ಕೊರೋನಾ ಕರ್ಪ್ಯೂ ಜಾರಿ ಅವೈಜ್ಞಾನಿಕ: ಡಿಕೆಶಿ ಕಿಡಿ ! ಕುಚೇಷ್ಟೆ ಮಾಡಿದ್ರೆ ಬೀಳುತ್ತೆ ಕೇಸ್‌!

 


ರಾತ್ರಿ ಓಡಾಡಿದರೆ ಕೊರೋನಾ ಬರುತ್ತದೆ. ಹಗಲಿನಲ್ಲಿ ಬರಲ್ಲ ಎಂದು ಯಾವ ವಿಜ್ಞಾನಿಗಳು ಹೇಳಿದರು ಎಂದು ಸರ್ಕಾರದ ನೈಟ್ ಕರ್ಪ್ಯೂ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ರಾಜಕೀಯ ಸಭೆಗಳಿಗೆ ಎಲ್ಲೇ ಹೋದರೂ ಜನ ಸೇರುತ್ತಾರೆ. 

ಬಿಜೆಪಿ ನಾಯಕರು ಜನರನ್ನು ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ.

 ರಾತ್ರಿ ಪ್ರಯಾಣ ನಿಲ್ಲಿಸಿಬಿಡ್ತೀರಾ? ಬೆಳಕಿದ್ದಾಗ ಓಡಾಡಲ್ವಾ? ಸರ್ಕಾರ ನೈಟ್ ಕರ್ಪ್ಯೂ ಜಾರಿ ಮಾಡಿದ್ದು ಅವೈಜ್ಞಾನಿಕ ಎಂದು ಆರೋಪಿಸಿದರು.


ಕುಚೇಷ್ಟೆ ಮಾಡಿದ್ರೆ ಬೀಳುತ್ತೆ ಕೇಸ್‌!

ಇಂದಿನಿಂದ ಬೆಂಗಳೂರು ನಗರದಲ್ಲಿ ಕರ್ಪ್ಯೂ ಜಾರಿಯಾಗಿದ್ದು, ರಾತ್ರಿ 10 ಗಂಟೆಯ ಬಳಿಕ ಯಾರೂ ಅನಾವಶ್ಯಕವಾಗಿ ಓಡಾಡುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. 

ರಾತ್ರಿ 9 ಗಂಟೆಯಿಂದಲೇ ಕರ್ಪ್ಯೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.10 ಗಂಟೆಯ ಒಳಗೆ ಎಲ್ಲವೂ ಕ್ಲೋಸ್ ಮಾಡಿ ಮನೆಗಳಿಗೆ ತೆರಳಿರಬೇಕು. 

ಯಾರು ಕೂಡ ರಸ್ತೆಗಿಳಿದು ಕುಚೇಷ್ಟೆ ಮಾಡುವಂತಿಲ್ಲ. 

ಮಾಡಿದರೆ ಕೇಸ್ ಹಾಕಿ ಒಳಗೆ ಹಾಕುತ್ತೇವೆ. 

ಆಮೇಲೆ ಅದು ಇದು ಅಂತ ಕೇಳುವಂತಿಲ್ಲ ಎಂದು ಎಚ್ಚರಿಸಿದ್ದಾರೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು