ಕೆಕೆಆರ್ ನಾಯಕತ್ವ ತ್ಯಜಿಸಿದ ಕಾರ್ತಿಕ್‌; ಗಂಭೀರ್ ಟೀಟ್ ವೈರಲ್!



ಕಾರ್ತಿಕ್ ಕೆಕೆಆರ್ ತಂಡದ ನಾಯಕತ್ವವನ್ನು 
ತ್ಯಜಿಸಿದ ಕೆಲವೇ ಕ್ಷಣಗಳಲ್ಲಿ ಗೌತಮ್ ಗಂಭೀರ್. ಮಾಡಿರುವ ಟ್ವಿಟ್ ಇದೀಗ ವೈರಲ್ ಆಗಿದೆ.

'ಪರಂಪರೆಯನ್ನು ನಿರ್ಮಿಸಲು ವರ್ಷಗಳನ್ನು
ತೆಗೆದುಕೊಳ್ಳುತ್ತದೆ. ಆದರೆ, ಅದನ್ನು ನಾಶಮಾಡಲು ಒಂದು ನಿಮಿಷ ತೆಗೆದುಕೊಳ್ಳುತ್ತದೆ' ಎಂದು ಮಾರ್ಮಿಕವಾಗಿ ಕೆಕೆಆರ್ ಮಾಜಿ ನಾಯಕ ಟೀಟ್ ಮಾಡಿದ್ದಾರೆ. ಈ ಮೂಲಕ ಗಂಭೀರ್ ಕಾರ್ತಿಕ್‌ಗೆ ಟಾಂಗ್ ಕೊಟ್ರಾ ಅಥವಾ ಫ್ರಾಂಚೈಸಿ ಮಾಲೀಕರನ್ನು ಟೀಕಿಸಿದ್ರಾ? ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಕೆಕೆಆರ್ ನಾಯಕತ್ವ ಹಸ್ತಾಂತರಿಸಿದ ದಿನೇಶ್



ಕಾರ್ತಿಕ್ ಐಪಿಎಲ್ 13ನೇ ಆವೃತ್ತಿಯ ಮಧ್ಯದಲ್ಲಿ ಕ್ರಿಕೆಟಿಗ ದಿನೇಶ್ಕಾರ್ತಿಕ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ಇಂಗ್ಲೆಂಡ್ ನ ಇಯೋನ್ ಮೊರ್ಗನ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾರ್ತಿಕ್, ನನ್ನ ಈ ನಿರ್ಧಾರದಿಂದ ನಾನು ಬ್ಯಾಟಿಂಗ್ ನತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ.
ಎಂದಿದ್ದಾರೆ. ಕೆಕೆಆರ್ ಸದ್ಯ ಪಾಯಿಂಟ್ಸ್ ಟೇಬಲ್ ನಲ್ಲಿ 4ನೇ ಸ್ಥಾನದಲ್ಲಿದ್ದು, ಒಟ್ಟು 7 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದೆ.


ಐಪಿಎಲ್ ಕಾಮೆಂಟರಿ ತ್ಯಜಿಸಿದ್ದಕ್ಕೆ ಕಾರಣ ಹೇಳಿದ
ಕೆವಿನ್ ಪೀಟರ್ಸನ್



ಐಪಿಎಲ್ 13ನೇ ಆವೃತ್ತಿಯಲ್ಲಿ ಕಾಮೆಂಟರಿ ನೀಡುತ್ತಿದ್ದ
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್
ಟೂರ್ನಿ ಮಧ್ಯದಲ್ಲೇ ಕಾಮೆಂಟರಿಯಿಂದ ದೂರ
ಉಳಿದಿದ್ದಾರೆ. ಇದಕ್ಕೆ ಪೀಟರ್ಸನ್ ದ್ವೀಟ್ ಮೂಲಕ
ಕಾರಣ ಹೇಳಿಕೊಂಡಿದ್ದಾರೆ. ಐಪಿಎಲ್ ಅನ್ನು ಅರ್ಧದಲ್ಲೇ
ತ್ಯಜಿಸಿದ್ದೇನೆ ಯಾಕೆಂದರೆ ನನ್ನ ಮಕ್ಕಳಿಗಾಗಿ ನಾನು
ಮನೆಯಲ್ಲಿರಬೇಕಾಗಿದೆ. ಇದೊಂಥರಾ ವಿಚಿತ್ರ
ವರ್ಷ. ಹೀಗಾಗಿ ಅವರಿಗೀಗ ಶಾಲೆಯಿಲ್ಲ. ಆದ್ದರಿಂದ
ಪ್ರತಿದಿನವೂ ನಾನು ಅವರ ಜೊತೆ ಇರಬೇಕಾಗಿದೆ ಎಂದು
ಬರೆದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು