ಒಡಿಶಾದಲ್ಲಿ 10ನೇ ತರಗತಿ ಪರೀಕ್ಷೆ ರದ್ದು! BREAKING: ಪರೀಕ್ಷೆ ಮುಂದೂಡಿಕೆ.

 ಒಡಿಶಾದಲ್ಲಿ 10ನೇ ತರಗತಿ ಪರೀಕ್ಷೆ ರದ್ದು



ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಒಡಿಶಾ

ಸರ್ಕಾರವು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು

ರದ್ದುಗೊಳಿಸಲು ನಿರ್ಧರಿಸಿದೆ. ಆಂತರಿಕ ಮೌಲ್ಯಾಂಕನ

ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು.

ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ

ನಂತರ ಅವಕಾಶ ನೀಡಲಾಗುವುದು ಎಂದು ಒಡಿಶಾ

ಸರ್ಕಾರ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕೂಡ 10ನೇ ತರಗತಿ

ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಇನ್ನು, ರಾಜ್ಯದಲ್ಲಿ

1-9ನೇ ತರಗತಿಯ ಪರೀಕ್ಷೆ ರದ್ದಾಗಿದ್ದು, 10ನೇ ತರಗತಿ

ಪರೀಕ್ಷೆ ನಡೆಯಲಿದೆ.


BREAKING: ಪರೀಕ್ಷೆ ಮುಂದೂಡಿಕೆ



ಮೈಸೂರು ವಿಶ್ವವಿದ್ಯಾಲಯವು ಇದೇ 25ರಂದು

ನಡೆಸಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ

ಅರ್ಹತಾ ಪರೀಕ್ಷೆ(ಕೆ-ಸೆಟ್) ಯನ್ನು ಬುಧವಾರ ಮತ್ತೆ

ಮುಂದೂಡಿದೆ. ಕೊರೋನಾ ತಡೆಯಲು ಸರ್ಕಾರ

ರಾಜ್ಯದಲ್ಲಿ ವಾರಾಂತ್ಯದ ಕರ್ಪ್ಯೂ ಘೋಷಿಸಿರುವ ಹಿನ್ನೆಲೆ

ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದ್ದು, ಹೊಸ

ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು

ಎಂದು ವಿವಿ ಪ್ರಕಟಿಸಿದೆ. ಈ ಹಿಂದೆ ಸಾರಿಗೆ ನೌಕರರ

ಮುಷ್ಕರ ಹಿನ್ನೆಲೆ ಕೆ-ಸೆಟ್ ಪರೀಕ್ಷೆ ಮುಂದೂಡಿಕೆಯಾಗಿತ್ತು.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು