ಪ್ರತಿ ಓವರ್‌ನಲ್ಲಿ 2 ಬೌನ್ಸರ್ ಸೂಕ್ತ: ಗವಾಸ್ಕರ್
ಟಿ20 ಸ್ವರೂಪದ ನಿಯಮಗಳ ಬದಲಾವಣೆ ಕುರಿತು
ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಧ್ವನಿ ಎತ್ತಿದ್ದಾರೆ.
'ಟಿ20 ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳಿಗೆ ಸಂಪೂರ್ಣವಾಗಿ
ಸೂಕ್ತವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಬ್ಯಾಲೆನ್ಸ್‌ಗಾಗಿ
ಪ್ರತಿ ಓವರ್‌ನಲ್ಲಿ 2 ಬೌನ್ಸರ್‌ಗಳನ್ನು ಅನುಮತಿಸಬೇಕು.
ಬೌಂಡರಿ ಗಾತ್ರವನ್ನು ವಿಸ್ತರಿಸಬೇಕು. ತನ್ನ ಮೊದಲ
3 ಓವರ್‌ಗಳಲ್ಲಿ ವಿಕೆಟ್ ಪಡೆದ ಬೌಲರ್‌ಗೆ ಹೆಚ್ಚುವರಿ
ಓವರ್‌ಗಳನ್ನು ಬೌಲ್ ಮಾಡಲು ಅವಕಾಶ ನೀಡಬೇಕು
ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
ವೇಗದ ಅರ್ಧ ಶತಕ: ಪೂರನ್ ದಾಖಲೆ
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಿಕೋಲಸ್ ಪೂರನ್
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಿನ್ನೆ
ನಡೆದ ಪಂದ್ಯದಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ
ಬರೆದಿದ್ದಾರೆ. ಇದು ಐಪಿಎಲ್ 2020ನಲ್ಲಿ ದಾಖಲಾದ
ಪೂರನ್ ಅವರು 50ರನ್ ಗಡಿ ದಾಟಿದರು. ಈ ಮೂಲಕ
ಪಂಜಾಬ್ ಪರ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ
ಎರಡನೇ ಆಟಗಾರ ಎನಿಸಿಕೊಂಡರು, ಪಂಜಾಬ್ ಪರ ಅತಿ
ವೇಗದ ಅರ್ಧಶತಕದ ದಾಖಲೆ ನಾಯಕ ಕೆಎಲ್ ರಾಹುಲ್
ಹೆಸರಿನಲ್ಲಿದೆ (2018ರಲ್ಲಿ-14ಎಸೆತ).
ಕೆಎಕ್ಸ್‌ಐಪಿ (ಚೆಂಡುಗಳು) ಗಾಗಿ ವೇಗವಾಗಿ ಐಪಿಎಲ್ ಅರ್ಧಶತಕ
14 ಕೆಎಲ್ ರಾಹುಲ್ ವರ್ಸಸ್ ಡಿಡಿ 2018
17 ಎನ್ POORAN vs SRH 2020 *
19 ಕೆಎಲ್ ರಾಹುಲ್ vs ಸಿಎಸ್ಕೆ 2019
19 ಡಿ ಮಿಲ್ಲರ್ vs ಆರ್ಆರ್ 2014
ಒಟ್ಟಾರೆಯಾಗಿ, ಇದು ಐಪಿಎಲ್ ಇತಿಹಾಸದಲ್ಲಿ 9 ನೇ ಅತಿ ವೇಗದ ಐವತ್ತು.
ಇಂದು ಡೆಲ್ಲಿ-ರಾಜಸ್ತಾನ್ ಮುಖಾಮುಖಿ
ಐಪಿಎಲ್: ಶಾರ್ಜಾ ಕ್ರೀಡಾಂಗಣದಲ್ಲಿ ಶುಕ್ರವಾರ ಸ್ಟೀವನ್
ಸ್ಮಿತ್ ಬಳಗವು ಶ್ರೇಯಸ್ ಅಯ್ಯರ್ ನಾಯಕತ್ವದ
ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಕಳೆದ
ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸುವ
ಮೂಲಕ ರಾಜಸ್ತಾನ್ ತಂಡ ಒತ್ತಡದಲ್ಲಿದ್ದು, ತನ್ನ
ನೆಚ್ಚಿನ ಕ್ರೀಡಾಂಗಣದಲ್ಲಿ ಗೆಲುವಿನ ಲಯಕ್ಕೆ ಮರಳುವ
ವಿಶ್ವಾಸದಲ್ಲಿದೆ. ಇನ್ನು ಅಂಕಪಟ್ಟಿಯಲ್ಲಿ ಎರಡನೇ
ಸ್ಥಾನದಲ್ಲಿರುವ ಡೆಲ್ಲಿ ಬಲಿಷ್ಠವಾಗಿದ್ದು, ಆಡಿದ ಐದು
ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಒಂದರಲ್ಲಿ ಮಾತ್ರ
ಸೋತಿದೆ.
ಐಪಿಎಲ್-2020: ಈವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು.
1. ಕೆ.ಎಲ್. ರಾಹುಲ್, ಪಂಜಾಬ್ - 302 ರನ್.
(5 ಇನ್ನಿಂಗ್ಸ್)
2. ಫಾಫ್ ಡುಪ್ಲೆಸಿಸ್, ಚೆನ್ನೈ - 299 ರನ್(6 ಇನ್ನಿಂಗ್ಸ್)
3. ಮಯಾಂಕ್ ಅಗರ್ವಾಲ್, ಪಂಜಾಬ್ - 272 ರನ್ (5 ಇನ್ನಿಂಗ್ಸ್)
4. ರೋಹಿತ್ ಶರ್ಮಾ, ಮುಂಬೈ - 211 ರನ್(6 ಇನ್ನಿಂಗ್ಸ್)
5. ಶೇನ್ ವಾಟ್ಸನ್, ಚೆನ್ನೈ - 185 ರನ್(6 ಇನ್ನಿಂಗ್ಸ್)
6. ಶ್ರೇಯಸ್ ಅಯ್ಯರ್, ಡೆಲ್ಲಿ - 174 ರನ್(5 ಇನ್ನಿಂಗ್ಸ್)
7. ಸೂರ್ಯಕುಮಾರ್ ಯಾದವ್, ಮುಂಬೈ - 171 ರನ್(6 ಇನ್ನಿಂಗ್ಸ್)
0 ಕಾಮೆಂಟ್‌ಗಳು
hrithiksuraj2@gmail.com