ಎಸ್.ಎಲ್ ಭೈರಪ್ಪ
ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಈ
ಸಮಯದಲ್ಲಿ ದಸರಾ ಉದ್ಘಾಟನಾ ಸಮಾರಂಭಕ್ಕೆ 200
ಜನರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು
ಸಾಹಿತಿ ಎಸ್.ಎಲ್ ಭೈರಪ್ಪ ಹೇಳಿದ್ದಾರೆ. ಈ ಕುರಿತು
ಮಾತನಾಡಿರುವ ಅವರು, ಜನರು ಅವರವರ ಮನೆಯಲ್ಲಿ
ಪೂಜೆ ಮಾಡಿಕೊಳ್ಳಲಿ. ಅರಮನೆಯವರು ಅವರ ಪಾಡಿಗೆ
ಜಂಬೂ ಸವಾರಿ ನಡೆಸಲಿ, ಆನೆಯ ಮೇಲೆ ಅಂಬಾರಿ
ಇಟ್ಟು ಮೆರವಣಿಗೆ ನಡೆಸುವ ಕೆಲಸವನ್ನು ಮಾವುತರು
ಮಾಡುತ್ತಾರೆ. ಜನರನ್ನು ಸೇರಿಸುವುದು ಏಕೆ ಎಂದು
ಎಸ್.ಎಲ್ ಭೈರಪ್ಪ ಪ್ರಶ್ನೆ ಮಾಡಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಬಗ್ಗೆ ಕಿರು ಪರಿಚಯ
ವಿಜಯನಗರ ಸಾಮ್ರಾಜ್ಯವನ್ನು ಸಂಗಮನ ಪುತ್ರರಾದ
ಹರಿಹರ, ಬುಕ್ಕರಾಯ, ಕಂಪನ, ಮಾರಪ್ಪ, ಮುದ್ದಪ್ಪ
1336ರಲ್ಲಿ ತುಂಗಭದ್ರಾ ನದಿಯ ದಕ್ಷಿಣ ದಂಡೆ ಮೇಲೆ
ಸ್ಥಾಪಿಸಿದರು. ಇವರ ರಾಜಧಾನಿ ಹಂಪೆ, ವರಾಹ
ಲಾಂಛನ, ಸಾಮ್ರಾಜ್ಯವನ್ನು ಸಂಗಮ, ಸಾಳುವ, ತುಳುವ
& ಅರವೀಡು ಎಂಬ 4 ವಂಶಗಳು ಆಳಿದವು. ಸಂಗಮ
ವಂಶಕ್ಕೆ ಸೇರಿದ ಹರಿಹರ ಈ ಸಾಮ್ರಾಜ್ಯದ ಮೊದಲ
ದೊರೆ. ಈ ಸಾಮ್ರಾಜ್ಯ ಪಶ್ಚಿಮದಲ್ಲಿ ಕೊಂಕಣ ತೀರ,
ಪೂರ್ವದಲ್ಲಿ ನೆಲ್ಲೂರು, ಉತ್ತರದಲ್ಲಿ ಕೃಷ್ಣ & ದಕ್ಷಿಣದಲ್ಲಿ
ಕಾವೇರಿ ನದಿವರೆಗೆ ಹಬ್ಬಿತ್ತು.
0 ಕಾಮೆಂಟ್‌ಗಳು
hrithiksuraj2@gmail.com