ತಂಬಾಕು ನಿಷೇಧದ ಕುರಿತಂತೆ ಮಹತ್ವದ ತೀರ್ಮಾನ
ಕೈಗೊಂಡಿರುವ ರಾಜ್ಯ ಸರ್ಕಾರ, ವಾರದೊಳಗೆ
ತಂಬಾಕು ಉತ್ಪನ್ನಗಳ ನಿಷೇಧದ ಬಗ್ಗೆ ಸುಗ್ರೀವಾಜ್ಞೆ
ಹೊರಡಿಸುವುದಾಗಿ ರಾಜ್ಯಪಾಲರಿಗೆ ವರದಿ ಸಲ್ಲಿಸಿದೆ.
ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿದ
ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ,
ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ
ಜಾವೇದ್ ಅಖರ್, ರಾಜ್ಯದಲ್ಲಿ ತಂಬಾಕು ನಿಷೇಧದ
ಬಗ್ಗೆ ಸರ್ಕಾರ ಕೈಗೊಂಡಿರುವ ನಿರ್ಧಾರದ ಕುರಿತು ವರದಿ
ಸಲ್ಲಿಸಿದ್ದಾರೆ.
ತರಕಾರಿ ಬೆಲೆ ಏರಿಕೆ..
ಚಿಸೊಪ್ಪು, ತರಕಾರಿ ಬೆಲೆ ಏರಿಕೆಯಾಗಿದ್ದು,
ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಇತ್ತೀಚೆಗೆ ಸುರಿದ
ಭಾರೀ ಮಳೆ ಹಿನ್ನೆಲೆ ತರಕಾರಿ ಮತ್ತು ಸೊಪ್ಪು ಇಳುವರಿ
ಕಡಿಮೆಯಾಗಿದೆ. ಸ್ಥಳೀಯ ರೈತರ ಬೆಳೆದ ಈರುಳ್ಳಿ ಮಾತ್ರ
ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಮಹಾರಾಷ್ಟ್ರದಿಂದ
ಬಂದಿರುವ ಈರುಳ್ಳಿ 50ರ ಗಡಿದಾಟಿದೆ. ಗ್ರಾಹಕರು ತರಕಾರಿ
ಬೆಲೆ ಕೇಳಿ ಅಚ್ಚರಿ ವ್ಯಕ್ತಪಡಿಸುವಂತಾಗಿದ್ದು, ದುಬಾರಿ
ಬೆಲೆಯ ತರಕಾರಿ ಬದಲು ಪರ್ಯಾಯಗಳತ್ತ ಗೃಹಿಣಿಯರು
ಗಮನ ಹರಿಸುವಂತಾಗಿದೆ.
'ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆ
ಅನುಷ್ಠಾನಕ್ಕೆ ಸಜ್ಜು
ಆತ್ಮ ನಿರ್ಭರ ಯೋಜನೆಗೆ ಬಲ ನೀಡುವ ಒಂದು ಜಿಲ್ಲೆ,
ಒಂದು ಉತ್ಪನ್ನ ಕಾರ್ಯಕ್ರಮಕ್ಕಾಗಿ ರಾಜ್ಯದ ಒಂದೊಂದು
ಜಿಲ್ಲೆಗೂ ಒಂದೊಂದು ಉತ್ಪನ್ನವನ್ನು ಗುರುತಿಸಲಾಗಿದೆ.
ಆಯಾ ಜಿಲ್ಲೆಯ ವೈವಿಧ್ಯ ಅಥವಾ ಅಲ್ಲಿನ ಪ್ರಮುಖ
ಕಸುಬನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಪಿಎಂಎಫ್‌ಎಂಇ ಯಡಿ ಅನುಷ್ಠಾನಗೊಳಿಸಲಾಗುತ್ತಿದೆ.
ಎಲ್ಲಾ ಜಿಲ್ಲೆಗಳಲ್ಲಿ ಈ ಸಂಬಂಧ ಕ್ರಿಯಾ ಯೋಜನೆ
ತಯಾರಿ ಭರದಿಂದ ಸಾಗಿದೆ. ಉಡುಪಿ ಸಾಗರೋತ್ಪನ್ನ
ಸೇರಿದಂತೆ ಅನೇಕ ಕಡೆ ಉತ್ಪನ್ನಗಳನ್ನು ಗುರುತಿಸಲಾಗಿದೆ.
0 ಕಾಮೆಂಟ್‌ಗಳು
hrithiksuraj2@gmail.com