ಅಸ್ತಮಾಕ್ಕೆ ಮನೆ ಮದ್ದು!
ಅಸ್ತಮಾವನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು.
ಅಷ್ಟೇ ಅಲ್ಲದೆ, ಮನೆಯಲ್ಲೇ ಸಿಗುವ ಕೆಲವು ಆಹಾರ
ಪದಾರ್ಥಗಳಿಂದಲೂ ಅಸ್ತಮಾವನ್ನು ಕಡಿಮೆಯಾಗಿಸಲು
ಸಾಧ್ಯವಿದೆ. ಹೌದು, ತುರಿದ ಮೂಲಂಗಿ, ಜೇನು,
ನಿಂಬೆರಸವನ್ನು ಸೇರಿಸಿ ಕಾಯಿಸಿ ಪ್ರತಿದಿನ ಒಂದು
ಚಮಚ ಸೇವಿಸುತ್ತಾ ಬರುವುದರಿಂದ ಅಸ್ತಮಾ
ನಿವಾರಣೆಯಾಗುತ್ತದೆ. ನೀರಿನೊಂದಿಗೆ ಮೆಂತೆ ಕಾಳನ್ನು
ಬೇಯಿಸಿ ಜೇನು, ಶುಂಠಿ ರಸ ಹಾಕಿ ಬೆರೆಸಿ ಸೇವಿಸಿದರೆ
ಅಸ್ತಮಾ ಕಡಿಮೆಯಾಗಬಹುದು.
ಕೀಲು ನೋವಿಗೆ ಮನೆಮದ್ದು
ಕೀಲು ನೋವು, ಮೂಳೆ ಸವೆತ, ಮಂಡಿ ನೋವು ಹೀಗೆ
ಅನೇಕ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರವಿದೆ. ಕೀಲು
ನೋವು ಸಮಸ್ಯೆ ಕಾಣಿಸಿಕೊಂಡರೆ ಮೆಂತ್ಯೆ ಕಾಳುಗಳನ್ನು
ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ರಾತ್ರಿ
ನೆನೆಯಲು ಬಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಆ ನೀರನ್ನು
ಕುಡಿಯಿರಿ.ಪಾರಿಜಾತದ ಎಲೆಗಳಿಂದ ಕಷಾಯದಂತೆ
ಮಾಡಿಕೊಳ್ಳಬಹುದು. ಹುಣಸೆ ಬೀಜದ 1 ಚಮಚ ಪುಡಿಗೆ
1 ಗ್ಲಾಸ್ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಇದಕ್ಕೆ
ಹಾಲು,ಸಕ್ಕರೆ ಹಾಕಿ ಬೆಳಿಗ್ಗೆ, ಸಂಜೆ ಸೇವಿಸಬಹುದು.
ಹೃದಯದ ಆರೋಗ್ಯಕ್ಕಾಗಿ ಸಲಹೆಗಳು
ಹೃದಯದ ಕಾಯಿಲೆಯಿಂದ ಪಾರಾಗಬೇಕಾದರೆ
ಪ್ರತಿಯೊಬ್ಬರು ಆರೋಗ್ಯಕರ ಆಹಾರ ಪದ್ಧತಿಯನ್ನು
ಪಾಲಿಸುವುದು ಅಗತ್ಯವಾಗಿರುತ್ತದೆ. ಕೆಲಸದಲ್ಲಿ
ಎದುರಾಗಬಹುದಾದ ಒತ್ತಡವನ್ನು ಎದುರಿಸಲು
ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಪ್ರತಿನಿತ್ಯ
45 ನಿಮಿಷಗಳ ಕಾಲ ದೈಹಿಕ ಚಟುವಟಿಕೆಗಳಿಗೆ
ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ. ಅಗತ್ಯ ನಿದ್ರೆಗೆ
ಹೆಚ್ಚು ಒತ್ತು ನೀಡಬೇಕಾಗುತ್ತದೆ. ಕನಿಷ್ಠ ಆರು
ತಿಂಗಳಿಗೊಮ್ಮೆ ನಿಯಮಿತವಾಗಿ ಆರೋಗ್ಯ ತಪಾಸಣೆ
ಮಾಡಿಸಿಕೊಳ್ಳಿ
ನಿರ್ಗಮಿಸಲು ಮತ್ತೊಮ್ಮೆ ಒತ್ತಿ
0 ಕಾಮೆಂಟ್‌ಗಳು
hrithiksuraj2@gmail.com