ಡ್ರಗ್ಸ್ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯೊಬ್ಬರ
ಸ್ನೇಹಿತ ಎನ್ನಲಾದ ಲೋಕೇಶ್ ಎಂಬುವವರನ್ನು ಸಿಸಿಬಿ
ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಲೋಕೇಶ್
ಕೆಲ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ
ಸಿಕ್ಕಿತ್ತು. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇತ್ತೀಚೆಗೆ
ಲೋಕೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು. ಬೆ.
10.30ಕ್ಕೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ
ವಿಚಾರಣೆಗೆ ಹಾಜರಾದ ಲೋಕೇಶ್, ಪೋಲೀಸರ
ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ್ದಾರೆ.
ಜೈಲಿನಲ್ಲಿ ರಿಯಾ ಚಕ್ರವರ್ತಿ ದಿನಚರಿ ಹೇಗಿತ್ತು?
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಜೈಲಿನಲ್ಲಿ ಹೇಗಿದ್ದರು
ಎಂಬುದನ್ನು ರಿಯಾ ಪರ ವಕೀಲ ಸತೀಶ್ ಮನಶಿಂಧೆ
ರಿವೀಲ್ ಮಾಡಿದ್ದಾರೆ. ಕಕ್ಷಿದಾರ ಅನ್ನೋದಕ್ಕಿಂತ
ಮಹಿಳೆಯಾಗಿ ರಿಯಾ ಜೈಲಿನಲ್ಲಿ ಹೇಗಿದ್ದಾರೆ ಎಂದು
ತಿಳಿದುಕೊಳ್ಳುವುದಕ್ಕೆ ಹೋಗಿದ್ದೆ. ಅಲ್ಲಿ ಸಮತೋಲನ
ಸ್ಥಿತಿಯಲ್ಲಿ ರಿಯಾರನ್ನು ನೋಡಿ ಸಮಾಧಾನ ಆಯ್ತು.
ಜೈಲು ಸೇರಿದ ದಿನದಿಂದಲೇ ರಿಯಾ ಸಕಾರಾತ್ಮಕ
ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕೈದಿಗಳಿಗೆ ರಿಯಾ
ಯೋಗದ ಪಾಠ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
0 ಕಾಮೆಂಟ್‌ಗಳು
hrithiksuraj2@gmail.com