ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಪ್ರತ್ಯೇಕ ಸುದ್ದಿಗಳು... 'ರಾಜ್ಯದ ಎಲ್ಲಾ ಜನತೆಗೆ ಉಚಿತ ಲಸಿಕೆ ಕೊಡಿ' !ಸಕ್ರಿಯ ಕೊರೋನಾ ಪ್ರಕರಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

 ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಪ್ರತ್ಯೇಕ ಸುದ್ದಿಗಳು...




ಅವಿದ್ಯಾವಂತರಿಗೆ ಅಧಿಕಾರ ಕೊಟ್ಟರೆ ಹೀಗೆಯೇ

ಆಗುವುದು. ಐಎಎಸ್, ಕೆಎಎಸ್ ಮಾಡಿರುವವರು ಸಿಎಂ,

ಪಿಎಂ ಆಗಲಿ ಎಂದು ಕೋವಿಡ್ ನಿಂದ ಸಾವನ್ನಪ್ಪಿದ್ದ

ವ್ಯಕ್ತಿಯ ಪುತ್ರನ ಸ್ನೇಹಿತ ಶ್ರೀನಿವಾಸ್ ಎಂಬುವವರು

ಆಕ್ರೋಶ ವ್ಯಕ್ತಪಡಿಸಿದ್ದಾರೆ.

>ಹೈಕೋರ್ಟ್ ಮುಖೇನ ಬೇಡಿಕೆ ಸಲ್ಲಿಸಿದರೂ ಮೆಡಿಕಲ್

ಆಕ್ಸಿಜನ್ ಲಭ್ಯವಾಗಿಲ್ಲ. ಪರಿಣಾಮ ಉಸಿರಾಟ ಸಮಸ್ಯೆ

ಎದುರಿಸುತ್ತಿದ್ದ 25 ರೋಗಿಗಳು ನಮ್ಮ ಆಸ್ಪತ್ರೆಯಲ್ಲಿ

ಕೊನೆಯುಸಿರೆಳೆದಿದ್ದಾರೆ ಎಂದು ದೆಹಲಿಯ ಜೈಪುರ

ಗೋಲ್ಡನ್ ಆಸ್ಪತ್ರೆ ವೈದ್ಯರು ಆರೋಪಿಸಿದ್ದಾರೆ.

'ರಾಜ್ಯದ ಎಲ್ಲಾ ಜನತೆಗೆ ಉಚಿತ ಲಸಿಕೆ ಕೊಡಿ'



ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ

ಲಸಿಕೆ ನೀಡಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ

ತೀರ್ಮಾನದಂತೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ

ಆರೂವರೆ ಕೋಟಿ ಜನತೆಗೂ ಉಚಿತವಾಗಿ ಲಸಿಕೆಯನ್ನು

ನೀಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಮಾಜಿ

ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಸರ್ಕಾರ

ಬಡವ-ಬಲ್ಲಿದನೆಂಬ ತಾರತಮ್ಯ ತೋರದೆ ರಾಜ್ಯದ

ಎಲ್ಲಾ ಜನತೆಗೆ ಉಚಿತವಾಗಿ ಲಸಿಕೆ ನೀಡುವ ಮಹತ್ವದ

ನಿರ್ಧಾರ ತೆಗೆದುಕೊಳ್ಳಬೇಕು ಎಂದು ಟ್ವಿಟ್ ಮೂಲಕ

ಆಗ್ರಹಿಸಿದ್ದಾರೆ.


ಸಕ್ರಿಯ ಕೊರೋನಾ ಪ್ರಕರಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ



ನೆರೆಯ ಮಹಾರಾಷ್ಟ್ರದಲ್ಲಿ ಒಟ್ಟು 6,93,632 ಸಕ್ರಿಯ

ಕೊರೋನಾ ಸೋಂಕು ಪ್ರಕರಣಗಳಿದ್ದು, ದೇಶದಲ್ಲೇ

ಮೊದಲ ಸ್ಥಾನದಲ್ಲಿದೆ. ಇನ್ನು ಇದೇ ವಿಚಾರದಲ್ಲಿ ಉತ್ತರ

ಪ್ರದೇಶದ ನಂತರ ಕರ್ನಾಟಕ 3ನೇ ಸ್ಥಾನದಲ್ಲಿದ್ದು,

ರಾಜ್ಯದಲ್ಲಿ 2,14,330 ಸೋಂಕು ಪ್ರಕರಣಗಳು

ಸಕ್ರಿಯವಾಗಿವೆ. ಇನ್ನು ಉತ್ತರ ಪ್ರದೇಶದಲ್ಲಿ 2,73,653,

ಕೇರಳದಲ್ಲಿ 1,79,331, ಛತ್ತೀಸ್ ಗಢದಲ್ಲಿ 1,23,479

ಹಾಗೂ ರಾಜಸ್ಥಾನದಲ್ಲಿ 1,17,294 ಮಂದಿ ಸೋಂಕಿತರಿಗೆ

ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ.


Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು