BREAKING: ಇಂದು ಸಹ ಬಸ್ ಸಂಚಾರ ಸ್ತಬ್ಧ! 'ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ'

 









6ನೇ ವೇತನ ಆಯೋಗದ ಜಾರಿಗೆ ಆಗ್ರಹಿಸಿ ಸಾರಿಗೆ

ನೌಕರರು ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ

2ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ಇಂದೂ ಸಹ

ಪ್ರಯಾಣಿಕರು ಪರದಾಡುವಂತಾಗಿದೆ. ಇದರಿಂದ ನೌಕರರ

ಮನವೊಲಿಕೆಗೆ ಸರ್ಕಾರ ಕ್ರಮಕೈಗೊಂಡಿದೆ. ಆದರೆ 1484

ತರಬೇತಿನಿರತ ಸಿಬ್ಬಂದಿ ಇದ್ದಾರೆ. ಇವರೆಲ್ಲ ಕೆಲಸಕ್ಕೆ

ಹಾಜರಾದಲ್ಲಿ ಇಂದಿನಿಂದ ಬಿಎಂಟಿಸಿ ರಸ್ತೆಗಿಳಿಯಲಿವೆ

ಎಂದು ಹೇಳಲಾಗುತ್ತಿದೆ. ಜೊತೆಗೆ ಪ್ರಮುಖ ಮಾರ್ಗಗಳಲ್ಲಿ

ಮಾತ್ರ ಖಾಸಗಿ ಬಸ್ ಸಂಚರಿಸಲಿವೆ.



'ಅಗತ್ಯ ಬಿದ್ದರೇ ಸೇನೆಯಿಂದ ಚಾಲಕರನ್ನು

ಕರೆತರುತ್ತೇವೆ'







ಸಾರಿಗೆ ನೌಕರರ ಪ್ರತಿಭಟನೆ ಸತತ 2ನೇ

 ದಿನವೂಮುಂದುವರೆದಿದ್ದು, ರಾಜ್ಯದೆಲ್ಲೆಡೆ

 ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.

 ಹೀಗಾಗಿ, ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ರಾಜ್ಯ ಸಾರಿಗೆ

 ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ, ಅಗತ್ಯ ಬಿದ್ದರೇ

 ಸೇನೆಯಿಂದ ಚಾಲಕರನ್ನು ಕರೆತರುತ್ತೇವೆ ಎಂದಿದ್ದಾರೆ.

 ಸರ್ಕಾರ ಪ್ರಯಾಣಿಕರ ಸಮಸ್ಯೆ ಪರಿಹರಿಸಲು 2 ವರ್ಷಗಳ

 ಹಿಂದೆ ಸಾರಿಗೆ ಇಲಾಖೆಯಿಂದ ನಿವೃತ್ತರಾಗಿರುವ ನೌಕರರನ್ನು

ಕರೆಸಿ, ಬಸ್ ಸಂಚಾರ ಯಥಾಸ್ಥಿತಿಗೆ ತರುವ ಪ್ರಯತ್ನ

ನಡೆಸಿದೆ ಎಂದು ಹೇಳಿದ್ದಾರೆ.



Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು