ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಲಾಂಚ್

 



ಸರ್ಚ್ ಇಂಚಿನ ದೈತ್ಯ ಗೂಗಲ್ ಕಂಪನಿಯ ಬಹುನಿರೀಕ್ಷಿತ

ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಭಾರತದ

ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಫೋನ್

ಗೂಗಲ್ ಪಿಕ್ಸಲ್ 3ಎ ಸರಣಿಯ ಮುಂದುವರಿದೆ

ಆವೃತ್ತಿಯಾಗಿದೆ. ಇದು ಸ್ಲಿಪ್‌ಕಾರ್ಟ್ ಬಿಗ್ ಬಿಲಿಯನ್

ಡೇಸ್‌ ಸೇಲ್‌ನಲ್ಲಿ ಮಾರಾಟವಾಗಲಿದ್ದು, ಅ.16 ರಿಂದ

ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್ 1080 X

2340 ಪಿಕ್ಸಲ್ ಸ್ಕಿನ್ ರೆಸಲ್ಯೂಶನ್ ಸಾಮರ್ಥ್ಯವನ್ನು

ಹೊಂದಿರುವ 5.8 ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ.


ಭರ್ಜರಿ ಕ್ಯಾಶ್‌ಬ್ಯಾಕ್ ಗೆಲ್ಲಿರಿ!



ಐಆರ್‌ಸಿಟಿಸಿಯ ಆನ್‌ಲೈನ್ ಟಿಕೆಟ್ ಬುಕಿಂಗ್

ಬಳಿಕ ರೈಲು ಟಿಕೆಟ್‌ಗಳನ್ನು ಈಗ ಮತ್ತೊಂದು

ಪ್ಲಾಟ್‌ಫಾರ್ಮ್ ಮೂಲಕ ಕಾಯ್ದಿರಿಸಬಹುದು.

ಶೀಘ್ರದಲ್ಲೇ Amazon.inನಿಂದ ರೈಲು ಟಿಕೆಟ್

ಬುಕಿಂಗ್ ಪ್ರಾರಂಭವಾಗಲಿದೆ. ಅಮೆಜಾನ್‌ನಿಂದ

ಟಿಕೆಟ್ ಕಾಯ್ದಿರಿಸುವ ಗ್ರಾಹಕರಿಗೆ 10% ಕ್ಯಾಶ್‌ಬ್ಯಾಕ್

ದೊರೆಯುತ್ತದೆ. ಇದು ಗರಿಷ್ಠ 1100 ಆಗಿರಬಹುದು. ಅದೇ

ವೇಳೆ ಅಮೆಜಾನ್ ಪ್ರೈಮ್ ಸದಸ್ಯರಿಗೆ 12% ಕ್ಯಾಶ್‌ಬ್ಯಾಕ್

ನೀಡಲಾಗುತ್ತದೆ. ಕ್ಯಾಶ್‌ಬ್ಯಾಕ್ ಕೊಡುಗೆ ಸೀಮಿತ ಅವಧಿಗೆ

ಮಾತ್ರ ಅನ್ವಯವಾಗುತ್ತದೆ.



'ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಪ್ರಾರಂಭಿಸಿದ ಸ್ಕೋಡಾ'



ಸ್ಕೋಡಾ ಇಂಡಿಯಾ ಕಂಪನಿಯು ದೇಶಿಯ

ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ

ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹೊಸ ಕಾರುಗಳ

ಮಾದರಿಯಲ್ಲೇ ವಿವಿಧ ರೀತಿಯ ಆಫರ್ ಗಳನ್ನೂ

ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೂ ಘೋಷಿಸಿದೆ.

ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮೇಲೆ ಆಕರ್ಷಕ

ರಿಯಾಯ್ತಿಗಳೊಂದಿಗೆ 2 ವರ್ಷಗಳ ವಾರಂಟಿ ಅಥವಾ

1.50 ಲಕ್ಷ ಕಿ.ಮೀ ಮೇಲೆ ವಾರಂಟಿ ನೀಡಲಿದ್ದು,

ವಾಹನಗಳ ಖರೀದಿಗಾಗಿ ಆಕರ್ಷಕ ಬಡ್ಡಿದರದಲ್ಲಿ ಸರಳ

ಸಾಲ ಸೌಲಭ್ಯವನ್ನು ಸಹ ಒದಗಿಸಲಿದೆ.


'ಸೇವಾಸಿಂಧು' ಮೂಲಕವೇ ಅರ್ಜಿ ಸಲ್ಲಿಸಬೇಕು..



ವಾಹನ ಮಾಲಿಕತ್ವ ವರ್ಗಾವಣೆ, ಸರಕು ಸಾಗಣೆ ರಹದಾರಿ

& ವಾಹನ ಅರ್ಹತಾ ಪ್ರಮಾಣಪತ್ರಗಳ ಸೇವೆ ಪಡೆಯಲು

ಇನ್ಮುಂದೆ ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್

ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಸಂಬಂಧ ರಾಜ್ಯ

ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ವ್ಯಾಪಾರ

ಸರಳೀಕರಣ & ವ್ಯವಹಾರ ಸ್ನೇಹಿ ವ್ಯವಸ್ಥೆಯನ್ನು

ಜಾರಿಗೆ ತರುವ ಸಲುವಾಗಿ ಸಾರಿಗೆ & ರಸ್ತೆ ಸುರಕ್ಷತೆ

ಇಲಾಖೆಯ ಸಕಾಲ ಸೇವೆಗಳನ್ನು ಆನ್‌ಲೈನ್ ಮೂಲಕ

ನಿರ್ವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು