IPL 2021: ಕೊಹ್ಲಿ ಬಳಗಕ್ಕೆ ಚಾಂಪಿಯನ್ ರೋಹಿತ್ ಪಡೆ ಸವಾಲು ! ಪರ್ಪಲ್, ಆರೆಂಜ್ ಕ್ಯಾಪ್ ಗೆದ್ದ ಭಾರತೀಯರು ! ಈ ಐಪಿಎಲ್‌ನ ವಿಶೇಷ..

 


ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ IPL ಇಂದಿನಿಂದ

ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ

ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆರ್

ಸಿಬಿ ತಂಡವನ್ನು ಎದುರಿಸಲಿದೆ. ಬಲಿಷ್ಠ ಮುಂಬೈ ತಂಡಕ್ಕೆ

ಸೆಡ್ಡು ಹೊಡೆಯಲು ವಿರಾಟ್ ಬಳಗ ಸಿದ್ಧವಾಗಿದೆ. ಇನ್ನು

2 ತಂಡಗಳು ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು,

ಮುಂಬೈ 17 ಪಂದ್ಯಗಳಲ್ಲಿ ಹಾಗೂ ಆರ್‌ಸಿಬಿ 10

ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉದ್ಘಾಟನಾ

ಪಂದ್ಯವು ಚೆಪಾಕ್ ಕ್ರೀಡಾಂಗಣದಲ್ಲಿ ಸಂಜೆ 7:30ರಿಂದ

ಪ್ರಾರಂಭಗೊಳ್ಳಲಿದೆ.


ಪರ್ಪಲ್, ಆರೆಂಜ್ ಕ್ಯಾಪ್ ಗೆದ್ದ ಭಾರತೀಯರು



ಆರೇಂಜ್ ಕ್ಯಾಪ್ ವಿನ್ನರ್ : 2010 ಸಚಿನ್ ತೆಂಡುಲ್ಕರ್

(618), 2014 ರಾಬಿನ್ ಉತ್ತಪ್ಪ (660), 2016 ವಿರಾಟ್

ಕೊಹ್ಲಿ (973), 2020 ಕೆ.ಎಲ್. ರಾಹುಲ್ (670),

ಪರ್ಪಲ್ ಕ್ಯಾಪ್ ವಿನ್ನರ್: 2009 ಆರ್.ಪಿ. ಸಿಂಗ್ (23),

2010 ಪ್ರಗ್ಯಾನ್ ಓಜಾ (21), 2014 ಮೋಹಿತ್ ಶರ್ಮ

(23), 2016 ಭುವನೇಶ್ವರ್ ಕುಮಾರ್ (23), 2017

ಭುವನೇಶ್ವರ್ ಕುಮಾರ್ (26).


ಈ ಐಪಿಎಲ್‌ನ ವಿಶೇಷ..




ಇಂದಿನಿಂದ ಐಪಿಎಲ್ ಆರಂಭವಾಗಲಿದ್ದು, ಈ ಬಾರಿ ಕೂಡ

ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ. ಟೂರ್ನಿಯಲ್ಲಿ

ಮೊದಲ ಬಾರಿಗೆ ಇಬ್ಬರು ಆಟಗಾರರು ನಾಯಕತ್ವವನ್ನು

ವಹಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಗೆ ರಿಷಬ್

ಪಂತ್ ನಾಯಕನಾಗಿದ್ದರೆ, ರಾಜಸ್ಥಾನ ರಾಯಲ್ಸ್ ನ

ಜವಾಬ್ದಾರಿಯನ್ನು ಸಂಜು ಸ್ಯಾಮೃನ್ ಹೊತ್ತಿದ್ದಾರೆ. ಈ

ಬಾರಿ ಐಪಿಎಲ್ ತಂಡಗಳ ಎಂಟು ನಾಯಕರಲ್ಲಿ ನಾಲ್ಕು

ವಿಕೆಟ್ ಕೀಪರ್‌ಗಳು (ಪಂತ್, ಸ್ಯಾಮೃನ್, ಧೋನಿ,

ಕೆಎಲ್ ರಾಹುಲ್) ಸೇರಿದ್ದಾರೆ ಎಂಬುದು ಮತ್ತೊಂದು

ವಿಶೇಷವಾಗಿದೆ.





Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು