ಕಡಲೆಹಿಟ್ಟಿನ ಫೇಸ್ ಪ್ಯಾಕ್ ಬಳಸಿದ್ದೀರಾ?
ಬಿಸಿಲಿಗೆ ಹೋಗಿ ಬಂದು ನೀವು ಕಪ್ಪಾಗಿದ್ದರೆ ಕಡಲೆಹಿಟ್ಟನ
ಫೇಸ್ ಪ್ಯಾಕ್ ಬಳಸಬಹುದು. ಹಾಲಿನ ಕೆನೆ, ಅಥವಾ
ಹಾಲಿಗೆ ಸ್ವಲ್ಪ ಅರಶಿಣ, ಕಡಲೆ ಹಿಟ್ಟು ಹಾಕಿ ಪೇಸ್ಟ್
ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. 15 ನಿಮಿಷದ
ನಂತರ ತೊಳೆಯಿರಿ. ಅಲ್ಲದೇ ಮೊಡವೆಗಳಿಂದ ಉಂಟಾದ
ಕಪ್ಪು ಕಲೆಗಳನ್ನು ಹೋಗಲಾಡಿಸಲು ಈ ಪ್ಯಾಕ್
ಸಹಾಯಕಾರಿ. ಇದರಿಂದ ತ್ವಚೆಯ ಮೃದುತ್ವ ಹೆಚ್ಚುತ್ತದೆ.
ತ್ವಚೆಯ ಹೊಳಪು ಹೆಚ್ಚುತ್ತದೆ. ಮುಖದ ಮೇಲಿನ ಅನಗತ್ಯ
ಕೂದಲನ್ನು ತೆಗೆದು ಹಾಕುತ್ತದೆ.
ಖಿನ್ನತೆ ಸಮಸ್ಯೆ ನಿವಾರಣೆಗೆ ಈ ಜ್ಯೂಸ್ ಸೇವಿಸಿರಿ...
ನಿರಂತರವಾಗಿ ಮನಸ್ಥಿತಿ ಬದಲಾಗುವುದು, ನಡವಳಿಕೆ
ಬದಲಾವಣೆ, ಬೇಸರ & ಆಸಕ್ತಿ ಕಳೆದುಕೊಳ್ಳುವುದನ್ನು
ಖಿನ್ನತೆ ಎಂದು ಕರೆಯಲಾಗುತ್ತದೆ. ಈ ರೀತಿಯ ಸಮಸ್ಯೆ
ಹೊಂದಿರುವವರು ಅರಿಶಿಣ ಜ್ಯೂಸ್ ಸೇವಿಸಿರಿ. ಈ
ಜ್ಯೂಸ್ ಮಾಡಲು ಬೇಕಾಗಿರುವ ಸಾಮಗ್ರಿಗಳು: ಮಧ್ಯಮ
ಗಾತ್ರ ಸೇಬು, ಮಧ್ಯಮ ಗಾತ್ರ ಕ್ಯಾರೆಟ್, ಸೆಲರಿ, ಶುಂಠಿ
ತುಂಡು, ನಿಂಬೆ, ಸೀಬೆಕಾಯಿ ಅರಿಶಿಣ ಬೇರು ಎಲ್ಲವನ್ನು
ಸೇರಿಸಿಕೊಂಡು ಮಿಕ್ಸಿಗೆ ಹಾಕಿ ರುಬ್ಬಿದರೆ ಜ್ಯೂಸ್
ರೆಡಿಯಾಗುತ್ತದೆ.
ಶ್ವಾಸಕೋಶ ಸಮಸ್ಯೆಗೆ ಕಿತ್ತಳೆ ಹಣ್ಣು ಸೇವಿಸಿ!
ಕಿತ್ತಳೆ ಹಣ್ಣು ಆರೋಗ್ಯಕ್ಕೆ ಸಾಕಷ್ಟು
ಪ್ರಯೋಜನಕಾರಿಯಾಗಿದೆ. ಹುಳಿ ಸಿಹಿ ಹೊಂದಿರುವ
ಈ ಕಿತ್ತಳೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ
ಮಾಡುತ್ತದೆ. ಕಿತ್ತಳೆ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು
ತಗ್ಗಿಸುತ್ತದೆ. ಕಿತ್ತಳೆಯಲ್ಲಿರುವ ಪೊಟ್ಯಾಶಿಯಂ ಅಂಶವು
ಹೃದಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ತ್ವಚೆ , ಶ್ವಾಸಕೋಶ, ಕರುಳಿನ ಕ್ಯಾನ್ಸರ್ ತಡೆಗೂ ಕಿತ್ತಳೆ
ರಾಮಬಾಣವಾಗಿದ್ದು, ಮಲಬದ್ಧತೆ ಸಮಸ್ಯೆ , ರಕ್ತದೊತ್ತಡ
ಸಮಸ್ಯೆಯನ್ನು ನಿವಾರಿಸುತ್ತದೆ.
0 ಕಾಮೆಂಟ್‌ಗಳು
hrithiksuraj2@gmail.com