು
ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದು, ಇದು
ಇವರ 50ನೇ ಚಿತ್ರ ಎನ್ನುವುದು ವಿಶೇಷ.
0 ಕಾಮೆಂಟ್‌ಗಳು
hrithiksuraj2@gmail.com