ಐಪಿಎಲ್ ಫ್ರೀ ಆಗಿ ನೋಡಲು ಹೀಗೆ ಮಾಡಿ? ಇಂಟರ್ನೆಟ್ ಇಲ್ಲದೆಯೂ ಎಲ್ಲಾ ಕೆಲಸ ಮಾಡಿ?
















*ಜಿಯೋ ಗ್ರಾಹಕರಾಗಿದ್ದರೆ ಮಾಸಿಕ 1401 ಯೋಜನೆ ಮತ್ತು 12,599 ವಾರ್ಷಿಕ ಯೋಜನೆಯೊಂದಿಗೆ Hotstar

ಅನ್ನು 1 ವರ್ಷಗಳವರೆಗೆ ಉಚಿತವಾಗಿ ವೀಕ್ಷಿಸಬಹುದು.


* ಏರ್ಟೆಲ್ ಗ್ರಾಹಕರಾದರೆ ನೀವು 1401 ರೀಚಾರ್ಜ್ ಮಾಡಿದರೆ 28 ದಿನ ಹಾಗೂ 399 ರೀಚಾರ್ಜ್ನಿಂದ 1 ವರ್ಷದ Hotstar ಚಂದಾದಾರಿಕೆಯನ್ನು ಉಚಿತವಾಗಿ

ಪಡೆಯಬಹುದು.


* ವೊಡಾಫೋನ್-ಐಡಿಯಾದ #501 ಪ್ರಿಪೇಯ್ ಪ್ಲಾನ್ ಆಯ್ಕೆ ಮಾಡಿದರೆ, 56 ದಿನಗಳ ವ್ಯಾಲಿಡಿಟಿ ಜೊತೆ 75ಜಿಬಿ

ಡೇಟಾ ಹಾಗೂ 1 ವರ್ಷದವರೆಗೆ Hotstar ಚಂದಾದಾರಿಕೆ ಕೂಡ ಇರಲಿದೆ.




ಇಂಟರ್ನೆಟ್ ಇಲ್ಲದೆಯೂ ಎಲ್ಲಾ ಕೆಲಸ ಮಾಡಿ




ಗೂಗಲ್ WifiNanScan ಎನ್ನುವ ವಿಶೇಷ ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ ಇಂಟರ್ನೆಟ್ ಹಾಗೂ ಬ್ಲೂ ಟೂಥ್ ಸಂಪರ್ಕ ಇಲ್ಲದೆಯೂ ಡಿವೈಸಸ್‌ಗಳನ್ನು ಕನೆಕ್ಟ್ ಮಾಡಬಹುದು.


ಅಂದರೆ ನಿಮ್ಮ ಫೋನ್‌ನಲ್ಲಿ ನೆಟ್ವರ್ಕ್ ಇಲ್ಲದೆ ಇದ್ದರೂ ಕೂಡ ವೈಫೈ ಸಂಬಂಧಿತ ಎಲ್ಲ ಕಾರ್ಯಗಳನ್ನು ನೀವು ಮಾಡಬಹುದು. WifiNanScan ಆ್ಯಪ್ ಸಹಾಯದಿಂದ, ಇಂಟರ್ನೆಟ್ ಸಂಪರ್ಕವಿಲ್ಲದೆ ರಸ್ಟೋರೆಂಟ್‌ನಲ್ಲಿ ಸೀಟ್ ಬುಕಿಂಗ್ ಮತ್ತು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಲು ನಿಮಗೆ ಸಾಧ್ಯವಾಗಲಿದೆ

ಎಂದು ಕಂಪನಿ ಹೇಳಿಕೊಂಡಿದೆ.



ನಿತ್ಯ ರಾತ್ರಿ ಇಂಟರ್ನೆಟ್ ಉಚಿತ


ವೊಡಾಫೋನ್-ಐಡಿಯಾ ಬಿನ್ ಆಲ್ ನೈಟ್

ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರಲ್ಲಿ ನೀವು

(819 ರೀಚಾರ್ಜ್ ಮಾಡಿದರೆ 88 ದಿನಗಳವರೆಗೆ

ಮ.12 ಗಂಟೆಯಿಂದ ಬೆ.6ರವರೆಗೆ ಅನಿಯಮಿತ

ಡೇಟಾವನ್ನು ಬಳಸಬಹುದಾಗಿದೆ.


ವಿಶೇಷವೆಂದರೆ,ನೀವು ನಿತ್ಯ ಪಡೆಯುವ 2ಜಿಬಿ ಡೇಟಾವನ್ನು

ಅದು ಕಡಿತಗೊಳಿಸುವುದಿಲ್ಲ. ಸೋಮವಾರದಿಂದ

ಶುಕ್ರವಾರದವರೆಗೆ ಪಡೆದ ಡೇಟಾವನ್ನು ನೀವು

ಬಳಸದಿದ್ದರೆ, ವಾರಾಂತ್ಯದಲ್ಲಿ ನೀವು ಯೋಜನೆಯ

ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಅನಿಯಮಿತ

ಕರೆ ಕೂಡ ಇದರಲ್ಲಿ ನೀಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು