ಲಾಕ್‌ಡೌನ್ ಮುಗಿದ ತಕ್ಷಣ ಮೈಸೂರಿನಲ್ಲಿ 2ನೇ ಹಂತದ
ಶೂಟಿಂಗ್ ಆರಂಭಿಸಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ
ನಟನೆಯ 'ಮದಗಜ' ಚಿತ್ರತಂಡ ಇದೀಗ, ಯಶಸ್ವಿಯಾಗಿ
ಚಿತ್ರೀಕರಣ ಮುಗಿಸಿದೆ. ಈ ಸುದ್ದಿಯನ್ನು ಸ್ವತಃ ನಿರ್ದೇಶಕ
ಮಹೇಶ್ ಗೌಡ ತಮ್ಮ ಫೇಸ್‌ಬುಕ್ ಖಾತೆಯಲ್ಲಿ
ಹಂಚಿಕೊಂಡಿದ್ದಾರೆ. ಸೆ.19ರಂದು 2ನೇ ಹಂತದ ಶೂಟಿಂಗ್
ಪ್ರಾರಂಭಿಸಲಾಗಿತ್ತು. 12 ದಿನಗಳ ಮೈಸೂರು ಶೆಡ್ಯೂಲ್
ಮುಗಿಸಲಾಗಿದೆ ಎಂದಿದ್ದಾರೆ. ಇನ್ನು, ಇತ್ತೀಚಿಗಷ್ಟೆ ಮದಗಜ
ಸೆಟ್‌ಗೆ ಮೈಸೂರಿನಲ್ಲಿಯೇ ಇದ್ದ ನಟ ದರ್ಶನ್ ಭೇಟಿ
ನೀಡಿದ್ದರು.
ದಸರಾ ಹಬ್ಬದ ಪ್ರಯುಕ್ತ ರಾಧಿಕಾ ಕುಮಾರಸ್ವಾಮಿ
ಚಿತ್ರ ಮರುಬಿಡುಗಡೆ
ಕೊರೋನಾ ಬಿಕ್ಕಟ್ಟಿನಿಂದ ಆರೇಳು ತಿಂಗಳು ಮುಚ್ಚಿದ್ದ
ಚಿತ್ರಮಂದಿರಗಳನ್ನು ಅ.15ರಿಂದ ತೆರೆಯಬಹುದೆಂದು
ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ, ಸದ್ಯದ
ಸ್ಥಿತಿಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸುತ್ತಾರಾ
ಎಂಬ ಅನುಮಾನದಿಂದ ಸದ್ಯ ಹೊಸ ಸಿನಿಮಾಗಳು
ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ತೆರೆಕಂಡಿರುವ ಚಿತ್ರಗಳು
ರಿ-ರಿಲೀಸ್ ಆಗುತ್ತಿವೆ. ಇನ್ನು, ರಾಧಿಕಾ ಕುಮಾರಸ್ವಾಮಿ
ನಟಿಸಿ, ನಿರ್ಮಿಸಿದ್ದ 'ದಮಯಂತಿ' ಸಿನಿಮಾ ದಸರಾ ಹಬ್ಬದ
ಪ್ರಯುಕ್ತ ಅ.23ರಂದು ಮರುಬಿಡುಗಡೆಯಾಗುತ್ತಿದೆ.
ಪ್ರೀತಿ, ನಂಬಿಕೆ ವಿಷಯದಲ್ಲಿ ಆತುರದ ನಿರ್ಧಾರ
ತೆಗೆದುಕೊಳ್ಳಬೇಡಿ: ರಶ್ಮಿಕಾ ಮಂದಣ್ಣ
ಸ್ಯಾಂಡಲ್‌ವುಡ್ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್
ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸದ್ಯ ರಶ್ಮಿಕಾ
ಪ್ರೀತಿ ಹಾಗೂ ನಂಬಿಕೆ ಬಗ್ಗೆ ಮಾತನಾಡಿದ್ದಾರೆ. ಆತುರದಲ್ಲಿ
ಪ್ರೀತಿ ಮಾಡಬೇಡಿ. ಆತುರದಲ್ಲಿ ಯಾರನ್ನೂ ನಂಬಬೇಡಿ
ಎಂದು ರಶ್ಮಿಕಾ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಮಧ್ಯೆ ಪ್ರೀತಿ
ಚಿಗುರಿತ್ತು. ಇವರಿಬ್ಬರ ನಿಶ್ಚಿತಾರ್ಥ ಸಹ ನಡೆದಿತ್ತು.
ಬಳಿಕ ರಶ್ಮಿಕಾ ಹಾಗೂ ರಕ್ಷಿತ್ ಸಂಬಂಧದಲ್ಲಿ ಬಿರುಕು
ಉಂಟಾಗಿತ್ತು.
0 ಕಾಮೆಂಟ್‌ಗಳು
hrithiksuraj2@gmail.com