ದೇಶದ 10 ರಾಜ್ಯಗಳಲ್ಲೇ ಗರಿಷ್ಠ ಸಾವು!ಕೊರೋನಾ ಸೋಂಕಿತೆ ಸಾವು: ಮೈ ಮೇಲಿದ್ದ ಮಾಂಗಲ್ಯ ಸರ ನಾಪತ್ತೆ!

 ದೇಶದ 10 ರಾಜ್ಯಗಳಲ್ಲೇ ಗರಿಷ್ಠ ಸಾವು



ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ

ಸೋಂಕಿನಿಂದ ದಾಖಲೆಯ 2,767 ಸಾವುಗಳು

ವರದಿಯಾಗಿವೆ. ಹೊಸ ಸಾವುಗಳಲ್ಲಿ ಶೇಕಡ

80.23% ಸಾವುಗಳು 10 ರಾಜ್ಯಗಳಲ್ಲೇ ದಾಖಲಾಗಿದೆ.

ಮಹಾರಾಷ್ಟ್ರದಲ್ಲಿ ಗರಿಷ್ಠ676 ಮಂದಿ ಮೃತಪಟ್ಟಿದ್ದಾರೆ.

ನಂತರ ಸ್ಥಾನದಲ್ಲಿರುವ ದೆಹಲಿಯಲ್ಲಿ 357

ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶ, ಛತ್ತೀಸ್‌ಗಡ, ಮತ್ತು

ಕರ್ನಾಟಕದಲ್ಲಿ ಒಂದೇ ದಿನ 200ಕ್ಕೂ ಹೆಚ್ಚು ಮಂದಿ

ಕೊರೋನಾಗೆ ಬಲಿಯಾಗಿದ್ದಾರೆ.




ಕೊರೋನಾ ಸೋಂಕಿತೆ ಸಾವು: ಮೈ 

ಮೇಲಿದ್ದ ಮಾಂಗಲ್ಯ ಸರ ನಾಪತ್ತೆ



ಉಸಿರಾಟ ಸಮಸ್ಯೆ ಹಿನ್ನೆಲೆ ನಿನ್ನೆ ರಾತ್ರಿ 

ಚಿಕ್ಕಮಗಳೂರು

ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ

ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮಹಿಳೆ

ಹಾಕಿಕೊಂಡಿದ್ದ 50 ಗ್ರಾಮ್ ಮಾಂಗಲ್ಯ ಸರವನ್ನು 

ಆಸ್ಪತ್ರೆ

ಸಿಬ್ಬಂದಿ ಕಸಿದುಕೊಂಡಿದ್ದಾರೆ ಎಂಬ ಆರೋಪ ಕೇಳಿ

ಬಂದಿದೆ. ಜಿಲ್ಲೆಯ ಕಡೂರು ತಾಲೂಕಿನ ಎಳವರಟ್ಟಿ

ನಿವಾಸಿ ಪುಟ್ಟಮ್ಮ(40) ಮೃತಪಟ್ಟವರಾಗಿದ್ದಾರೆ.

ಇಂತಹುದೇ ಪ್ರಕರಣಗಳು ಬೆಂಗಳೂರಿನಲ್ಲೂ

ನಡೆಯುತ್ತಿದ್ದು, ನಿನ್ನೆಯಿಂದಲೂ ಬೆಳಕಿಗೆ ಬರುತ್ತಿವೆ.



ಲಸಿಕೆಯ ಅಕ್ರಮ ಸಾಗಾಟ: 
ಆಂಬುಲೆನ್ಸ್ ಚಾಲಕ ಪೊಲೀಸರ ಬಲೆಗೆ



ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್

ಚಾಲಕನೋರ್ವ ರೆಂಡಿಸಿವಿ‌ ಔಷಧವನ್ನು ಅಕ್ರಮವಾಗಿ

ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಚಾಲಕನ ವಿರುದ್ಧ

ಸ್ಥಳೀಯರು ದೂರು ನೀಡಿದ್ದರು. ಈ ಹಿನ್ನೆಲೆ ಪೊಲೀಸರು

ರಾಯಚೂರಿನ ಒಪೆಕ್ ಬಳಿ ಆಂಬುಲೆನ್ಸ್ ಅಡ್ಡಗಟ್ಟಿ

ಪರಿಶೀಲಿಸಿದಾಗ ಔಷಧಿಯ ವಯಲ್ ಗಳು ಪತ್ತೆಯಾಗಿವೆ.

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಆರೋಪಿ ಚಾಲಕನು ಲಸಿಕೆಯನ್ನು ಕೊರೋನಾ

ಸೋಂಕಿತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ

ಎನ್ನಲಾಗಿದೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು