ನಾಳೆ ಒಂದೇ ಒಂದು ಬಸ್ ಕೂಡ ರಸ್ತೆಗಿಳಿಯುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್! BREAKING: ಸಿಎಂ ತುರ್ತು ಸಭೆ: ರಜೆ ರದ್ದು.

 



ನಾಳೆಯಿಂದ ಮುಷ್ಕರ ನಡೆಸಲು ಮುಂದಾಗಿರುವ

ಸಾರಿಗೆ ನೌಕರರು ಹಾಗೂ ಸರ್ಕಾರದ ನಡುವಿನ ಸಮರ

ತಾರಕಕ್ಕೇರಿದೆ. ಒಂದೆಡೆ, ಮುಷ್ಕರ ನಡೆಸಿದರೆ ಎಸ್ಮಾ

ಜಾರಿಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿರುವ ಸರ್ಕಾರ

ನೌಕರರ ರಜೆಯನ್ನು ರದ್ದುಗೊಳಿಸಿದ್ದರೆ, ಇನ್ನೊಂದೆಡೆ

ನಾಳೆ ಒಂದೇ ಒಂದು ಬಸ್ ಕೂಡ ರಸ್ತೆಗಿಳಿಯುವುದಿಲ್ಲ,

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ

ಎಂದು ಸಾರಿಗೆ ನೌಕರರ ಸಂಘಟನೆ ಮುಖಂಡ ಕೋಡಿಹಳ್ಳಿ

ಚಂದ್ರಶೇಖರ್ ಹೇಳಿದ್ದಾರೆ.




ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು

ಪರಿಗಣಿಸಲ್ಲ: ಆರ್.ಅಶೋಕ್

ಆರ್.ಅಶೋಕ್
ಆರ್.ಅಶೋಕ್


ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ

ನೌಕರರು ಸರ್ಕಾರದ ವಿರುದ್ಧ ನಾಳೆ ಪ್ರತಿಭಟನೆ

ನಡೆಸಲಿದ್ದಾರೆ. ಈ ಹಿನ್ನೆಲೆ ತರಬೇತಿ ನೌಕರರಿಂದಲೇ

ಬಸ್ ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಕಳೆದ ಮುಷ್ಕರ

ವೇಳೆಯೂ ಸಂಸ್ಥೆ ಇದೇ ನೀತಿ ಅನುಸರಿಸಿತ್ತು. ಆದರೆ

ಕೆಲವೆಡೆ ಅವಘಡಗಳು ಸಂಭವಿಸಿದ್ದವು. ಈ ಕುರಿತು

ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು, ನೌಕರರ ಬೇಡಿಕೆ

ಪೈಕಿ 8 ಅನ್ನು ಈಡೇರಿಸಿದ್ದೇವೆ. ಆದಾಯದ ಸಾಕಷ್ಟು

ಹಣ ಸಂಬಳಕ್ಕೆ ಹೋಗುವ ಕಾರಣ ಸರ್ಕಾರಿ ನೌಕರರೆಂದು

ಪರಿಗಣಿಸಲ್ಲ ಎಂದರು.



BREAKING: ಸಿಎಂ ತುರ್ತು ಸಭೆ: ರಜೆ ರದ್ದು




ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೃಹ

ಕಚೇರಿ ಕೃಷ್ಣದಲ್ಲಿಂದು ತುರ್ತು ಸಭೆ ಕರೆದಿದ್ದು, 4 ನಿಗಮಗಳ

ಎಂಡಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ,

ನಾಳೆಯಿಂದ ಮುಂದಿನ ಆದೇಶದವರೆಗೆ ಎಲ್ಲಾ ಸಾರಿಗೆ

ನೌಕರರ ರಜೆ ರದ್ದುಗೊಳಿಸಿ ಕೆಎಸ್ ಆರ್ ಟಿಸಿ ನಿರ್ದೇಶಕ

ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದಾರೆ. ವಾರದ

ರಜೆ, ತುರ್ತು ರಜೆ ಹೊರತುಪಡಿಸಿ ಅನಗತ್ಯ ರಜೆ ಹಾಕಿದರೆ

ವೇತನ ಕಡಿತ ಮಾಡಲಾಗುವುದು ಎಂದು ಆದೇಶದಲ್ಲಿ

ತಿಳಿಸಲಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು