ರಾಮ್ ವಿಲಾಸ್ ಪಾಸ್ವಾನ್ ಅವರ ಅಂತಿಮ ದರ್ಶನ
ಪಡೆದ ಪ್ರಧಾನಿ ಮೋದಿ, ನಡ್ಡಾ
ಕಳೆದ ರಾತ್ರಿ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್
ಪಾಸ್ವಾನ್ ಅವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಯಿಂದ
ಅವರ ನಿವಾಸಕ್ಕೆ ತಂದು ಗಣ್ಯರ ದರ್ಶನಕ್ಕೆ ಇಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ
ನಡ್ಡಾ ಅವರಿಂದು ಬೆಳಗ್ಗೆ ಪಾಸ್ವಾನ್ ಅವರ ನಿವಾಸಕ್ಕೆ
ತೆರಳಿ ಅಂತಿಮ ದರ್ಶನ ಪಡೆದರು. ಇನ್ನು, ಪಾಸ್ವಾನ್
ನಿಧನದ ಹಿನ್ನೆಲೆ ರಾಷ್ಟ್ರಪತಿ ಭವನ, ಸಂಸತ್ತು ಸೇರಿದಂತೆ
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು
ಅರ್ಧಮಟ್ಟಕ್ಕೆ ಇಳಿಸಿ ಶೋಕಾಚರಣೆ ಮಾಡಲಾಗಿದೆ.
ಒಂದಿಲ್ಲ ಒಂದು ದಿನ ನನ್ನ ಮಗ ಚಿರಾಗ್ ಬಿಹಾರದ
ಮುಖ್ಯಮಂತ್ರಿ ಹುದ್ದೆಗೇರುವುದನ್ನು ನೋಡಬೇಕು.
ಇನ್ನು 2 ಅಥವಾ ಮುಂದಿನ 20- 25 ವರ್ಷಗಳ
ಬಳಿಕ ಅದು ಈಡೇರಬಹುದೇನೋ ದೇಶದ ಪ್ರಮುಖ
ನಾಯಕರ ಸಾಲಿನಲ್ಲಿ ಆತ ಪರಿಗಣಿತನಾಗಬೇಕು ಎಂದು ಸಂದರ್ಶನವೊಂದರಲ್ಲಿ ರಾಂ ವಿಲಾಸ್ ಪಾಸ್ವಾನ್
ಹೇಳಿದ್ದರು. ಆದ್ರೆ ತಂದೆಯೊಬ್ಬರು ಪುತ್ರನ ಬಗ್ಗೆ ಕಟ್ಟಿದ
ಕನಸು ಈಡೇರಲಿಲ್ಲ. ಪಾಸ್ವಾನ್ ಅವರು 2000ನೇ
ಇಸವಿಯಲ್ಲಿ ಲೋಕಜನಶಕ್ತಿ ಪಕ್ಷ ಸ್ಥಾಪಿಸಿದರು.
ಬಿಹಾರದ ಅತಿ ಎತ್ತರದ ದಲಿತ ನಾಯಕರಲ್ಲಿ ಒಬ್ಬರು ಮತ್ತು ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು.
0 ಕಾಮೆಂಟ್‌ಗಳು
hrithiksuraj2@gmail.com