ಬೆಂಗಳೂರು: ರಾಜ್ಯದಲ್ಲಿ ಶಾಲೆ ಆರಂಭಿಸುವ ಬಗ್ಗೆ ಚರ್ಚೆ
ನಡೆಯುತ್ತಿರುವ ಬೆನ್ನಲ್ಲೇ ಬಿಗ್ ಶಾಕ್ ಎದುರಾಗಿದ್ದು,
ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯಲ್ಲಿ ಪಾಠ
ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಕೊರೋನಾ ತಗುಲಿದ
ಬಳಿಕ ನಾಲ್ಕು ಮಕ್ಕಳಿಗೂ ಸೋಂಕು ತಗುಲಿರುವುದು
ಆತಂಕಕ್ಕೆ ಕಾರಣವಾಗಿದೆ. ಈಚೆಗೆ ಮಾಶಾಳ (ಕಲಬುರಗಿ)
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ ಸೋಂಕು
ದೃಢಪಟ್ಟಿತ್ತು. ಹೀಗಾಗಿ, ವಿದ್ಯಾರ್ಥಿಗಳಿಗೆ ಕೋವಿಡ್
ಪರೀಕ್ಷೆ ನಡೆಸಲಾಗಿದ್ದು, ನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು
ದೃಢಪಟ್ಟಿದೆ.
5, 6 & 7 ನೇ ತರಗತಿ ವಿದ್ಯಾರ್ಥಿಗಳ ಗಮನಕ್ಕೆ..
ಸಂವೇದ ಇ-ಕ್ಲಾಸ್ ಪಾಠ ಸರಣಿಯ ಎರಡನೇ ಅವಧಿ
ಅಕ್ಟೋಬರ್ 12ರಿಂದ ಪ್ರಾರಂಭವಾಗಲಿದೆ ಶಿಕ್ಷಣ ಸಚಿವ
ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಅವಧಿಯಲ್ಲಿ 5, 6,
ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್,
ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು
ಸಮಾಜ ವಿಜ್ಞಾನ ವಿಷಯಗಳಲ್ಲಿ ವಿಡಿಯೋ ಪಾಠಗಳು
DSERT Jnanadeepa abe) Makkalavani
ಯುಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ
ಎಂದು ಮಾಹಿತಿ ನೀಡಿದ್ದಾರೆ.
ಮೊದಲು ಶಾಲೆ ಪ್ರಾರಂಭಿಸಿ: ಮಕ್ಕಳ ಆಯೋಗ
ಶಾಲೆ ಪುನರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ
ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಹಕ್ಕುಗಳ ಆಯೋಗ,
'ಮಕ್ಕಳಿಗಾಗಿ ಶಾಲೆಗಳನ್ನು ತೆರೆಯುವ ಬಗ್ಗೆ ಮಹತ್ವದ
ತೀರ್ಮಾನ ತೆಗೆದುಕೊಳ್ಳದಿದ್ದರೆ, ಮಕ್ಕಳು ಬಾಲ್ಯ
ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಣೆಗೆ
ಒಳಪಡುವ ಸಾಧ್ಯತೆಗಳಿವೆ. 2020-21ನ್ನು ಪರೀಕ್ಷಾರಹಿತ
ಕಲಿಕಾ ವರ್ಷವೆಂದು ಘೋಷಿಸಬೇಕು. 30ಕ್ಕಿಂತ ಕಡಿಮೆ
ಮಕ್ಕಳಿರುವ ಶಾಲೆಗಳನ್ನು ಆರಂಭಿಸಬೇಕು. ಈ ಶಾಲೆಗಳು
ಮೊದಲ 15 ದಿನ ಅರ್ಧ ದಿನ ಕಾರ್ಯನಿರ್ವಹಿಸಬೇಕು'
ಎಂದು ಶಿಫಾರಸು ಮಾಡಿದೆ.
0 ಕಾಮೆಂಟ್‌ಗಳು
hrithiksuraj2@gmail.com