ವಿದ್ಯಾಗಮಕ್ಕೂ, ಕೊರೋನಾಗೂ ಸಂಬಂಧವಿಲ್ಲ: ಈಶ್ವರಪ್ಪ


ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಮಾತನಾಡಿದ್ದು,ವಿದ್ಯಾಗಮ ಯೋಜನೆಗೂ, ಕೊರೋನಾ ಸೋಂಕಿಗೂಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಶಾಲೆ ಆರಂಭಬೇಡ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಹೀಗಾಗಿ
ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸುತ್ತೇವೆ. ಜನರ ಅಭಿಪ್ರಾಯಕ್ಕಿಂತ ಮೀರಿದ ಸರ್ಕಾರ ನಮ್ಮದಲ್ಲ ಎಂದರು ಓದಲು ಹೆಚ್ಚು ಇಲ್ಲ


ನಮ್ಮ ಜಿಲ್ಲೆಯಲ್ಲಿ ಶಾಲೆ ತೆರೆಯಲು ಬಿಡಲ್ಲ: ರಘು

ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಇಂದು

ಬೆಂಗಳೂರಿನಲ್ಲಿ ಮಾತನಾಡಿದ್ದು, ಚಿತ್ರದುರ್ಗದಲ್ಲಿ

ಶಾಲೆಗಳನ್ನು ಆರಂಭಿಸಲು ನಾವು ಬಿಡುವುದಿಲ್ಲ

ಎಂದಿದ್ದಾರೆ. ಈ ವೇಳೆ, ಮಕ್ಕಳೇ ನಮ್ಮ ದೇಶದ

ಆಸ್ತಿ. ಹಾಗಾಗಿ ನಮ್ಮೆಲ್ಲರಿಗೂ ಅವರ ಆರೋಗ್ಯವೇ

ಮುಖ್ಯವಾಗಬೇಕು. ಸರ್ಕಾರವು ಈ ವರ್ಷ ಶಾಲೆಗಳನ್ನು

ತೆರೆಯಬಾರದು. ಬದಲಾಗಿ ಎಲ್ಲರನ್ನೂ ಪರೀಕ್ಷೆರಹಿತವಾಗಿ

ಪಾಸು ಮಾಡಬೇಕು. ನಾನು ಒಬ್ಬ ಪೋಷಕನಾಗಿ

ಮಾತನಾಡುತ್ತಿದ್ದು, ಮಕ್ಕಳ ಅನಾರೋಗ್ಯಕ್ಕೆ ದಾರಿ

ಮಾಡಿಕೊಡುವ ಶಾಓದಲು ಹೆಚ್ಚು ಇಲ್ಲರು ಬಿಡಲ್ಲ ಎಂದರು.

ವಿದ್ಯಾಗಮದಿಂದ ಕೊರೋನಾಸೋಂಕು:ಪ್ರಿಯಾಂಕ್ ಖರ್ಗೆ



ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು
ಬೆಂಗಳೂರಿನಲ್ಲಿ ಮಾತನಾಡಿದ್ದು, ವಿದ್ಯಾಗಮ
ಕಾರ್ಯಕ್ರಮವು ಕೊರೋನಾ ಸೋಂಕಿಗೆ ಎಡೆ
ಮಾಡಿಕೊಟ್ಟಿದೆ. ಕಾರ್ಯಕ್ರಮದ ಮುಖೇನ ಸರಿಯಾದ
ಶಿಕ್ಷಣ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು
ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರೂ
ಮಾತನಾಡಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳನ್ನು
ಆರಂಭಿಸುವುದು ಬೇಡ. ಶಾಲಾ ಆಡಳಿತ ಮಂಡಳಿಗಳೂ
ಕೂಡ ಇದನ್ನೇ ಹೇಳಿವೆ. ಶಾಲೆಗಳ ಪುನರ್ ಆರಂಭ ಸದ್ಯಕ್ಕೆಬೇಡ ಎಂದಿದ್ದಾರೆ.

ಸದ್ಯಕ್ಕೆ ಶಾಲೆ ಶುರು ಮಾಡುವುದು ಬೇಡ: ಟಿ.ಎನ್
ಸೀತಾರಾಂ



ಒಂದು ವರ್ಷದ ಮಕ್ಕಳಿಗೆ ಪ್ರಮೋಷನ್ ಕೊಟ್ಟರೆ
ನಷ್ಟವೇನಿಲ್ಲ. ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ
ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಸದ್ಯಕ್ಕೆ ಶಾಲೆ ಶುರು
ಮಾಡುವುದು ಬೇಡ ಎಂದು ಖ್ಯಾತ ನಿರ್ದೇಶಕ ಟಿ.ಎನ್
ಸೀತಾರಾಂ ಹೇಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ
ಬರೆದುಕೊಂಡಿರುವ ಅವರು, ಯಾವ ವಾದ ಏನೇ ಇರಲಿ.
ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೋನಾ
ಸಂಬಂಧಿತ ಅಪಾಯವಾದರೆ ಇಡೀ ರಾಜ್ಯದ ಅಂತಃಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸಬೇಕಾಗುತ್ತದೆ
ಎಂದಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು