ವಿಡಿಯೋ ಮಾಡಿ ಅಳಲು ತೋಡಿಕೊಂಡ ಕೊರೋನಾ ಸೋಂಕಿತ !ಕೊರೋನಾ ಅಬ್ಬರ: ಚಿತಾಗಾರದ ಎದುರು ಶವಗಳ ಸಾಲು ! ದೇಶದಲ್ಲಿ ಕೊರೋನಾ ಮಹಾಸ್ಫೋಟ

 





ಬೀದರ್ ನ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ

ಕೊರೋನಾ ಸೋಂಕಿತನೋರ್ವ ವಿಡಿಯೋ ಮಾಡಿ

ಅಳಲು ತೋಡಿಕೊಂಡಿದ್ದಾನೆ. ಹೌದು, ಚಿಕಿತ್ಸೆ ಕೊಡುತ್ತೇವೆ

ಎಂದು ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಮಗೆ

ಇಲ್ಲಿ ಉಪಹಾರವನ್ನೇ ಸರಿಯಾಗಿ ಕೊಡುತ್ತಿಲ್ಲ. ನಾವು

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದೇವೆ. ನಮಗೆ

ಲಸಿಕೆ ನೀಡಿ ಎಂದರೂ ಮೇಲ್ವಿಚಾರಕರನ್ನು ಕೇಳಿ ಎಂದು

ಸಬೂಬು ಹೇಳುತ್ತಿದ್ದಾರೆ ಎಂದು ಸೋಂಕಿತ ಗಂಭೀರ

ಆರೋಪ ಮಾಡಿದ್ದಾನೆ.


ಕೊರೋನಾ ಅಬ್ಬರ: ಚಿತಾಗಾರದ 

ಎದುರು ಶವಗಳ  ಸಾಲು ! 







ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಾವಿನ

ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಗರದ

ಚಿತಾಗಾರಗಳ ಮುಂದೆ ಶವಗಳ ವಾಹನ ಸಾಲುಗಟ್ಟಿ

ನಿಂತಿವೆ. ಕೊರೋನಾ ಸೋಂಕಿನಿಂದ ಪ್ರತಿನಿತ್ಯ 50 ರಿಂದ

60 ಜನ ಸಾವನ್ನಪ್ಪುತ್ತಿದ್ದು, ನಗರದಲ್ಲಿ 5 ಚಿತಾಗಾರಗಳಲ್ಲಿ

ಕೊರೋನಾ ಸೋಂಕಿತರ ಶವಗಳ ಅಂತ್ಯಕ್ರಿಯೆ

ನಡೆಸಲಾಗುತ್ತಿದೆ. ಇನ್ನು, ಬೆಂಗಳೂರು ನಗರದಲ್ಲಿ

ಬುಧವಾರ ಒಂದೇ ದಿನ 8155 ಹೊಸ ಕೊರೋನಾ

ಪ್ರಕರಣಗಳು ದೃಢಪಟ್ಟಿದ್ದು, 23 ಮಂದಿ ಮೃತಪಟ್ಟಿದ್ದಾರೆ.


ದೇಶದಲ್ಲಿ ಕೊರೋನಾ ಮಹಾಸ್ಫೋಟ




ದೇಶದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೆ

ಹೆಚ್ಚಾಗುತ್ತಿದ್ದು, ಒಂದೇ ದಿನದಲ್ಲಿ 2 ಲಕ್ಷಕ್ಕೂ ಅಧಿಕ

ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ

2,00,739 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು

ಒಂದೇ ದಿನದಲ್ಲಿ ವರದಿಯಾದ ಈವರೆಗಿನ ಅತ್ಯಧಿಕ

ಸಂಖ್ಯೆಯಾಗಿದೆ. ಇದೇ ಅವಧಿಯಲ್ಲಿ 1,038 ಜನರು

ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 1,73,123ಕ್ಕೆ

ಏರಿಕೆಯಾಗಿದೆ. ಇನ್ನು, ಒಟ್ಟು ಪ್ರಕರಣಗಳ ಸಂಖ್ಯೆ

1,40,74,564ಕ್ಕೆ ತಲುಪಿದೆ.




Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು