ಬಿಗ್ ಅಲರ್ಟ್: ಬಿ ಕೇರ್ ಫುಲ್.. ! ಹುಷಾರ್: ರೂಪಾಂತರಿ ವೈರಸ್‌ನಿಂದ ಕಣ್ಣು, ಕಿವಿಗೆ ಡೇಂಜರ್.

 


ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ 2

ಅಲೆ ಅಬ್ಬರ ಜೋರಾಗುತ್ತಿದ್ದು, ಒಂದೇ ದಿನದಲ್ಲಿ ಕೋವಿಡ್

ಪ್ರಕರಣ ಸಂಖ್ಯೆ 2 ಲಕ್ಷ ಗಡಿ ದಾಟಿದೆ. ಮುಂದಿನ 6

ವಾರಗಳಲ್ಲಿ ಸೋಂಕಿನ ತೀವ್ರತೆಯು ಮತ್ತಷ್ಟು ಹೆಚ್ಚಾಗುವ

ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ,

ಕೊರೋನಾವನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳಬೇಡಿ.

ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ. ಮಾಸ್ಕ್ ಧರಿಸಿ,

ಭೌತಿಕ ಅಂತರ ಕಾಪಾಡಿಕೊಳ್ಳಿ. ಎಚ್ಚರ ತಪ್ಪಿದರೆ, ಭಾರೀ

ಬೆಲೆ ತೆರಬೇಕಾಗುತ್ತದೆ. ಸೋ.. ಬಿ ಕೇರ್ ಫುಲ್.


ಹುಷಾರ್: ರೂಪಾಂತರಿ ವೈರಸ್‌ನಿಂದ ಕಣ್ಣು, ಕಿವಿಗೆ
ಡೇಂಜರ್



ರೂಪಾಂತರಿ ಕೊರೋನಾ ವೈರಸ್‌ನಿಂದ ಮಾನವನ

ದೇಹದ ಮೇಲೆ ಅತ್ಯಂತ ಕೆಟ್ಟ ದುಷ್ಪರಿಣಾಮಗಳು

ಉಂಟಾಗುತ್ತಿದೆ. ತಜ್ಞರ ಪ್ರಕಾರ, ರೂಪಾಂತರಿ ಕೊರೋನಾ

ವೈರಸ್ ನೇರವಾಗಿ ಕಿವಿ & ಕಣ್ಣಿಗೆ ಹಾನಿ ಮಾಡುತ್ತದೆ.

ಕೆಲವೊಂದು ಪ್ರತಿಷ್ಠಿತ ಆಸ್ಪತ್ರೆಗಳ ವರದಿಗಳ ಪ್ರಕಾರ,

ಕೊರೋನಾ ರೋಗಿಗಳಿಗೆ ಕಿವಿ ಕೇಳಿಸದೆ ಇರುವುದು.

ಮತ್ತೆ ಕೆಲವರಿಗೆ ದೃಷ್ಟಿದೋಷ ಕಂಡು ಬಂದಿದೆ ಎಂದು

ಹೇಳಲಾಗುತ್ತಿದೆ. ಮಾತ್ರವಲ್ಲದೆ, ಕೊರೋನಾ ಈಗ

ದೇಹದ ಇತರ ಅಂಗಾಂಗಗಳಿಗೆ ದಾಳಿ ಮಾಡುತ್ತಿರುವುದು

ಸಾಮಾನ್ಯವಾಗಿದೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು