'ಸರ್ಕಾರದ ಪಾಪದ ಫಲವನ್ನುಜನತೆ ಅನುಭವಿಸುತ್ತಿದ್ದರೆ' 'ಸಾರಿಗೆ ನೌಕರರ ಬೇಡಿಕೆ ನ್ಯಾಯ ಸಮ್ಮತವಾಗಿಲ್ಲ'ಕೆ.ಎಸ್ ಈಶ್ವರಪ್ಪ! ವಸೂಲಿಗೆ ಕಂಗೆಟ್ಟ ಪ್ರಯಾಣಿಕರು!

'ಸರ್ಕಾರದ ಪಾಪದ  ಫಲವನ್ನುಜನತೆ 

ಅನುಭವಿಸುತ್ತಿದ್ದರೆ'




ಸಾರಿಗೆ ನೌಕರರ ಬೇಡಿಕೆಗಳನ್ನು

ಈಡೇರಿಸಲಾಗದಿರುವುದಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ

ಆರ್ಥಿಕ ಸಂಕಷ್ಟ ಸ್ವಯಂಕೃತ ಅಪರಾಧ. ತನ್ನ ದುರಾಡಳಿತ

ಮತ್ತು ಕೇಂದ್ರದ ಗುಲಾಮಗಿರಿಯಿಂದಾಗಿ ಸರ್ಕಾರ

ದಿವಾಳಿಯಾಗಿದೆ ಎಂದು ಟೀಕಿಸಿರುವ ವಿಪಕ್ಷ ನಾಯಕ

ಸಿದ್ದರಾಮಯ್ಯ, ಆಂತರಿಕ ತಿಕ್ಕಾಟ, ಅಸಮರ್ಥ &

ಭ್ರಷ್ಟಾಚಾರದಿಂದ ಹಾದಿತಪ್ಪಿರುವ ಸರ್ಕಾರದ ಪಾಪದ

ಫಲವನ್ನು ಜನತೆ ಅನುಭವಿಸಿದಂತಾಗಿದೆ. ಇದರ ವಿರುದ್ಧ

ಸ್ಪಷ್ಟ ಸಂದೇಶವನ್ನು ಉಪಚುನಾವಣೆಯಲ್ಲಿ ಮತದಾರರು

ನೀಡಲಿದ್ದಾರೆ ಎಂದು ಟ್ವಿಟ್ಟಿಸಿದ್ದಾರೆ.




'ಸಾರಿಗೆ ನೌಕರರ ಬೇಡಿಕೆ ನ್ಯಾಯ

 ಸಮ್ಮತವಾಗಿಲ್ಲ'












ಸಾರಿಗೆ ನೌಕರರ ಎಲ್ಲ ಬೇಡಿಕೆಯನ್ನು ಈಡೇರಿಸುವುದಕ್ಕೆ

ಸಾಧ್ಯವಿಲ್ಲ, ನೌಕರರು ಕೋಡಿಹಳ್ಳಿ ಚಂದ್ರಶೇಖರ್

ನಾಯಕತ್ವವನ್ನು ಬಿಟ್ಟು, ಸರ್ಕಾರದ ಜೊತೆ ಮಾತುಕತೆ

ನಡೆಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ

ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ

ಮಾತನಾಡಿದ ಅವರು, 'ಸಾರಿಗೆ ನೌಕರರ ಬೇಡಿಕೆ

ನ್ಯಾಯ ಸಮ್ಮತವಾಗಿಲ್ಲ. ಸರ್ಕಾರ ಈ ಬೇಡಿಕೆಯನ್ನು

ಒಪ್ಪುವುದಕ್ಕೂ ಸಾಧ್ಯವಿಲ್ಲ. ಕೋಡಿಹಳ್ಳಿ ಉದ್ದೇಶ

ಕೇವಲ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು

ಕುಂಠಿತಗೊಳಿಸುವುದಾಗಿದೆ' ಎಂದು ಹೇಳಿದ್ದಾರೆ.

ವಸೂಲಿಗೆ ಕಂಗೆಟ್ಟ ಪ್ರಯಾಣಿಕರು!









6ನೇ ವೇತನ ಆಯೋಗದ ಶಿಫಾರಸು

ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು

ಬಸ್ ಸಂಚಾರ ಸ್ಥಗಿತಗೊಳಿಸಿ, ಅನಿರ್ಧಿಷ್ಟಾವಧಿ ಮುಷ್ಕರ

ಆರಂಭಿಸಿರುವುದರಿಂದ ಸಾರ್ವಜನಿಕರು ಪರದಾಡುವ

ಸ್ಥಿತಿ ನಿರ್ಮಾಣವಾಗಿದೆ. ಮುಷ್ಕರ ಹಿನ್ನೆಲೆ ಖಾಸಗಿ ಬಸ್

ಗಳ ಸಂಚಾರಕ್ಕೆ ಸರ್ಕಾರ ಅನುಮತಿಸಿದೆ. ಆದರೆ ಕೆಲ

ಖಾಸಗಿ ವಾಹನಗಳು, ಆಟೋಗಳಲ್ಲಿ ಸಾಮಾನ್ಯ ದರಕ್ಕಿಂತ

ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಈ ಹಗಲು

ದರೋಡೆಗೆ ಪ್ರಯಾಣಿಕರು ಹೈರಾಣವಾಗಿದ್ದು, ಸರ್ಕಾರದ

ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು