ಮೇ.4ರವರೆಗೆ ಕರ್ನಾಟಕ ಲಾಕ್‌ಡೌನ್? 'ನಾನು ಮದುಮಗ, ಫೀಸ್ ಬಿಟ್ಟಿಡಿ..'

 ಮೇ.4ರವರೆಗೆ ಕರ್ನಾಟಕ ಲಾಕ್‌ಡೌನ್?



ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್‌ ಬೇಕು-ಬೇಡ

ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸಿಎಂ ಬಿ.ಎಸ್.ವೈ

ಇಂದು ಸಂಪುಟ ಸಭೆಯಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ

ತೆಗೆದುಕೊಳ್ಳುವ ಸಾಧ್ಯತೆಯಿದೆ. ವೀಕೆಂಡ್ ಕರ್ಪ್ಯೂ

ಮಾದರಿಯಲ್ಲಿ ವಾರದ ಎಲ್ಲಾ ದಿನ ಬಂದ್ ಇರಬೇಕು

ಇಲ್ಲದಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ. ವಾರದ ಎಲ್ಲಾ

ದಿನವೂ ಕಟ್ಟುನಿಟ್ಟಿನ ಕರ್ಪ್ಯೂ ಜಾರಿಯಲ್ಲಿದ್ದರೆ ಜನ

ಗುಂಪು ಸೇರಲು ಆಸ್ಪದ ಇರುವುದಿಲ್ಲ ಎಂಬ ಅಭಿಪ್ರಾಯ

ಇದ್ದು, ಈ ಬಗ್ಗೆ ಸಿಎಂ ಇಂದು ತೀರ್ಮಾನ ಮಾಡಲಿದ್ದಾರೆ.


ದೆಹ್ರಾಡೂನ್ ನಲ್ಲಿ ಇಂದಿನಿಂದ ಕೊರೋನಾ ಕರ್ಪ್ಯೂ


ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ

ಉತ್ತರಾಖಂಡ್ ರಾಜಧಾನಿ ದೆಹ್ರಾಡೂನ್ ನಲ್ಲಿ ಇಂದು

ಸಂಜೆ 7 ಗಂಟೆಯಿಂದ ಮೇ 3ರ ಬೆಳಿಗ್ಗೆ 5 ಗಂಟೆಯವರೆಗೆ

ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಈ

ವೇಳೆ ರಿಷಿಕೇಶ್, ಕೆಂಟ್ & ಕ್ಲಮೆಂಟೋನ್ ನಲ್ಲಿ

ಸಂಪೂರ್ಣ ಕರ್ಪ್ಯೂ ಇರಲಿದೆ ಎಂದು ದೆಹ್ರಾಡೂನ್

ಜಿಲ್ಲಾಧಿಕಾರಿ ಆಶಿಶ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಪೆಟ್ರೋಲ್-ಗ್ಯಾಸ್ ಪಂಪ್, ಮೆಡಿಕಲ್ ತೆರೆದಿರಲಿದ್ದು,

ಅಗತ್ಯ ವಸ್ತುಗಳ ಅಂಗಡಿಗಳಿಗೆ ಸಂಜೆ 4 ಗಂಟೆಯವರೆಗೆ

ಮಾತ್ರ ಅನುಮತಿ ನೀಡಲಾಗಿದೆ.



'ನಾನು ಮದುಮಗ, ಫೀಸ್ ಬಿಟ್ಟಿಡಿ..'



ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮದುಮಗ, ನಾನೇ

ಮದುಮಗ, ಮುಹೂರ್ತಕ್ಕೆ ತಡವಾಗುತ್ತಿದೆ ಬಿಡಿ ಸಾರ್

ಎಂದು ಮನವಿ ಮಾಡಿದ ಘಟನೆ ಬೆಂಗಳೂರಿನಲ್ಲಿ

ನಡೆದಿದೆ. ಇಬ್ಬರು ಸವಾರರಿದ್ದ ಬೈಕ್ ನಿಲ್ಲಿಸಿ ಹೊರಗೆ

ಬಂದಿದ್ದೇಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಆಗ, ನಾನು

ಮದುಮಗ ಇವರು ನನ್ನ ತಂದೆ. ಮದುವೆ ಮಾಡಿಕೊಳ್ಳಲು

ಹೋಗುತ್ತಿದ್ದೇನೆ ಎಂದಿದ್ದು, ಆಶ್ಚರ್ಯಗೊಂಡ

ಪೊಲೀಸರು, ಮದುವೆ ಕಾರ್ಡ್ ನೋಡಿ ಕಳುಹಿಸಿದ್ದಾರೆ.

ಕೊರೋನಾದಿಂದ ಆಡಂಬರಕ್ಕಂತೂ ಬ್ರೇಕ್ ಬಿದ್ದಿದೆ.

ನೀವೇನಂತೀರಿ?





Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು