ಚಲನಚಿತ್ರ ಜಗತ್ತಿನಲ್ಲಿ ವಿಶಿಷ್ಟ ವಿಷಯಗಳು

 

ನಟಿ ಕಂಗನಾ ಕ್ಷಮೆಯಾಚಿಸಲಿ: ರಾಖಿ ಸಾವಂತ್

ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸರ್ಕಾರ ಮತ್ತು

ಸಿಎಂ ಉದ್ಧವ್ ಠಾಕ್ರೆ ಬಳಿ ಕ್ಷಮೆ ಕೇಳಬೇಕೆಂದು ನಟಿ

ರಾಖಿ ಸಾವಂತ್ ಆಗ್ರಹಿಸಿದ್ದಾರೆ. ಕಂಗನಾ ಇಷ್ಟು ದಿನ

ಹೇಳಿದೆಲ್ಲಾ ಸುಳ್ಳು ಅನ್ನೋದು ಸಾಬೀತಾಗಿದೆ. ಸುಶಾಂತ್

ಸಿಂಗ್ ರಜಪೂತ್ ಸಾವನ್ನು ವೈಯಕ್ತಿಕ ಮತ್ತು ರಾಜಕೀಯ

ಲಾಭಕ್ಕಾಗಿ ಬಳಸಿಕೊಂಡ ನಟಿ ಕಂಗನಾಗೆ ನಾಚಿಕೆ

ಆಗಬೇಕು. ಹಾಗಾಗಿ ಸಿಎಂ ಠಾಕ್ರೆ ಮತ್ತು ಪುತ್ರ ಆದಿತ್ಯ

ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ರಾಖಿ

ಒತ್ತಾಯಿಸಿದ್ದಾರೆ.



ಅರವಿಂದ ಸಮೇತ ವೀರ ರಾಘವನಿಗೆ 2 ವರ್ಷ


ಜ್ಯೂ.ಎನ್‌ಟಿಆರ್ ನಟಿಸಿ & ತ್ರಿವಿಕ್ರಮ್ ನಿರ್ದೇಶಿಸಿದ್ದ
'ಅರವಿಂದ ಸಮೇತ ವೀರ ರಾಘವ' ಚಿತ್ರ ಬಿಡುಗಡೆಯಾಗಿ
2 ವರ್ಷವಾಗಿದೆ. ರಾಯಲ ಸೀಮೆಯ ದ್ವೇಷದ ಕಥೆಯಲ್ಲಿ
ನಾಯಕನ ತಂದೆಯಾಗಿ ನಾಗಬಾಬು ಕಾಣಿಸಿಕೊಂಡರೆ,
ಖಳನಾಯಕನಾಗಿ ಜಗಪತಿ ಬಾಬು ನಟಿಸಿದ್ದರು.
ನಾಯಕನಾಗಿ ಜ್ಯೂ.ಎನ್‌ಟಿಆರ್ ನಟನೆ ಅಮೋಘ
ಎನ್ನುವಂತಿತ್ತು. ಉಳಿದಂತೆ ಸುನೀಲ್ ಹಾಸ್ಯ, ಲಕ್ಷ್ಮೀ
ಗೋಪಾಲ ಸ್ವಾಮಿ, ಸಿತಾರ, ನಾಯಕಿ ಪೂಜಾ ಹೆಗ್ಡೆಯವರ
ಸಹಜ ನಟನೆ & ರಾಮ್-ಲಕ್ಷಣ್ ಅವರ ಸಾಹಸ ಈ
ಚಿತ್ರದ ಗೆಲುವಿಗೆ ಕಾರಣವಾಗಿತ್ತೆನ್ನಬಹುದು.


ಬಿಗ್-ಬಿ ಬರ್ತಡೇಗೆ ಶುಭಕೋರಿದ ಕನ್ನಡದ ಬಚ್ಚನ್

ಅಮಿತಾಭ ಬಚ್ಚನ್ ಅವರಿಂದು 78ನೇ ಹುಟ್ಟುಹಬ್ಬ
ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ನಟ ಕಿಚ್ಚ ಸುದೀಪ್ ಟ್ವಿಟ್
ಮೂಲಕ ಶುಭಕೋರಿದ್ದಾರೆ. ನಿಮ್ಮ ವ್ಯಕ್ತಿತ್ವ ಯಾವಾಗಲೂ
ಸ್ಫೂರ್ತಿ ನೀಡುತ್ತದೆ ಸರ್, ಇನ್ನೂ ಹಲವು ವರ್ಷಗಳ ಕಾಲ
ನಿಮಗೆ ಉತ್ತಮ ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ನಿಮ್ಮನ್ನು ಹತ್ತಿರದಿಂದ ನೋಡುವ & ನಿಮ್ಮೊಂದಿಗೆ ತೆರೆ
ಹಂಚಿಕೊಳ್ಳುವ ಅವಕಾಶಗಳನ್ನು ಪಡೆದಿರುವುದೇ ನನಗೆ
ಆಶೀರ್ವಾದ, ಹುಟ್ಟುಹಬ್ಬದ ಶುಭಾಶಯಗಳು ಬಚ್ಚನ್
ಸರ್ ಎಂದು ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು