ಬಸ್ ಪಾಸ್ ಹೊಂದಿರುವವರಿಗೆ ಗುಡ್ ನ್ಯೂಸ್ !ರಾಜ್ಯಾದ್ಯಂತ ಇಂದು 1945 ಸರ್ಕಾರಿ ಬಸ್ ಸಂಚಾರ.

 


ಸಾರಿಗೆ ನೌಕರರ ಮುಷ್ಕರ 5 ದಿನಕ್ಕೆ ಕಾಲಿಟ್ಟಿದೆ. 

ಇದೇ ಸಂದರ್ಭದಲ್ಲಿ ಸಾರಿಗೆ ವಿದ್ಯಾರ್ಥಿ ಬಸ್ ಪಾಸು, ಮಾಸಿಕ ಬಸ್ ಪಾಸು ಹೊಂದಿರೋರು ಕಷ್ಟ ಎದುರಿಸುವಂತಾಗಿತ್ತು.

ಹಾಗಾಗಿ ಬಸ್ ಪಾಸ್ ಅವಧಿಯನ್ನು ಮುಷ್ಕರ ಎಷ್ಟು ದಿನ ನಡೆಯುತ್ತೋ, ಅಷ್ಟು ದಿನದ ಅವಧಿಯನ್ನು ಮುಂದುವರಿಸಲಾಗುತ್ತದೆ ಎಂಬುದಾಗಿ KSRTC ತಿಳಿಸಿದೆ.

ಈ ಕುರಿತಂತೆ KSRTC ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟ ಪಡಿಸಿದ್ದು, ಮುಷ್ಕರದ ಅವಧಿಯ ದಿನಗಳಿಗೆ ಬಸ್ ಪಾಸು ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.


ರಾಜ್ಯಾದ್ಯಂತ ಇಂದು 1945 ಸರ್ಕಾರಿ 

ಬಸ್ ಸಂಚಾರ


ಸಾರಿಗೆ ನೌಕರರು ಅನಿರ್ದಿಷ್ಟಾವಧಿವರೆಗೆ ಮುಷ್ಕರ

ಕೈಗೊಂಡಿದ್ದಾರೆ. ಈ ನಡುವೆಯೂ ಇಂದು ಮಧ್ಯಾಹ್ನ

1 ಗಂಟೆವರೆಗೆ 1945 ಬಸ್ ಗಳು ಸಂಚರಿಸುತ್ತಿವೆ.

ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ, ರಾಜ್ಯಾದ್ಯಂತ

ಸದ್ಯ 922 ಕೆಎಸ್‌ಆರ್ ಟಿಸಿ, 484 ಎನ್‌ಇಕೆಆರ್ ಟಿಸಿ,

233 ಬಿಎಂಟಿಸಿ ಹಾಗೂ 306 ಎನ್ ಡಬ್ಲ್ಯೂಕೆಆರ್

ಟಿಸಿ ಬಸ್ ಗಳು ಸಂಚರಿಸುತ್ತಿವೆ. ಇಲಾಖೆಯು ಕೆಲ

ಪ್ರತಿಭಟನಾನಿರತರನ್ನು ವರ್ಗಾವಣೆ ಮಾಡಿರುವ

ಹಿನ್ನೆಲೆಯಲ್ಲಿ ಭಯದಿಂದ ಕೆಲವರು ಕರ್ತವ್ಯಕ್ಕೆ

ಹಾಜರಾಗಿದ್ದಾರೆ ಎನ್ನಲಾಗುತ್ತಿದೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು