ಯೂರಿನ್ ಟೆಸ್ಟ್'ನಿಂದ ರೋಗ ಲಕ್ಷಣ ಊಹಿಸಲುಸಾಧ್ಯ: ಸಂಶೋಧಕರು!ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 20 ಬೆಡ್ ವ್ಯವಸ್ಥೆ:ಸೋಮಣ್ಣ!ದೇಶದ 10 ರಾಜ್ಯಗಳಲ್ಲೇ ಗರಿಷ್ಠ ಸಾವು! ಹೆಲಿಕಾಪ್ಟರ್ ಸ್ಯಾನಿಟೈಸ್ ಗೆ 8 ಪೈಲಟ್ ಸಿದ್ಧ: ಖಾನ್....

ಯೂರಿನ್ ಟೆಸ್ಟ್'ನಿಂದ ರೋಗ ಲಕ್ಷಣ ಊಹಿಸಲು ಸಾಧ್ಯ: ಸಂಶೋಧಕರು



ಕೊರೋನಾ ಸೋಂಕಿತರ ಮೂತ್ರ ಪರೀಕ್ಷೆಯಿಂದ
ರೋಗದ ತೀವ್ರತೆ ಊಹಿಸಲು ಸಾಧ್ಯ ಎಂಬುದನ್ನು
ಅಮೆರಿಕಾದ ಡೆಟ್ರಾಯಿಟ್‌ನಲ್ಲಿರುವ ವೇಯ್ ಸ್ಟೇಟ್
ಯೂನಿವರ್ಸಿಟಿಯ ಸಂಶೋಧಕರ ನೇತೃತ್ವದ
ಅಧ್ಯಯನ ತಂಡದ ಸಂಶೋಧನೆಯಿಂದ ಗೊತ್ತಾಗಿದೆ.
ಸದ್ಯ ಕೊರೋನಾ ಸೋಂಕಿತರ ರೋಗದ ಲಕ್ಷಣವನ್ನು
ತಿಳಿದುಕೊಳ್ಳಲು ಅವರ ರಕ್ತದ ಮಾದರಿಯನ್ನು
ಬಳಸಿಕೊಳ್ಳಲಾಗುತ್ತಿದೆ. ಆದರೆ, ಮೂತ್ರದ ಮೂಲಕ
ರೋಗದ ಲಕ್ಷಣಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು
ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 20 ಬೆಡ್ ವ್ಯವಸ್ಥೆ:ಸೋಮಣ್ಣ


ರೆಂಡಿಸಿವಿರ್ ಔಷಧದ ಬಗ್ಗೆ ಆರೋಗ್ಯ ಸಚಿವ
ಡಾ.ಕೆ.ಸುಧಾಕರ್ ಅವರೊಂದಿಗೆ ಮಾತನಾಡುತ್ತೇನೆ
ಎಂದು ಸಚಿವ ವಿ.ಸೋಮಣ್ಣ ಅವರು ಇಂದು
ತಿಳಿಸಿದ್ದಾರೆ. ಬೆಂಗಳೂರಿನ ಪೂರ್ವ ವಲಯದ ಸಭೆ
ಬಳಿಕ ಮಾತನಾಡಿದ ಅವರು, ಪ್ರತೀ ವಿಧಾನಸಭಾ
ಕ್ಷೇತ್ರದಲ್ಲಿ 20 ಮಂದಿಗೆ ವೆಂಟಿಲೇಟರ್‌ ಹಾಗೂ ಆಕ್ಸಿಜನ್
ಯುಕ್ತ ಬೆಡ್ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯವಾದಷ್ಟು
ಲಸಿಕೆಯನ್ನೂ ಕೂಡ ರವಾನಿಸಲಾಗುತ್ತದೆ. ಈ ಕೆಲಸಗಳು
ಗೋವಿಂದರಾಜನಗರದಲ್ಲಿ ಇಂದು ಸಂಜೆಯಿಂದಲೇ
ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ದೇಶದ 10 ರಾಜ್ಯಗಳಲ್ಲೇ ಗರಿಷ್ಠ ಸಾವು

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೋನಾ
ಸೋಂಕಿನಿಂದ ದಾಖಲೆಯ 3,645 ಸಾವುಗಳು
ವರದಿಯಾಗಿವೆ. ಇದು ಒಂದೇ ದಿನದಲ್ಲಿ ವರದಿಯಾದ
ಗರಿಷ್ಠ ಸಾವಿನ ಸಂಖ್ಯೆಯಾಗಿದೆ. ಹೊಸ ಸಾವುಗಳಲ್ಲಿ
ಶೇಕಡ 78.71% ಸಾವುಗಳು 10 ರಾಜ್ಯಗಳಲ್ಲೇ
ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವುಗಳು
ಸಂಭವಿಸಿವೆ (1,035), ನಂತರದ ಸ್ಥಾನಗಳಲ್ಲಿ ದೆಹಲಿ
(368), ಛತ್ತೀಸ್‌ಗಡ (279), ಉತ್ತರ ಪ್ರದೇಶ (265)
ಮತ್ತು ಕರ್ನಾಟಕ (229) ಇದೆ.

ಹೆಲಿಕಾಪ್ಟರ್ ಸ್ಯಾನಿಟೈಸ್ ಗೆ 8 ಪೈಲಟ್ ಸಿದ್ಧ: ಖಾನ್

ಹೆಲಿಕಾಪ್ಟರ್‌ ಮುಖೇನ ಸ್ಯಾನಿಟೈಸ್ ಮಾಡಲು 8
ಮಂದಿ ಪೈಲಟ್ ಗಳು ಸಿದ್ಧರಿದ್ದಾರೆ. ಆದರೆ ಇದಕ್ಕೆ
ಡಿಜಿಸಿಎ ಅನುಮತಿ ನೀಡಬೇಕಿದೆ ಎಂದು ಬಿಬಿಎಂಪಿ
ಹಿರಿಯ ಅಧಿಕಾರಿ ಸರ್ಫಾರಾಜ್ ಖಾನ್ ಅವರು
ಇಂದು ತಿಳಿಸಿದ್ದಾರೆ. ಈ ಹೇಳಿಕೆಗೆ ಸಭೆಯಲ್ಲಿ ಸಚಿವ
ವಿ.ಸೋಮಣ್ಣ, ಅದೇನು ಮಾಡಬೇಕೋ ಮಾಡಪ್ಪ. ನೀನು
ಏನು ಬೇಕಾದರೂ ಮಾಡಬಹುದು. ಆದರೆ ನೀನು ಕೈಕಟ್ಟಿ
ಕುಳಿತುಕೊಂಡಂತಿದೆ. ಸದ್ಯಕ್ಕೆ ಹೆಲಿಕಾಪ್ಟರ್ ಸ್ಯಾನಿಟೈಸ್
ಬೇಡ. ಎಂದಿನಂತೆಯೇ ಸ್ಯಾನಿಟೈಸ್ ಮಾಡು ಎಂದು
ಸೂಚಿಸಿದರು.






Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು