ಮಗನ ಮುಂದೆ ಬೆತ್ತಲೆ ಫೋಸ್ ನೀಡಿದ ನಟಿ !
ಏಳು ವರ್ಷದ ಮಗನ ಮುಂದೆ ಬೆತ್ತಲೆಯಾಗಿ ಫೋಸ್
ನೀಡಿದ ಘಾನಾದ ನಟಿ ರೋಸ್ಕಂಡ್ ಬ್ರೌನ್‌ಗೆ ಅಲ್ಲಿನ
ನ್ಯಾಯಾಲಯ 3 ತಿಂಗಳು ಜೈಲು ಶಿಕ್ಷೆ ಪ್ರಕಟಿಸಿದೆ.
ತನ್ನ 7 ವರ್ಷದ ಮಗನ ಹುಟ್ಟುಹಬ್ಬದಂದು ಆತನ
ಕೈ ಹಿಡಿದುಕೊಂಡು ಎದುರಲ್ಲಿ ಕುಳಿತಿರುವ ನಟಿ
ಸಂಪೂರ್ಣವಾಗಿ ಬೆತ್ತಲಾಗಿದ್ದರು. ಈ ಫೋಟೋವನ್ನು
ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಬಳಿಕ
ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಬೆತ್ತಲೆ ಫೋಸ್
ಫೋಟೋ ಕುರಿತು ವಿಚಾರಣೆ ನಡೆಸಿದ ಕೋರ್ಟ್ ನಟಿಗೆ 90
ದಿನಗಳ ಕಾಲ ಜೈಲು ಶಿಕ್ಷೆ ಘೋಷಿಸಿದೆ.
ಖ್ಯಾತ ಸಂಗೀತನಿರ್ದೇಶಕ
ಕೊರೋನಾಗೆ ಬಲಿ
ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ
ತುತ್ತಾಗಿದ್ದ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್
ರಾಥೋಡ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶ್ರವಣ್
ರಾಥೋಡ್‌ಗೆ ಕೊರೋನಾ ತಗುಲಿದ ನಂತರ ತೀವ್ರ
ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ
ಅವರನ್ನು ಐಸಿಯುನಲ್ಲಿ ಇರಿಸಿ, ವೆಂಟಿಲೇಟರ್ ಮೂಲಕ
ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಮಧುಮೇಹದಿಂದ
ಮತ್ತಷ್ಟು ಆರೋಗ್ಯ ಹದಗೆಟ್ಟು ಅವರು ಸಾವನ್ನಪ್ಪಿದ್ದಾರೆ.
0 ಕಾಮೆಂಟ್‌ಗಳು
hrithiksuraj2@gmail.com