ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಈ
ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಬೆಂಗಳೂರಿನಲ್ಲಿ
144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಪೊಲೀಸ್
ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ನಗರದಲ್ಲಿ
ಎಲ್ಲಿಯೂ ಸಹ ಗುಂಪುಗೂಡುವಂತಿಲ್ಲ. ಯಾವುದೇ
ಕ್ಯಾಲಿ, ಧರಣಿ ಮಾಡುವಂತಿಲ್ಲ, ಸಾರ್ವಜನಿಕ ಸಮಾರಂಭ
ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮ
ಉಲ್ಲಂಘಿಸಿದರೆ ಅಂತಹವರನ್ನ ಬಂಧಿಸಲಾಗುತ್ತದೆ ಎಂದು
ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಮಾಡಿದರೆ ಕಠಿಣ ಕ್ರಮ: ಸವದಿ ಎಚ್ಚರಿಕೆ
ಕೊರೋನಾ ಸಮಯದಲ್ಲಿ ಪ್ರತಿಭಟನೆ ಮಾಡುವುದು
ಸರಿಯಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ
ಅವರು ಇಂದು ಅಭಿಪ್ರಾಯಪಟ್ಟಿದ್ದಾರೆ. ಬೀದರ್
ಜಿಲ್ಲೆಯ ಬಸವಕಲ್ಯಾಣದಲ್ಲಿ ಮಾತನಾಡಿದ ಸಚಿವರು,
ಸಾರಿಗೆ ನೌಕರರು ನಾಳಿನ ಪ್ರತಿಭಟನೆಯನ್ನು
ಕೈಬಿಡಬೇಕು. ಪ್ರತಿಭಟನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ವಿವಿಧ
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೌಕರರು ನಾಳೆ
ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿ ಸಿದ್ಧತೆ
ಮಾಡಿಕೊಂಡಿದ್ದಾರೆ.
ನಷ್ಟ ಸರಿದೂಗಿಸಲು 1962 ಕೋಟಿ ರೂ. ಸಾಲ
ಮಾಡಿದ್ದೇವೆ: ಸವದಿ
ಸಾರಿಗೆ ನೌಕರರ ವೇತನವನ್ನು ಮೇ 2ರ ಬಳಿಕ ಶೇ.
8ರಷ್ಟನ್ನು ಹೆಚ್ಚಳ ಮಾಡುತ್ತೇವೆ ಎಂದು ಸಾರಿಗೆ ಸಚಿವ
ಲಕ್ಷ್ಮಣ್ ಸವದಿ ಇಂದು ತಿಳಿಸಿದ್ದಾರೆ. ಈ ವೇಳೆ, ನೌಕರರ 8
ಬೇಡಿಕೆ ಈಡೇರಿಸಿದ್ದೇವೆ. ಕೊರೋನಾಗೂ ಮುನ್ನ ಸಾರಿಗೆ
ಬಸ್ ಗಳಲ್ಲಿ 1 ಕೋಟಿ ಜನ ಸಂಚರಿಸುತ್ತಿದ್ದರು. ಆದರೆ
ಈಗ 60 ಲಕ್ಷ ಮಂದಿ ಮಾತ್ರವೇ ಪ್ರಯಾಣಿಸುತ್ತಿದ್ದಾರೆ.
ಬರುತ್ತಿರುವ ಆದಾಯ ಕೇವಲ ಸಂಬಳ, ಇಂಧನಕ್ಕೆ
ಮಾತ್ರವೇ ಸಾಕಾಗುತ್ತಿದೆ. ಹಾಗಾಗಿ ಸರ್ಕಾರದಿಂದ 1962
ಕೋಟಿ ರೂ. ಸಾಲ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.
0 ಕಾಮೆಂಟ್‌ಗಳು
hrithiksuraj2@gmail.com