ಚಳಿಗಾಲದಲ್ಲಿ ಕೊರೋನಾ ವೈರಸ್ ಪ್ರಮಾಣ ಹೆಚ್ಚಾಗಲಿದೆ
ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ
ಎಚ್ಚರಿಸಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಕೊರೋನಾ
ಪ್ರಮಾಣವೂ ಹೆಚ್ಚಾಗಲಿದ್ದು, ದೆಹಲಿಯಲ್ಲೇ ದಿನವೊಂದಕ್ಕೆ
15 ಸಾವಿರ ಪ್ರಕರಣಗಳು ವರದಿಯಾಗುವ ಸಾಧ್ಯತೆ
ಇದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಎನ್‌ಸಿಡಿಸಿ ಸಲಹೆ
ನೀಡಿದೆ. ಒಂದು ವರ್ಷ ಸಮೀಪಿಸುತ್ತಿದ್ದರೂ ಈವರೆಗೆ
ಒಂದೇ ಒಂದು ಪರಿಣಾಮಕಾರಿ ಲಸಿಕೆ ಕೊರೋನಾಗೆ
ಸಿಗದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಗಮನಿಸಿ: ಇಂದಿನಿಂದ ರಾಜ್ಯದ ಈ 12 ಜಿಲ್ಲೆಗಳಲ್ಲಿ..
ರಾಜ್ಯದ ಕರಾವಳಿ, ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ
ಅ. 13ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿವಮೊಗ್ಗ,
ಹಾಸನ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ,
ಬೆಂಗಳೂರು ನಗರ, ಕೊಪ್ಪಳ ಹಾವೇರಿ, ಗದಗ, ಧಾರವಾಡ,
ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ
ಮುಂದಿನ ಎರಡು ದಿನ ಗುಡುಗು-ಸಿಡಿಲು ಸಹಿತ
ಮಳೆಯಾಗಲಿದೆ ಎಂದು ಎಚ್ಚರಿಸಲಾಗಿದ್ದು, ಆರೆಂಜ್
ಅಲರ್ಟ್ ಘೋಷಣೆ ಮಾಡಲಾಗಿದೆ.
0 ಕಾಮೆಂಟ್‌ಗಳು
hrithiksuraj2@gmail.com