ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕ್ರೀಡಾ ಜ್ಞಾನ

 


>ಕೊರೋನಾ ಸೋಂಕಿನ ಹಿನ್ನೆಲೆ 2020ರ ಏಷ್ಯಾ ಕಪ್

ಟೂರ್ನಿಯನ್ನು ರದ್ದು ಮಾಡಲಾಗಿತ್ತು.

>ಐಸಿಸಿಯ ಅಂಪೈರ್ ಗಳ ಎಲೈಟ್ ಪ್ಯಾನೆಲ್

ಸೇರಿದ ಕಿರಿಯರು-ಭಾರತದ ನಿತಿನ್ ಮೆನನ್.

>ಇತ್ತೀಚೆಗೆ ಮರೆಯಾದ ಭಾರತೀಯ ಫುಟ್ಬಾಲ್

ಆಟಗಾರ-ಪಿ.ಕೆ.ಬ್ಯಾನರ್ಜಿ.

>ಕ್ರೀಡಾ ವಲಯದ 2020ರ ಪ್ರಭಾವಿ ಮಹಿಳೆಯರ

ಪಟ್ಟಿಯಲ್ಲಿದ್ದ ಭಾರತೀಯೆ-ನೀತಾ ಅಂಬಾನಿ.

>ರಣಜಿ ಟ್ರೋಫಿ-2020 ಗೆದ್ದ ತಂಡ- ಸೌರಾಷ್ಟ್ರ. >ಮಹಿಳಾ

ವಿಶ್ವಕಪ್ ಫೈನಲ್ ನಲ್ಲಿ ಭಾರತವನ್ನು ಆಸ್ಟ್ರೇಲಿಯಾ

ಸೋಲಿಸಿತು.


ಖೇಲ್ ರತ್ನ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?



ಕ್ರೀಡಾ ವಲಯದಲ್ಲಿ ಅದ್ವಿತೀಯ ಸಾಧನೆ ಮಾಡಿದ
ಆಟಗಾರರನ್ನು ಗೌರವಿಸಲು ಭಾರತ ಸರ್ಕಾರವು ಮಾಜಿ
ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ಖೇಲ್ ರತ್ನ ಪ್ರಶಸ್ತಿ
ನೀಡುತ್ತಾ ಬರುತ್ತಿದೆ. ಕ್ರೀಡಾ ಕ್ಷೇತ್ರದ ಈ ಅತ್ಯುನ್ನತ
ಪ್ರಶಸ್ತಿಯನ್ನು ಸರ್ಕಾರವು ಮೊದಲ ಬಾರಿಗೆ 1991-92ನೇ
ಸಾಲಿನಲ್ಲಿ ಚೆಸ್ ಆಟಗಾರ ವಿಶ್ವನಾಥನ್ ಆನಂದ್
ಅವರಿಗೆ ನೀಡಿ ಗೌರವಿಸಿತ್ತು. 2020ನೇ ಸಾಲಿನಲ್ಲಿ ರಾಣಿ
ರಾಂಪಾಲ್, ವಿನೇಶ್ ಫೋಗಟ್‌, ಮಾಣಿಕಾ ಬಾತ್ರಾ,
ಮರಿಯಪ್ಪನ್ ತಂಗವೇಲು & ರೋಹಿತ್ ಶರ್ಮಾ ಅವರಿಗೆ
ನೀಡಿ ಗೌರವಿಸಿದೆ.

ಫ್ರೆಂಚ್ ಓಪನ್: ಐಗಾ ಮುಡಿಗೆ ಪ್ರಶಸ್ತಿ!



ಪೋಲೆಂಡ್‌ನ ಐಗಾ ಸ್ವಾಟೆಕ್ ಅವರು ಫ್ರೆಂಚ್ ಓಪನ್
ಟೂರ್ನಿ ಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ
ಮುಡಿಗೇರಿಸಿಕೊಂಡಿದ್ದಾರೆ. ನಿನ್ನೆ ನಡೆದ ಫೈನಲ್‌ನಲ್ಲಿ
ಅಮೆರಿಕದ ಸೋಫಿಯಾ ಕೆನಿನ್ ಅವರನ್ನು 6-4, 6-1ರಲ್ಲಿ
ಮಣಿಸಿದರು. ಈ ಮೂಲಕ ವಿಶ್ವ ಕ್ರಮಾಂಕದಲ್ಲಿ 54ನೇ
ಸ್ಥಾನದಲ್ಲಿರುವ ಸ್ವಾಟೆಕ್ ಗ್ರಾನ್‌ಸ್ಲಾಂ ಟೂರ್ನಿಯೊಂದರ
ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಪೋಲೆಂಡ್‌ನ ಮೊದಲ
ಆಟಗಾರ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು