ಎಣ್ಣೆ ಹೋಂ ಡೆಲಿವರಿಗೆ ಅನುಮತಿ ! ಇಂದಿನಿಂದ ಲಸಿಕಾ ಉತ್ಸವ.

 ಎಣ್ಣೆ ಹೋಂ ಡೆಲಿವರಿಗೆ ಅನುಮತಿ !



ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ

ಮಹಾರಾಷ್ಟ್ರದಲ್ಲಿ ನೈಟ್ ಕರ್ಪ್ಯೂ & ವಾರಾಂತ್ಯದ

ಲಾಕ್ ಡೌನ್ ಹೇರಲಾಗಿದೆ. 

ಈ ಮಧ್ಯೆ, ಮುಂಬೈನಲ್ಲಿ ಪರವಾನಗಿಯುಳ್ಳ ಮದ್ಯದಂಗಡಿಗಳು ವಾರದ ಎಲ್ಲಾ ದಿನ ಮದ್ಯವನ್ನುಹೋಂ ಡೆಲಿವರಿ ಮಾಡಲು ಎಂದು ಬಿಎಂಸಿ ಅನುಮತಿ ನೀಡಿದೆ. 

ಡೆಲಿವರಿ ಬಾಯ್ ಮಾಸ್ಕ್ ಧರಿಸಿ,ಸ್ಯಾನಿಟೈಸರ್ ಬಳಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಣ್ಣೆ ಹೋಂ ಡೆಲಿವರಿ ಮಾಡಬಹುದೆಂದು ತಿಳಿಸಲಾಗಿದೆ. 

ಇನ್ನು,ರಾಜ್ಯದ 7 ಜಿಲ್ಲೆಗಳಲ್ಲಿ ನಿನ್ನೆಯಿಂದ ಕೊರೋನಾ ಕರ್ಪ್ಯೂ ಆರಂಭವಾಗಿದೆ.


ಇಂದಿನಿಂದ ಲಸಿಕಾ ಉತ್ಸವ !



ಪ್ರಧಾನಿ ಮೋದಿ ಅವರ ಸೂಚನೆಯ ಮೇರೆಗೆ ದೇಶಾದ್ಯಂತ

ಇಂದಿನಿಂದ ಏ.14ರವರೆಗೆ ಲಸಿಕಾ ಉತ್ಸವವನ್ನು

ಆಯೋಜಿಸಲಾಗುತ್ತಿದೆ. ಅರ್ಹರಿರುವ ಹೆಚ್ಚು ಹೆಚ್ಚು

ಜನರಿಗೆ ಲಸಿಕೆ ಕೊರೋನಾ ನೀಡುವುದು ಈ ಉತ್ಸವದ

ಉದ್ದೇಶವಾಗಿದೆ. ಲಸಿಕಾ ಉತ್ಸವದ ವೇಳೆ ಅರ್ಹ ಎಲ್ಲರೂ

ಲಸಿಕೆ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರಗಳು ಜನರಿಗೆ

ಕರೆ ನೀಡುತ್ತಿವೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಅವರು ಟ್ವಿಟ್ ಮಾಡಿದ್ದು, 45 ವರ್ಷದ ಮೇಲಿನ ಎಲ್ಲರೂ

ತಪ್ಪದೇ ಇಂದೇ ಕೊರೋನಾ ಲಸಿಕೆ ಹಾಕಿಸಿಕೊಳ್ಳಿ ಎಂದು

ಮನವಿ ಮಾಡಿದ್ದಾರೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು