ರುಸ್ತುಂ-2 ಡೋನ್ ಯಶಸ್ವಿ ಹಾರಾಟ



ಚೀನಾದ ಗಡಿ ಕ್ಯಾತೆ ಮಧ್ಯೆ ಭಾರತೀಯ ವಾಯುಪಡೆಗೆ

ಶಕ್ತಿ ತುಂಬುವ 'ರುಸ್ತುಂ-2' ಡೋನ್ ಪರೀಕ್ಷಾರ್ಥ

ಪ್ರಯೋಗ ಚಿತ್ರದುರ್ಗದ ಕುದಾಪುರ ಡಿಆರ್‌ಡಿಒ

ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿದೆ. ರುಸ್ತುಂ-2

ಸ್ವಯಂಚಾಲಿತ ಸಾಮರ್ಥ್ಯ ಹೊಂದಿದ್ದು, ಸಿಂಥೆಟಿಕ್

ಅಪಾಸ್ಟರ್ ರಾಡಾರ್ ಸಂಪರ್ಕ, ತಕ್ಷಣಕ್ಕೆ ಒದಗುವ

ಅಪಾಯಗಳಿಂದ ಸ್ವಯಂ ರಕ್ಷಣೆ ಹಾಗೂ ಜಾಗೃತಗೊಳ್ಳುವ

ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹಾರಾಟಕ್ಕೆ ತೆರಳಿದಾಗ

ವಾಯುನೆಲೆಯಿಂದ ನಿರಂತರ ಸಂಪರ್ಕ ಹೊಂದಿ ಸಂದೇಶ

ಕಳುಹಿಸುವ ಕಾರ್ಯಕ್ಷಮತೆ ಹೊಂದಿದೆ.



ಭಾರತೀಯ ಗೆಳೆಯರಿಗೆ ಪ್ರೀತಿ ಪೂರ್ವಕ ನಮಸ್ತೆ:ತೈವಾನ್



ತೈವಾನ್ ರಾಷ್ಟ್ರೀಯ ದಿನವನ್ನು ಹೆಮ್ಮೆಯಿಂದ

ಆಚರಿಸಿಕೊಂಡಿದೆ. ಈ ವೇಳೆ ಭಾರತವನ್ನು ತೈವಾನ್

ಸ್ಮರಿಸಿದ್ದು, ಚೀನಾಕ್ಕೆ ಇನ್ನಷ್ಟು ಹೊಟ್ಟೆ ಉರಿಸಿದೆ.

ನಮ್ಮ ಧ್ವಜ ಎತ್ತರದಲ್ಲಿ ಹಾರುತ್ತಿರುವುದನ್ನು ನೋಡಿ

ಹೆಮ್ಮೆಯಾಗುತ್ತಿದೆ. ಈ ಧ್ವಜವನ್ನು ಇಡೀ ಜಗತ್ತು

ಗುರುತಿಸಿದೆ. ನಮಗೆ ಶುಭಾಶಯ ಕೋರಿದ ಎಲ್ಲಾ

ದೇಶಗಳಿಗೂ ಧನ್ಯವಾದಗಳು. ವಿಶೇಷವಾಗಿ ಭಾರತೀಯ

ಗೆಳೆಯರಿಗೆ ಪ್ರೀತಿ ಪೂರ್ವಕ ನಮಸ್ತೇ ಎಂದು ತೈವಾನ್

ಉಪಾಧ್ಯಕ್ಷ ಚಿಂಗ್ ಟಿ ಟೀಟ್ ಮಾಡಿದ್ದಾರೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು