18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ ಸ್ವಾತಂತ್ರ್ಯವಿದೆ: ಕೋರ್ಟ್. "ಲಸಿಕೆ ರಫ್ತು ನಿಲ್ಲಿಸಿ"

 'ಲಸಿಕೆ ರಫ್ತು ನಿಲ್ಲಿಸಿ"

'ಲಸಿಕೆ ರಫ್ತು ಮಾಡುವುದನ್ನು ನಿಲ್ಲಿಸಿ' ಎಂದು ಕೇಂದ್ರ

ಸರ್ಕಾರವನ್ನು ಆಗ್ರಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್

ಗಾಂಧಿ, 'ಕೊರೋನಾ ಸಂಕಷ್ಟ ಕಾಲದಲ್ಲಿ ಲಸಿಕೆ ಕೊರತೆ

ಬಹಳ ಗಂಭೀರ ಸಮಸ್ಯೆಯಾಗಿದೆ. ಇದು ಆಚರಣೆಯಲ್ಲ'

ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು,

'ಲಸಿಕೆ ರಫ್ತು ಮಾಡಿ ನಮ್ಮ ದೇಶವಾಸಿಗಳನ್ನು ಅಪಾಯಕ್ಕೆ

ಸಿಲುಕಿಸುವುದು ಸರಿಯೇ? ಯಾವುದೇ ಪಕ್ಷಪಾತವಿಲ್ಲದೆ

ಎಲ್ಲ ರಾಜ್ಯಗಳಿಗೂ ಸಹಾಯ ಮಾಡಲು ಮತ್ತು ಹೆಚ್ಚಿನ

ಲಸಿಕೆಯನ್ನು ಪೂರೈಸಿ' ಎಂದು ಹೇಳಿದ್ದಾರೆ.


18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ

ಸ್ವಾತಂತ್ರ್ಯವಿದೆ: ಕೋರ್ಟ್




18 ವರ್ಷ ದಾಟಿದ ಜನರು ತಾವು ಬಯಸಿದ ಧರ್ಮವನ್ನು

ಅನುಸರಿಸುವ ಆಯ್ಕೆ ಮಾಡುವುದನ್ನು ತಡೆಯಲು

ಯಾವುದೇ ಕಾರಣ ಇಲ್ಲ ಎಂದು ಸುಪ್ರೀಂಕೋರ್ಟ್

ಹೇಳಿದೆ. ಧಾರ್ಮಿಕ ಮತಾಂತರ ಮತ್ತು ಮಂತ್ರವಾದಗಳನ್ನು

ನಿಷೇಧಿಸುವಂತೆ ಕೋರಿ ಬಿಜೆಪಿ ಮುಖಂಡ, ವಕೀಲ ಅಶ್ವಿನಿ

ಉಪಾಧ್ಯಾಯ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇದು

ಸಾರ್ವಜನಿಕ ಹಿತಾಸಕ್ತಿ ಬದಲಾಗಿ (ಪ್ರಚಾರ) ಇಂಟರೆಸ್ಟ್

ಲಿಟಗೇಷನ್ ಎಂದು ವ್ಯಾಖ್ಯಾನಿಸಿ ಅರ್ಜಿಯನ್ನು

ವಜಾಗೊಳಿಸಿದೆ.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು