ಕುಂಭ ಮೇಳ: 1,701 ಮಂದಿಗೆ ಕೊರೋನಾ ! ಕ್ವಾರಂಟೈನ್ ನಲ್ಲಿರುವ ಮಹಿಳೆಗೆ ಸೆಕ್ಸ್ ಗೆ ಒತ್ತಾಯಿಸಿದವನ ಬಂಧನ! ಕೊರೋನಾ ಪಾಸಿಟಿವ್ ಬಂದಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು!ಕುಂಭ ಮೇಳ: 1,701 ಮಂದಿಗೆ ಕೊರೋನಾ!

 


ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದ ಮಹಿಳಾ ಕೊರೋನಾ

ರೋಗಿಯನ್ನು ಸೆಕ್ಸ್ ಗೆ ಒತ್ತಾಯಿಸಿದ ಆರೋಪದಲ್ಲಿ

ವೈದ್ಯಕೀಯ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿರುವ

ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ. ಬಂಧಿತನು

ಆಸ್ಪತ್ರೆಯೊಂದರ ಸಿಬ್ಬಂದಿಯಾಗಿದ್ದು, ಕ್ವಾರಂಟೈನ್

ಆಗಿರುವ ಮಹಿಳೆಯ ಆರೋಗ್ಯವನ್ನು ವಿಚಾರಿಸಲು

ಹೋಟೆಲ್ ಗೆ ಬರುತ್ತಿದ್ದನು. ಆತನ ಕಿರುಕುಳ ತಾಳದೆ

ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು

ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.


ಕುಂಭ ಮೇಳ: 1,701 ಮಂದಿಗೆ 

ಕೊರೋನಾ



ಕುಂಭ ಮೇಳ ಉತ್ಸವದಲ್ಲಿ ಪಾಲ್ಗೊಂಡಿದ್ದ 1,700ಕ್ಕೂ

ಅಧಿಕ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ

ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 10ರಿಂದ

14ರವರೆಗೆ ಒಟ್ಟು 1,701 ಮಂದಿಗೆ ಸೋಂಕು ತಗುಲಿದೆ.

ಲಕ್ಷಾಂತರ ಜನರು ಮಾಸ್ಕ್ ಧರಿಸದೆ, ಅಂತರವಿಲ್ಲದೆ,

ಒಟ್ಟಿಗೆ ನದಿಯಲ್ಲಿ ಸ್ನಾನ ಮಾಡಿರುವುದು ಹಾಗೂ

ಸಾಲುಗಟ್ಟಿರುವುದು ಸೋಂಕು ಹೆಚ್ಚಾಗಲು ಕಾರಣ ಎಂದು

ಹೇಳಲಾಗಿದೆ. ಸೋಂಕಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ

ಸಾಧ್ಯತೆ ಇದೆ.


ಕೊರೋನಾ ಪಾಸಿಟಿವ್ ಬಂದಿದ್ದಕ್ಕೆ ವ್ಯಕ್ತಿ

ನೇಣಿಗೆ ಶರಣು














ಕೊರೋನಾ ಪಾಸಿಟಿವ್ ಬಂದಿದೆ ಎಂಬ ವಿಷಯ

ತಿಳಿಯುತ್ತಿದ್ದಂತೆ ವ್ಯಕ್ತಿಯೋರ್ವ ತಮ್ಮ ಮನೆಯಲ್ಲೇ

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

ದುರ್ಘಟನೆ ಇಂದು ನಡೆದಿದೆ. ಮೃತನನ್ನು 35 ವರ್ಷದ

ಶಿವಲಿಂಗಯ್ಯ ಎಂದು ಹೇಳಲಾಗಿದ್ದು, ಬೆಂಗಳೂರು ಉತ್ತರ

ತಾಲೂಕಿನ ಹುಣಸಮಾರನಹಳ್ಳಿ ನಿವಾಸಿಯಾಗಿದ್ದಾನೆ.

ಮೂಲಗಳ ಪ್ರಕಾರ, ಸೋಂಕಿನ ಭಯ ಇದ್ದ ಹಿನ್ನೆಲೆಯಲ್ಲಿ

ಮೃತ ವ್ಯಕ್ತಿ 2 ದಿನಗಳ ಹಿಂದೆ ಸ್ಯಾಂಪಲ್ ನೀಡಿದ್ದ. ವರದಿ

ಇಂದು ಬಂದಿದ್ದು, ಸೋಂಕು ದೃಢಪಟ್ಟಿತ್ತು ಎಂಬ ಮಾಹಿತಿ

ಲಭ್ಯವಾಗಿದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು