ಐಪಿಎಲ್-2021 ಆರಂಭಕ್ಕೂ ಮುನ್ನವೇ ಮುಂಬೈನ ವಾಂಖೆಡೆ ಸ್ಟೇಡಿಯಂನ 8 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ, ಏಪ್ರಿಲ್ 10ರಂದು ಚೆನ್ನೈ-ದೆಹಲಿ ನಡುವಿನ 2ನೇ ಪಂದ್ಯ ವಾಂಖೆಡೆಯಲ್ಲಿ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
ವಾಂಖೆಡೆಯಲ್ಲಿ ಪಂದ್ಯ ನಡೆಸಬೇಕೋ, ಬೇಡವೋ? ಎಂಬ ಬಗ್ಗೆ ಬಿಸಿಸಿಐ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಕೇಕೆ ಹಾಕುತ್ತಿರುವುದರಿಂದ ಅಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಮರುಪರಿಶೀಲನೆ ನಡೆಸುವ ಸಾಧ್ಯತೆಯಿದೆ.
ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು,ಈ ಬಾರಿಯಾದರೂ ಆರ್ ಸಿಬಿ ತಂಡಕ್ಕೆ ಪ್ರಶಸ್ತಿಯ ಬರ ನೀಗುವುದೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡ ತೊಡಗಿದೆ. ವಿಶ್ವ ಶ್ರೇಷ್ಠ ಆಟಗಾರರು ತಂಡದಲ್ಲಿದ್ದರೂ ಕೂಡ ಈವರೆಗೆ ಟ್ರೋಫಿ ಗೆಲ್ಲಲ್ಲು ಮಾತ್ರ ಆರ್ಸಿಬಿಗೆ ಸಾಧ್ಯವಾಗಿಲ್ಲ. ಆದರೂ ಕೂಡ 'ಈ ಸಲ ಕಪ್ ನಮ್ಲ' ಎಂಬ ಅಭಿಮಾನಿಗಳ ಉದ್ಯೋಷ ಮಾತ್ರಕಡಿಮೆಯಾಗಿಲ್ಲ. ಇದೇ 9ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಮುಂಬೈಎದುರಾಳಿಯಾಗಿದೆ.
IPL: ಈವರೆಗಿನ ಆರ್‌ಸಿಬಿ ಸಾಧನೆ
2008ರಿಂದಲೂ ಐಪಿಎಲ್ ಲೀಗ್ ನ ಭಾಗವಾಗಿರುವ ರಾಯಲ್ ಚಾಂಲೆಂಜರ್ಸ್ ಬೆಂಗಳೂರು ಒಮ್ಮೆಯೂ ಟ್ರೋಫಿಗೆ ಮುತ್ತಿಕ್ಕಿಲ್ಲ. 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಪ್ರಶಸ್ತಿ ಜಯಿಸಲು ಮಾತ್ರವಿ ಫಲವಾಗಿದೆ. 2016ರಲ್ಲಿ ಫೈನಲ್ ಪ್ರವೇಶಿಸಿದ ಬಳಿಕ ಸತತ 3 ವರ್ಷ ಕನಿಷ್ಠ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿತ್ತು. ಇನ್ನು ಯುಎಇನಲ್ಲಿ 2020ರಲ್ಲಿ ನಡೆದ ಲೀಗ್ ನಲ್ಲಿ ಪ್ಲೇ ಆಫ್ ಹಂತಕ್ಕೇರಿತ್ತು. ಹೊಸತನದ ಹಾದಿಯಲ್ಲಿರುವ ಆರ್‌ಸಿಬಿ ಈ ಬಾರಿಯಾದರೂ ಕಪ್ ಜಯಿಸಲಿ ಎಂಬುದು ನಮ್ಮ ಹಾರೈಕೆ.
'ಐಪಿಎಲ್ ನಿಂದ ನಮಗೆ ಒಳ್ಳೆಯದೇ ಆಗಲಿದೆ'
ಐಪಿಎಲ್‌ನಲ್ಲಿ ಆಡುವುದರಿಂದ ಇಂಗ್ಲೆಂಡ್ ಆಟಗಾರರಿಗೆ ಒಳ್ಳೆಯದೇ ಆಗಲಿದೆ ಎಂದು ಕ್ರಿಕೆಟಿಗ ಬೆನ್ ಸ್ಟೋಕ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ಈ ಲೀಗ್‌ನಲ್ಲಿ ಇಂಗ್ಲೆಂಡ್ ಆಟಗಾರರ ಪ್ರಾತಿನಿಧ್ಯ ಹೆಚ್ಚುತ್ತಿದೆ.ಉತ್ತಮವಾಗಿ ಆಡಬೇಕೆಂಬ ಒತ್ತಡವು ಕೂಡ ಆಟಗಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಈ ಬಾರಿ ಭಾರತದಲ್ಲೇ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಐಪಿಎಲ್ ನಲ್ಲಿ ಪಾಲ್ಗೊಳ್ಳುವಿಕೆ ಇಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
*
ಐಪಿಎಲ್: ಟಾಪ್ 5 ವೇಗದ ಶತಕವೀರರು
ಕ್ರಿಸ್ ಗೇಲ್: 2013ರಲ್ಲಿ RCB ಪರ ಗೇಲ್ ಪುಣೆ
ವಾರಿಯರ್ಸ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ
ಬಾರಿಸಿದ್ದರು. * ಯೂಸುಫ್ ಪಠಾಣ್: 2010ರಲ್ಲಿ
RR ತಂಡದ ಪರ ಯೂಸುಫ್ ಮುಂಬೈ ಇಂಡಿಯನ್ಸ್
ವಿರುದ್ಧ 37 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. *
ಡೇವಿಡ್ ಮಿಲ್ಲರ್: 2013ರಲ್ಲಿ ಪಂಜಾಬ್ ಪರ ಮಿಲ್ಲರ್
RCB ವಿರುದ್ಧ 38 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ಡಿವಿಲಿಯರ್ಸ್: 2016ರ RCB ಪರ ಎಬಿ ಡಿವಿಲಿಯರ್ಸ್
43 ಎಸೆತಗಳಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಶತಕವನ್ನು
ಸಿಡಿಸಿದ್ದರು.
*
ಟಿ20 ಕ್ರಿಕೆಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್
ಗಳು(ಟಾಪ್-10)
1. ಲಸಿತ್ ಮಾಲಿಂಗಾ, ಶ್ರೀಲಂಕಾ - ವಿಕೆಟ್: 107
2. ಟಿಮ್ ಸೌಥಿ, ನ್ಯೂಜಿಲ್ಯಾಂಡ್ - 99
3. ಶಾಹಿದ್ ಅಫ್ರಿದಿ, ಪಾಕಿಸ್ತಾನ - 98
4. ರಶೀದ್ ಖಾನ್, ಅಫ್ಘಾನಿಸ್ತಾನ್ - 95
5. ಶಕೀಬ್ ಅಲ್ ಹಸನ್, ಬಾಂಗ್ಲಾದೇಶ - 92
6. ಉಮರ್ ಗುಲ್, ಪಾಕಿಸ್ತಾನ - 85
7. ಸಯೀದ್ ಅಹ್ಮಲ್, ಪಾಕಿಸ್ತಾನ - 85,
8. ಡಾಲ್,ಐರ್ಲೆಂಡ್ - 76
9. ಸೋಧಿ, ನ್ಯೂಜಿಲ್ಯಾಂಡ್-73,
10. ಮೊಹಮ್ಮದ್ ನಬಿ,
ಅಫ್ಘಾನ್ - 72
ಐಪಿಎಲ್: ಅತಿಹೆಚ್ಚು ಬಾರಿ 'ಪಂದ್ಯಶ್ರೇಷ್ಠ' ಪ್ರಶಸ್ತಿ
ಪಡೆದ ಆಟಗಾರರು(ಟಾಪ್-10)
1. ಎಬಿ ಡಿವಿಲಿಯರ್ಸ್ - 23
2. ಕ್ರಿಸ್ ಗೇಲ್ - 22
3. ರೋಹಿತ್ ಶರ್ಮಾ - 18
4, ಡೇವಿಡ್ ವಾರ್ನರ್ - 17
5. ಮಹೇಂದ್ರ ಸಿಂಗ್ ಧೋನಿ - 17
6. ಶೇನ್ ವಾಟ್ಟನ್ - 16
7. ಯೂಸುಫ್ ಪಠಾಣ್ - 16, 8. ಸುರೇಶ್ ರೈನಾ - 14
9. ವಿರಾಟ್ ಕೊಹ್ಲಿ - 13, 10. ಗೌತಮ್ ಗಂಭೀರ್ - 13
ಐಪಿಎಲ್: ಯಾವ ದೇಶದ ಆಟಗಾರ ಎಷ್ಟು ಎಸೆತಗಳಲ್ಲಿ ಶತಕದ ಸಾಧನೆ ಮಾಡಿದ್ದಾರೆ?
>ವೆಸ್ಟ್ ಇಂಡೀಸ್ - ಕ್ರಿಸ್ ಗೇಲ್ (30 ಎಸೆತ)
>ಭಾರತ - ಯೂಸುಫ್ ಪಠಾಣ್ (37ಎಸೆತ)
>ದಕ್ಷಿಣ ಆಫ್ರಿಕ - ಡೇವಿಡ್ ಮಿಲ್ಲರ್ (38 ಎಸೆತ)
>ಆಸ್ಟ್ರೇಲಿಯಾ - ಆಡಮ್ ಗಿಲ್ ಕ್ರಿಸ್ಟ್ (42 ಎಸೆತ)
>ಶ್ರೀಲಂಕಾ - ಸನತ್ ಜಯಸೂರ್ಯ (45 ಎಸೆತ)
>ಇಂಗ್ಲೆಂಡ್ - ಜಾನಿ ಬೇರ್ಸ್ಟೋ (52 ಎಸೆತ)
>ನ್ಯೂಜಿಲ್ಯಾಂಡ್ - ಬ್ರೆಂಡನ್ ಮೆಕಲಮ್ (53 ಎಸೆತ)
ಇದೇ 9, 10.. ಕ್ರೀಡಾಪ್ರೇಮಿಗಳಿಗೆ ರಸದೌತಣ!
ಇದೇ ತಿಂಗಳ 9ರಿಂದ ಐಪಿಎಲ್ ಹಬ್ಬ ಆರಂಭವಾಗಲಿದ್ದು,
ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡಲಿದೆ. ಆರಂಭಿಕ
ಪಂದ್ಯ ಆರ್‌ಸಿಬಿ ಮತ್ತು ಮುಂಬೈ ನಡುವೆ ನಡೆಯಲಿದ್ದು,
ಟೀಮ್ ಇಂಡಿಯಾ ನಾಯಕ ಕೊಹ್ಲಿ ಮತ್ತು ಉಪನಾಯಕ
ರೋಹಿತ್ ಶರ್ಮಾ ನಡುವೆ ಜಿದ್ದಾಜಿದ್ದಿನ ಹೋರಾಟ
ನಿರೀಕ್ಷಿಸಲಾಗಿದೆ. ಇನ್ನೊಂದೆಡೆ, ಏ. 10ರಂದು ಧೋನಿ
ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿ
ನಾಯಕ ಪಂತ್, ಸಿಎಸ್ಕೆ ತಂಡವನ್ನು ಎದುರಿಸಲಿದೆ.
ಆರಂಭದ ಈ ಪಂದ್ಯಗಳು ಭರ್ಜರಿ ಮನರಂಜನೆ
ನೀಡುವುದರಲ್ಲಿ ಅನುಮಾನವಿಲ್ಲ.
0 ಕಾಮೆಂಟ್‌ಗಳು
hrithiksuraj2@gmail.com