ನರೇನ್ ಅಕ್ರಮ ಬೌಲಿಂಗ್ ಶೈಲಿ!
ನಿನ್ನೆ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ
ತಂಡದ ಪ್ರಮುಖ ಬೌಲರ್ ಸುನಿಲ್ ನರೇನ್ ಅಕ್ರಮ
ಬೌಲಿಂಗ್ ಶೈಲಿ ಅನುಸರಿಸಿದ್ದಾರೆ ಎಂದು ಆನ್-ಫೀಲ್
ಅಂಪೈರ್‌ಗಳು ದೂರು ನೀಡಿದ್ದಾರೆ. ಸದ್ಯ ನರೇನ್
ಅವರನ್ನು ಎಚ್ಚರಿಕೆ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಸದ್ಯ
ಬೌಲಿಂಗ್ ಮುಂದುವರಿಸಲು ಅನುಮತಿ ನೀಡಲಾಗಿದೆ.
ಇವರ ವಿರುದ್ಧ ಮತ್ತೊಂದು ವರದಿ ದಾಖಲಾದರೆ,
ಟೂರ್ನಿಯಿಂದ ಅಮಾನತುಗೊಳಿಸಲಾಗುತ್ತದೆ
ಎಂದು ಹೇಳಲಾಗಿದೆ. ಈ ಹಿಂದೆ ಕೂಡ ಇದೇ ರೀತಿಯ
ಆರೋಪಗಳು ನರೇನ್ ವಿರುದ್ಧ ಕೇಳಿಬಂದಿದ್ದವು.
ಧೋನಿ ಮತ್ತೊಂದು ದಾಖಲೆ
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಮತ್ತೊಂದು
ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ಹೌದು, ಟಿ20
ಮಾದರಿಯಲ್ಲಿ 300 ಸಿಕ್ಸರ್ ಬಾರಿಸಿದ 3ನೇ ಭಾರತೀಯ
ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.
ನಿನ್ನೆ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಚಾಹಲ್
ಎಸೆದ ಓವರ್ ನಲ್ಲಿ ಸಿಕ್ಸ್ ಬಾರಿಸುವ ಮೂಲಕ ಈ ಸಾಧನೆ
ಮಾಡಿದ್ದಾರೆ. ಇನ್ನು ರೋಹಿತ್ ಶರ್ಮಾ (375), ರೈನಾ
(311) ಮೊದಲ ಎರಡು ಸ್ಥಾನದಲ್ಲಿದ್ದಾರೆ. ಗೇಲ್ (404
ಸಿಕ್ಸರ್) ಒಟ್ಟಾರೆ ನಂ .1 ಸ್ಥಾನದಲ್ಲಿದ್ದಾರೆ.
ತಬ್ಬಿಬ್ಬಾದ ಚಾಹಲ್; ವಿಡಿಯೋ ವೈರಲ್!
ವಾಷಿಂಗ್ಟನ್ ಸುಂದರ್ ಬಾರಿಸಿದ ಸಿಕ್ಸರ್ ಡ್ರೆಸ್ಸಿಂಗ್
ಕೋಣೆಯತ್ತ ಧಾವಿಸುತ್ತಿದ್ದಂತೆ ತಬ್ಬಿಬ್ಬಾದ ಸ್ಪಿನ್ನರ್
ಚಾಹಲ್, ಅದರಿಂದ ತಪ್ಪಿಸಿಕೊಳ್ಳಲು ಡ್ರೆಸ್ಸಿಂಗ್
ಕೋಣೆಯತ್ತ ಓಡುತ್ತಿರುವ ವಿಡಿಯೋವೊಂದು ಸಖತ್
ವೈರಲ್ ಆಗಿದೆ. ಚೆಂಡು ತನ್ನತ್ತ ಬರುತ್ತಿರುವುದನ್ನು
ಕಂಡ ಚಾಹಲ್ ತಬ್ಬಿಬ್ಬಾಗಿರುವ ದೃಶ್ಯ ಕ್ಯಾಮೆರಾದಲ್ಲಿ
ಸೆರೆಯಾಗಿದೆ. 'ಅಬ್ಬಾ.. ಅಂತೂ ಹೊಡೆತ ಒಂದರಿಂದ
ತಪ್ಪಿಸಿಕೊಂಡೆ' ಎಂಬರ್ಥದಲ್ಲಿ ಚಾಹಲ್ ಮುಖದಲ್ಲಿ
ಮೂಡಿದ ನಗುವಿಗೆ ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
0 ಕಾಮೆಂಟ್‌ಗಳು
hrithiksuraj2@gmail.com