ರೈತರಿಗೆ ಸಿಹಿಸುದ್ದಿ.. ಪರಿಹಾರ ಬರಲಿದೆ!



ರೈತರಿಗೆ ಬರಬೇಕಿರುವ ಬೆಳೆ ವಿಮೆ ಹಣ ಬಿಡುಗಡೆ
ಮಾಡಲು ವಿಮೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ
ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, 2016ರಿಂದ ಬರಬೇಕಿರುವ ಬೆಳೆ ವಿಮೆ ಹಣ
ಬಿಡುಗಡೆಗೆ ವಿಮೆ ಕಂಪನಿಗಳಿಗೆ ಸೂಚಿಸಲಾಗಿದೆ. ವಿಮೆ
ಕಂಪನಿಗಳು ಬಾಕಿ ಉಳಿದ ಹಣ ಸಂದಾಯ ಮಾಡಲು
ಒಪ್ಪಿವೆ. ಇನ್ನು, ಈ ಸಲ ಬೆಳೆ ಸಮೀಕ್ಷೆ ಪೂರ್ಣವಾಗಿದ್ದು,

ರೈತರಿಂದಲೇ ಸಮೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.



148 ಲೈಸೆನ್ಸ್ ರದ್ದು!


ರಾಜ್ಯದ 148 ರಸಗೊಬ್ಬರ ಮಾರಾಟ ಲೈಸೆನ್ಸ್‌ಗಳನ್ನು

ರದ್ದು ಮಾಡಲಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ

ಸಚಿವ ಡಿ.ಬಿ.ಸದಾನಂದಗೌಡ ಗುರುವಾರ ಹೇಳಿದ್ದಾರೆ.

ಮದ್ದೂರಿನಲ್ಲಿ ಮಾತನಾಡಿದ ಅವರು, ಗೋದಾಮುಗಳಲ್ಲಿ

ರಸಗೊಬ್ಬರದ ದಾಸ್ತಾನು ಇದ್ದರೂ ಸಂಗ್ರಹ ಇಲ್ಲ ಎಂದು

ಕೆಲ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ರಸಗೊಬ್ಬರ

ಅಂಗಡಿಗಳ ಮಾಲೀಕರು ಸೇರಿ ರಸಗೊಬ್ಬರದ ಕೃತಕ

ಕೊರತೆ ಸೃಷ್ಟಿಸಿದ್ದರು. ಅಂತಹ ರಸಗೊಬ್ಬರ ಮಾರಾಟ

ಲೈಸೆನ್ಸ್‌ಗಳನ್ನು ರದ್ದು ಮಾಡಲಾಗಿದೆ ಎಂದರು.



ನಾಮಪತ್ರ ಸಲ್ಲಿಕೆ ಅಂತ್ಯ; 96 ಮಂದಿ ಕಣಕ್ಕೆ



ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಇದೇ 28ರಂದು

ನಡೆಯುವ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ

ಪ್ರಕ್ರಿಯೆ ಗುರುವಾರ ಕೊನೆಗೊಂಡಿತು. ನಾಮಪತ್ರಗಳ

ಕ್ರಮಬದ್ಧತೆಯ ಪರಿಶೀಲನೆ ನಾಳೆ ನಡೆಯಲಿದೆ. ಇದೇ

ಸಂದರ್ಭದಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದವರ

ಪಟ್ಟಿಯನ್ನು ಚುನಾವಣೆ ಆಯೋಗ ನಾಳೆ ಸಂಜೆಯೇ

ಪ್ರಕಟಿಸಲಿದ್ದು, ಅಕ್ಟೋಬರ್ 12 ನಾಮಪತ್ರ ಹಿಂದಕ್ಕೆ

ಪಡೆಯಲು ಕೊನೆ ದಿನವಾಗಿದೆ. ಪಕ್ಷೇತರರು ಸೇರಿ ಒಟ್ಟು

96 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು