ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ
3ನೇ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ
ಉಲುಬೇರಿಯಾ ಉತ್ತರ ವಿಧಾನಸಭಾ ಕ್ಷೇತ್ರದ
ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಮತ್ತು ವಿವಿ
ಪ್ಯಾಟ್ ಯಂತ್ರಗಳು ಪತ್ತೆಯಾಗಿವೆ. ಟಿಎಂಸಿ ನಾಯಕ
ಗೌತಮ್ ಘೋಷ್ ತಮ್ಮ ಮನೆಯಲ್ಲಿ ಯಂತ್ರಗಳನ್ನು
ಅಡಗಿಸಿಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ
ಆರೋಪಿಸಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು
ಪರಿಶೀಲನೆ ನಡೆಸಿ ಇವಿಎಂ ಯಂತ್ರಗಳನ್ನು ವಶಕ್ಕೆ
ಪಡೆದಿದ್ದಾರೆ.
450 ಕ್ಷೇತ್ರಗಳಿಗೆ ಮತದಾನ ಆರಂಭ
![]() |
political party leaders |
ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ
& ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಒಟ್ಟು 450
ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗಿದೆ. ಕೇರಳ,
ತಮಿಳುನಾಡು ಮತ್ತು ಪುದುಚೇರಿಯಲ್ಲಿ ಒಂದೇ
ಹಂತದಲ್ಲಿ ಮತದಾನ ನಡೆಯುತ್ತಿದ್ದು, ಅಸ್ಸಾಂನಲ್ಲಿ
ಮೂರನೇ & ಅಂತಿಮ ಹಂತದ ಮತದಾನ ನಡೆಯುತ್ತಿದೆ.
ಇನ್ನು, ಪಶ್ಚಿಮ ಬಂಗಾಳದಲ್ಲೂ ಬೆಳಿಗ್ಗೆ 7 ಗಂಟೆಗೆ
ಮತದಾನ ಆರಂಭವಾಗಿದ್ದು, ಸಂಜೆ 6ಕ್ಕೆ ಮತದಾನ
ಮುಕ್ತಾಯಗೊಳ್ಳಲಿದೆ. ಈ ಪಂಚರಾಜ್ಯಗಳ ಚುನಾವಣಾ
ಫಲಿತಾಂಶ ಮೇ.2ರಂದು ಪ್ರಕಟವಾಗಲಿದೆ.
ಸೈಕಲ್‌ನಲ್ಲಿ ಬಂದು ಮತಚಲಾಯಿಸಿದ
ದಳಪತಿ
ಇಂದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆ
ನಡೆಯುತ್ತಿದೆ. ತಮಿಳುನಾಡಿನಲ್ಲಿ ಬೆಳಗ್ಗೆಯಿಂದ ಬಿರುಸಿನ
ಮತದಾನ ಆರಂಭವಾಗಿದೆ. ಇಂದು ವಿಶೇಷ ಎಂದರೆ
ದಳಪತಿ ವಿಜಯ್ ಸೈಕಲ್‌ನಲ್ಲಿ ಬಂದು ತಮ್ಮ ಹಕ್ಕು
ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಜನಪ್ರಿಯ ಸಿದ್ದಾಂತದ ಪ್ರಕಾರ ಸೈಕಲ್ ಏರಿ ಮತಗಟ್ಟೆಗೆ
ಬರುವುದು ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯ
ವಿರುದ್ಧ ಮಾಡುವ ಪ್ರತಿಭಟನೆಯಾಗಿದೆ ಎನ್ನಲಾಗುತ್ತಿದೆ.
ಇನ್ನು ರಜನಿಕಾಂತ್, ಕಮಲ್ ಹಾಸನ್, ಅಜಿತ್ ಸೇರಿದಂತೆ
ನಟ, ನಟಿಯರು ಮತ ಚಲಾಯಿಸಿದ್ದಾರೆ.
0 ಕಾಮೆಂಟ್‌ಗಳು
hrithiksuraj2@gmail.com