ಟಾಯ್ಲೆಟ್ ನಲ್ಲಿ ಬಿದ್ದು ಸೋಂಕಿತೆ ಮೃತ್ಯು! ಕೊರೋನಾ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆಯೇ ಸರ್ಕಾರ!ಒಂದೇ ಆಂಬುಲೆನ್ಸ್ ಒಳಗೆ 22 ಶವ!...

 ಟಾಯ್ಲೆಟ್ ನಲ್ಲಿ ಬಿದ್ದು ಸೋಂಕಿತೆ ಮೃತ್ಯು!


ಕೋಲಾರದ ಕೆಜಿಎಫ್ ಆಸ್ಪತ್ರೆಯಲ್ಲಿ ಸೋಂಕಿತ 55
ವರ್ಷದ ಮಹಿಳೆಯನ್ನು ದಾಖಲಿಸಲಾಗಿತ್ತು. ಇಂದು ಆಕೆ
ಶೌಚಗೃಹಕ್ಕೆ ತೆರಳಿದ್ದಾಗ ಜಾರಿಬಿದ್ದು ಮೃತಪಟ್ಟಿದ್ದಾರೆ
ಎನ್ನಲಾಗಿದೆ. ಮಾತ್ರವಲ್ಲ ಸೋಂಕಿತೆಯ ಶವವನ್ನು
ಟಾಯ್ಲೆಟ್ ಪಕ್ಕದಲ್ಲೇ ಇರಿಸಲಾಗಿದೆ ಎಂಬ ಆರೋಪ
ಕೇಳಿಬಂದಿದೆ. ಇತ್ತ ಅಮ್ಮನ ಅಗಲಿಕೆಯ ನೋವಿನಿಂದ
ದುಃಖಿತಳಾದ ಪುತ್ರಿ, ರಸ್ತೆಯಲ್ಲಿ ಒದ್ದಾಡಿ ಮೂರ್ಛ ಹೋದ
ಪ್ರಸಂಗವೂ ನಡೆದಿದೆ. ಈ ದುರವಸ್ಥೆಗೆ ಹೊಣೆ ಯಾರು?

ಕೊರೋನಾ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆಯೇ
ಸರ್ಕಾರ?!


ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ
15 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಆದರೆ ಜಿಲ್ಲಾಸ್ಪತ್ರೆಯ ಹೆಲ್ ಬುಲೆಟಿನ್ ನಲ್ಲಿ
ಕಡಿಮೆ ಸಾವಿನ ಪ್ರಮಾಣ ತೋರಿಸಲಾಗುತ್ತಿದ್ದು,
ಮುಚ್ಚಿಡಲಾಗುತ್ತಿದೆ ಎಂದು ಮೃತರ & ರೋಗಿಗಳ
ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡ ಇದೇ ಸ್ಥಿತಿ
ಮುಂದುವರಿದಿರಬಹುದೇ ಎಂಬ ಅನುಮಾನ
ಕಾಡಲಾರಂಭಿಸಿದೆ. ಯಾದಗಿರಿಯಲ್ಲಿ ನಿನ್ನೆ ನಾಲ್ವರು
ಸಾವನ್ನಪ್ಪಿದ್ದದ್ದಾರೆ ಎಂದು ಪ್ರಕಟಿಸಲಾಗಿತ್ತು.


ಒಂದೇ ಆಂಬುಲೆನ್ಸ್ ಒಳಗೆ 22 ಶವ!

ದೇಶದೆಲ್ಲೆಡೆ ಸೋಂಕಿತರ ಅಂತ್ಯಸಂಸ್ಕಾರವೇ ದೊಡ್ಡ
ಸವಾಲಾಗಿದೆ. ಈ ಹಿನ್ನೆಲೆ ಒಂದೇ ಆಂಬುಲೆನ್ಸ್ ಒಳಗೆ 22
ಕೊರೋನಾ ಸೋಂಕಿತರ ಶವಗಳನ್ನು ಹೊತ್ತೊಯ್ದಿರುವ
ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಬಳಿಕ
ಈ ಶವಗಳಿಗೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಈ ದೃಶ್ಯವನ್ನು ಸೋಂಕಿತರ ಸಂಬಂಧಿಗಳು ವಿಡಿಯೋ
ಮಾಡಲು ಪ್ರಯತ್ನಿಸಿದ್ದು, ಪೊಲೀಸರು ಅವರ ಮೊಬೈಲ್
ಕಸಿದು ಅಂತ್ಯಕ್ರಿಯೆಯಾದ ಬಳಿಕ ವಾಪಾಸ್ ನೀಡಿದ್ದಾರೆ.
ಇದೀಗ ಜಿಲ್ಲಾಡಳಿತ ತನಿಖೆಗೆ ಮುಂದಾಗಿದೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು