ಧಾರಾಕಾರ ಮಳೆಯಿಂದಾಗಿ ಬೀದರ್‌ನಲ್ಲಿ ಏನಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ!


ಬೀದರ್ : ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಮನೆಗಳ ಕುಸಿತ



ಬೀದರ್: ಜಿಲ್ಲೆಯಲ್ಲಿ 49 ಗಂಟೆಗಳ ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಮೂರು ತಾಲ್ಲೂಕುಗಳಲ್ಲಿ 47 ಮನೆಗಳು ಭಾಗಶಃ ಕುಸಿದಿವೆ. ಔರಾದ್ ತಾಲ್ಲೂಕಿನ ನಾಗನಪಲ್ಲಿ ಸಮೀಪದ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡಿದೆ.
ಮಳೆಯ ಅಬ್ಬರಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ. ಜಿಲ್ಲೆಯ ಬಸವಕಲ್ಯಾಣ, ಹುಮನಾಬಾದ್,ಹುಡುಗಿ, ಔರಾದ್,ಚಿಟಗುಪ್ಪಾ ಗ್ರಾಮಾಂತರದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.


ಭಾಲ್ಕಿ: ತಾಲೂಕಿನಲ್ಲಿಯೇ 10 ಸಾವಿರ ಹೆಕ್ಟೇರ್‌ ಬೆಳೆ



ನಾಶ ಭಾಲ್ಕಿ: ತಾಲ್ಲೂಕಿನಲ್ಲಿ ಎರಡು ದಿನ ಸುರಿದ ಭಾರಿ ಮಳೆಗೆ ಸೋಯಾಬಿನ್, ತೊಗರಿ, ಕಬ್ಬು ಇತರೆ ಬೆಳೆ ಸೇರಿದಂತೆ ಒಟ್ಟು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಒಟ್ಟಾರೆ ಈ ವರ್ಷದ ಅತಿವೃಷ್ಟಿಯಿಂದ 35,659 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ವಿವಿಧ ಬೆಳೆಗಳು ಮಣ್ಣು, ನೀರು ಪಾಲಾಗಿದ್ದು ಅನ್ನದಾತರ ಬದುಕು ಬೀದಿಗೆ ಬರುವಂತೆ ಮಾಡಿದೆ. ಒಟ್ಟಾರೆಯಾಗಿ ಕೇವಲ ಭಾಲ್ಕಿ ತಾಲೂಕಿನಲ್ಲಿಯೆ 10,181ಹೆಕ್ಟರ್ ಬೆಳೆ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜನವಾಡ: ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ



ಜನವಾಡ: ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ
ಬೆಳೆ ಹಾನಿಯ ಸಮೀಕ್ಷೆ ನಡೆಸಿ ರೈತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಶಾಸಕ ಬಂಡೆಪ್ಪ ಕಾಶಂಪೂರ್ ಸರ್ಕಾರವನ್ನು ಆಗ್ರಹಿಸಿದರು. ಮಳೆಯಿಂದಾಗಿ ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಸೇತುವೆ ತುಂಬಿ ಹರಿದು,ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿ ಮಾತನಾಡಿದ ಅವರು ಸತತ ಮಳೆಯಿಂದಾಗಿ,
ಉದ್ದು, ತೊಗರಿ, ಕಬ್ಬು ಸೇರಿದಂತೆ ರೈತರ ಬಹುತೇಕ
ಬೆಳೆಗಳು ನಷ್ಟವಾಗಿವೆ. ಆದ್ದರಿಂದ ಸರ್ಕಾರ ತಕ್ಷಣ
ಪರಿಹಾರ ನೀಡಿಬೇಕೆಂದರು.


97 ಕುಟುಂಬದವರನ್ನು ಬೇರೆಡೆ ಸ್ಥಳಾಂತರಕ್ಕೆ ಡಿಸಿಗೆ
ಮನವಿ 

ಬೀದರ್: ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆ ಹಿನ್ನೆಲೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಅವರು ಇಂದು ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಡಾಕುಳಗಿ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರ ಅಹವಾಲು ಆಲಿಸಿದರು. ಕಾರಂಜಾ ಡ್ಯಾಂನಿಂದಾಗಿ ಮನೆಗಳು ಮುಳುಗಡೆಯಾದ ಬಗ್ಗೆ ಸಮರ್ಪಕ ಪರಿಹಾರ ಸಿಗಬೇಕು


& ಮನೆಗಳು ಮುಳುಗಡೆಯಾಗಿ ತೊಂದರೆಯಲ್ಲಿರುವ 97 ಕುಟುಂಬದವರನ್ನು ಬೇರೆಡೆ ಸ್ಥಳಾಂತರಿಸುವ ಪ್ರಕ್ರಿಯೆಯು ತೀವ್ರಗತಿಯಲ್ಲಿ ನಡೆಯಬೇಕು ಎಂದು ಗ್ರಾಮಸ್ಥರು ಡಿಸಿಗೆ

ಮನವಿ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು