ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ! ನಿಯಮ ಉಲ್ಲಂಘನೆ: 6,062 ವಾಹನಗಳು ಜಪ್ತಿ .. ಕೊರೋನಾ ಸುನಾಮಿ

ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್
ಲಸಿಕೆ

 



ದೇಶದ 6 ರಾಜ್ಯಗಳಲ್ಲಿ ಇಂದಿನಿಂದ 18 ವರ್ಷ
ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ.
ಹೌದು, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಛತ್ತೀಸ್
ಗಢ, ಒಡಿಶಾ ಹಾಗೂ ಉತ್ತರ ಪ್ರದೇಶಗಳಲ್ಲಿ ಲಸಿಕೆ
ನೀಡಲಾಗುತ್ತದೆ. ಉಳಿದ ರಾಜ್ಯಗಳಿಗೆ ಕೊರೋನಾ ಲಸಿಕೆ ಪೂರೈಕೆಯಾಗಿಲ್ಲ.

 

ಹಾಗಾಗಿ ಕರ್ನಾಟಕ ಸೇರಿ ಇತರೆ
ರಾಜ್ಯಗಳಲ್ಲಿ ಲಸಿಕೆ ನೀಡಲಾಗಲ್ಲ ಎನ್ನಲಾಗಿದೆ. ಮೂರನೇ
ಹಂತದ ಈ ಲಸಿಕಾ ಅಭಿಯಾನವನ್ನು ಮೇ 1ರಿಂದ
ದೇಶಾದ್ಯಂತ ಆರಂಭಿಸಲಾಗುತ್ತದೆ ಎಂದು ಪ್ರಧಾನಿ ಮೋದಿ
ಘೋಷಿಸಿದ್ದರು.

 


ನಿಯಮ ಉಲ್ಲಂಘನೆ: 6,062 ವಾಹನಗಳು ಜಪ್ತಿ

 

 



ಕೋವಿಡ್ ನಿಯಮ ಉಲ್ಲಂಘಿಸಿ ಅನಗತ್ಯ ಓಡಾಟ
ನಡೆಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಏ.
24ರಿಂದ 30ರ ವರೆಗೆ ಒಟ್ಟು 6,062 ವಾಹನಗಳನ್ನು ಜಪ್ತಿ
ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸರು
ಇಂದು ಮಾಹಿತಿ ನೀಡಿದ್ದಾರೆ. ಈ ಪೈಕಿ 5,502 ದ್ವಿಚಕ್ರ
ವಾಹನಗಳು, 296 ಕಾರು, 264 ಆಟೋಗಳನ್ನು ವಶಕ್ಕೆ
ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಕೊರೋನಾ
ಸೋಂಕು ತಡೆಯಲು ಕರ್ನಾಟಕ ಸರ್ಕಾರವು ಏ.24ರಿಂದ

 

ಮೇ 12ರವರೆಗೆ ಅಂದರೆ ಒಟ್ಟು 15 ದಿನಗಳ ಕಾಲ ಬಿಗಿ
ಕ್ರಮ ಕೈಗೊಂಡಿದೆ.

ಕೊರೋನಾ ಸುನಾಮಿ

 



ದೇಶದಲ್ಲಿ ಕೊರೋನಾ ಸುನಾಮಿ ಬಂದಿದ್ದು, ಒಂದೇ
ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

 

ಕಳೆದ 24 ಗಂಟೆಯಲ್ಲಿ ದಾಖಲೆಯ 4,01,993 ಹೊಸ
ಸೋಂಕು ಪ್ರಕರಣ & 3,523 ಸಾವು ವರದಿಯಾಗಿವೆ
ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ
ನೀಡಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದಿನಾಲೂ 3 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣ ವರದಿಯಾಗುತ್ತಿದ್ದು,
ಇದು ಈವರೆಗೆ ವಿಶ್ವದಲ್ಲಿ ಒಂದೇ ದಿನ ದಾಖಲಾದ ಗರಿಷ್ಠ
ಸಂಖ್ಯೆಯಾಗಿದೆ. ಸದ್ಯ ದೇಶದಲ್ಲಿ 32,68,710 ಸಕ್ರಿಯ
ಪ್ರಕರಣಗಳಿವೆ.
Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು