ಮಾಲೀವ್ ನಲ್ಲಿ ಎಂಜಾಯ್ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಸಿದ್ದಿಖಿ ಗರಂ ! ಭಾರತದ ಪರಿಸ್ಥಿತಿಗೆ ಅಮೆರಿಕ ತೀವ್ರ ಕಳವಳ.

ಮಾಲೀವ್ ನಲ್ಲಿ ಎಂಜಾಯ್ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಸಿದ್ದಿಖಿ ಗರಂ



ಕೊರೋನಾ ಸಂಕಷ್ಟದ ವೇಳೆಯೂ ರಜೆಗಳಿಗಾಗಿ

ಮಾಲೀವ್ ತೆರಳುತ್ತಿರುವ ಸೆಲೆಬ್ರಿಟಿಗಳ ವಿರುದ್ಧ

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಆಕ್ರೋಶ

ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ

ಅಭಿಪ್ರಾಯ ವ್ಯಕ್ತಪಡಿಸಿರುವ ನಟ, 'ಇಡೀ ಜಗತ್ತು

ಬಿಕ್ಕಟ್ಟಿನಲ್ಲಿರುವ ಸಮಯದಲ್ಲಿ ಈ ಸೆಲೆಬ್ರಿಟಿಗಳು

ತಮ್ಮ ರಜೆ ದಿನಗಳ ಫೋಟೋಗಳನ್ನು ಸಾಮಾಜಿಕ

ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜನರಿಗೆ

ತಿನ್ನಲು ಆಹಾರವಿಲ್ಲ, ನೀವು ಹಣ ಚೆಲ್ಲುತ್ತಿದ್ದೀರಿ.

ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ.


ಭಾರತದ ಪರಿಸ್ಥಿತಿಗೆ ಅಮೆರಿಕ ತೀವ್ರ ಕಳವಳ



ಕೊರೋನಾದಿಂದಾಗಿ ಭಾರತದಲ್ಲಿ ಎದುರಾಗಿರುವ

ಪರಿಸ್ಥಿತಿಯ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ.

ನಮ್ಮ ಸಹಯೋಗಿ ಭಾರತದೊಂದಿಗೆ ನಾವು

ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲಿ ನಾವು

ಭಾರತೀಯರು, ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ

ಸಹಾಯ ನೀಡಲಿದ್ದೇವೆ ಎಂದು ಅಮೆರಿಕದ ವಿದೇಶಾಂಗ

ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್‌ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಲಸಿಕೆ ಅಭಿಯಾನ ವೇಗವಾಗಿ

ನಡೆಯಬೇಕಾದರೆ, ಅಮೆರಿಕ ಲಸಿಕೆ ತಯಾರಿಕೆಯ ಅಗತ್ಯ

ವಸ್ತುಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕಾಗಿದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು