ಕೊರೋನಾ: ಹಿಂದಿನ ದಾಖಲೆಗಳೆಲ್ಲಾ ಪುಡಿ ಪುಡಿ.!ಕೊರೋನಾ 2ನೇ ಅಲೆ: ಒಂದೇ ದಿನ 25,795 ಕೇಸ್‌!BREAKING: ಜಮೀನಿನಲ್ಲೇ ಅಂತ್ಯಸಂಸ್ಕಾರಕ್ಕೆ ಅವಕಾಶ.

 

ಕೊರೋನಾ: ಹಿಂದಿನ ದಾಖಲೆಗಳೆಲ್ಲಾ ಪುಡಿ ಪುಡಿ.!



ಬಾಗಲಕೋಟೆ-134, ಬಳ್ಳಾರಿ-940, ಬೆಳಗಾವಿ-255,
ಬೆಂಗಳೂರು ಗ್ರಾ-405, ಬೆಂಗಳೂರು-15244,
ಬೀದರ್-396, ಚಾಮರಾಜನಗರ-271,
ಚಿಕ್ಕಬಳ್ಳಾಪುರ-329, ಚಿಕ್ಕಮಗಳೂರು-146,
ಚಿತ್ರದುರ್ಗ-142, ದ.ಕನ್ನಡ-474, ದಾವಣಗೆರೆ-157,
ಧಾರವಾಡ-361, ಗದಗ-73, ಹಾಸನ-689, ಹಾವೇರಿ-46,
ಕಲಬುರಗಿ-659, ಕೊಡಗು-156, ಕೋಲಾರ-587,
ಕೊಪ್ಪಳ-121, ಮಂಡ್ಯ-385, ಮೈಸೂರು-818,
ರಾಯಚೂರು-433, ರಾಮನಗರ-260, ಶಿವಮೊಗ್ಗ-207,
ತುಮಕೂರು-1231, ಉಡುಪಿ-274, ಉ.ಕನ್ನಡ-163,
ವಿಜಯಪುರ-328, ಯಾದಗಿರಿ-111.


ಕೊರೋನಾ 2ನೇ ಅಲೆ: ಒಂದೇ ದಿನ 25,795 ಕೇಸ್‌!




ರಾಜ್ಯದಲ್ಲಿಂದು ಹೊಸದಾಗಿ25,795 ಜನರಿಗೆ ಕೊರೋನಾ
ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,47,997ಕ್ಕೆ
ಏರಿಕೆಯಾಗಿದೆ. ಇಂದೇ ಸೋಂಕಿನಿಂದ 123 ಜನರ
ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 13,885ಕ್ಕೆ
ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 10,37,857
ಜನರು ಗುಣಮುಖರಾಗಿ ಡಿಸ್ಟಾರ್ಜ್ ಆಗಿದ್ದಾರೆ. 1,96,236
ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


BREAKING: ಜಮೀನಿನಲ್ಲೇ ಅಂತ್ಯಸಂಸ್ಕಾರಕ್ಕೆ ಅವಕಾಶ




ರಾಜ್ಯದಲ್ಲಿ ಕೊರೋನಾ 2ನೇ ಅಲೆ ವ್ಯಾಪಕವಾಗಿ
ಹಬ್ಬುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತರು
ಮೃತಪಡುತ್ತಿರುವವರ ಸಂಖ್ಯೆಯೂ ಏರುತ್ತಿದೆ.
ಇದರೊಂದಿಗೆ ಹಲವೆಡೆ ಅಂತ್ಯಸಂಸ್ಕಾರ ನಡೆಸುವುದಕ್ಕೂ
ಪರದಾಡಬೇಕಾಗಿದೆ. ಈ ಸಂಬಂಧ ಮಾಹಿತಿ ನೀಡಿದ
ಸಚಿವ ಆರ್. ಅಶೋಕ್, 'ಜಿಲ್ಲಾ ಆರೋಗ್ಯಧಿಕಾರಿಯಿಂದ
ಅನುಮತಿ ಪಡೆದು ಸೋಂಕಿನಿಂದ ಮೃತಪಟ್ಟವರ
ಅಂತ್ಯಸಂಸ್ಕಾರವನ್ನು ಅವರ ಜಮೀನಿನಲ್ಲೇ
ನಡೆಸಬಹುದು. ಅಂತ್ಯಸಂಸ್ಕಾರದ ವೇಳೆ ಮಾರ್ಗಸೂಚಿ
ಉಲ್ಲಂಘಿಸುವಂತಿಲ್ಲ ಎಂದು ಹೇಳಿದ್ದಾರೆ.
Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು