ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ
ಶೂಟಿಂಗ್ ಉಡುಪಿಯ ಕಡಲ ತಟದಲ್ಲಿ ಭರ್ಜರಿಯಾಗಿ
ನಡೆಯುತ್ತಿದೆ. ಜಿಲ್ಲೆಯ ಪಡುಕೆರೆ ಕಡಲಕಿನಾರೆಯಲ್ಲಿ
ಜಬರ್ದಸ್ ಸೀಕ್ವೆನ್ಸ್ಗಾಗಿ ಅದ್ದೂರಿ ಸೆಟ್ ಹಾಕಲಾಗಿದೆ.
ಸದ್ಯ ಕಡಲತಡಿಯಲ್ಲಿ ರಾಕಿ ಭಾಯ್ ಯಶ್ ಹಾಗೂ
ನಿರ್ದೇಶಕ ಪ್ರಶಾಂತ್ ನೀಲ್ ತಂಡವನ್ನು ನೋಡಲು
ನೂರಾರು ಅಭಿಮಾನಿಗಳು ಕಡಲಕಿನಾರೆಗೆ ಆಗಮಿಸಿದ್ದು,
ಸಮುದ್ರತೀರದಲ್ಲಿ ಸುಮಾರು ನೂರು ಮಂದಿ ಬೌನ್ಸರ್‌ಗಳು
ಮೊಬೈಲ್ ಚಿತ್ರೀಕರಣ ನಡೆಸದಂತೆ ತಡೆದಿದ್ದಾರೆ
ಎನ್ನಲಾಗಿದೆ.
'ರುದ್ರಮದೇವಿ'ಗೆ ಐದು ವರ್ಷ!
ಕನ್ನಡತಿ ಅನುಷ್ಕಾ ಶೆಟ್ಟಿ 'ಅರುಂಧತಿ' ಎಂಬ ಹಿಟ್ ಚಿತ್ರದ
ಬಳಿಕ ಕಾಕತೀಯ ಸಾಮ್ರಾಜ್ಯದ ಮಹರಾಣಿಯಾಗಿ
ಮೆರೆದ 'ರುದ್ರಮದೇವಿ' ಚಿತ್ರ ಬಿಡುಗಡೆಯಾಗಿ ಇಂದಿಗೆ
5 ವರ್ಷ. ಟಾಲಿವುಡ್‌ನ ಮೊದಲ 3ಡಿ ಐತಿಹಾಸಿಕ
ಸಿನಿಮಾ ರುದ್ರಮದೇವಿಗೆ ನಿರ್ದೇಶಕ ಗುಣಶೇಖರ್
ಆ್ಯಕ್ಷನ್ ಕಟ್ ಹೇಳಿದ್ದು, ಬಹುಭಾಷಾ ಕಲಾವಿದರಾದ
ರಾಣಾ ದಗ್ಗುಬಾಟಿ, ಅಲ್ಲೂ ಅರ್ಜುನ್, ನಿತ್ಯಾ ಮೆನನ್,
ಕ್ಯಾಥರೀನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ
ಅಭಿನಯಿಸಿದ್ದಾರೆ. ಇನ್ನು, ಈ ಬಗ್ಗೆ ಸ್ವೀಟಿ ಟ್ವಿಟ್‌ನಲ್ಲಿ
ಸಂತಸ ಹಂಚಿಕೊಂಡಿದ್ದಾರೆ.
ಒಟಿಟಿಯಲ್ಲಿ ಮೂಕುತಿ ಅಮ್ಮನ್ ರಿಲೀಸ್!
ನಯನತಾರಾ ಅಭಿನಯದ ಮೂರುತಿ ಅಮ್ಮನ್
ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದೆ. ಮೂಲಗಳ
ಪ್ರಕಾರ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಡಿಸ್ಸಿ ಹಾಟ್‌ಸ್ಟಾರ್ ಸಿನಿಮಾದ ಹಕ್ಕು ಪಡೆದುಕೊಂಡಿದೆ
ಎನ್ನಲಾಗುತ್ತಿದೆ. ಸದ್ಯದಲ್ಲೇ ಸಿನಿತಂಡ ಈ ಚಿತ್ರದ ಬಿಡುಗಡೆ
ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆ.
ಈ ಚಿತ್ರವು ಭೂಮಿಗೆ ಬರುವ ದೇವತೆ ಹಾಗೂ ಸಾಮಾನ್
ಮನುಷ್ಯನ ಸುತ್ತ ನಡೆಯುವ ಕತೆಯಾಗಿದೆ.
0 ಕಾಮೆಂಟ್‌ಗಳು
hrithiksuraj2@gmail.com