ಆಕ್ಸಿಜನ್ ಸಾಗಾಟಕ್ಕೆ ಅಡ್ಡಿಪಡಿಸಿದರೆನೇಣು: ಹೈಕೋರ್ಟ್ ಎಚ್ಚರಿಕೆ ! ಒಂದೇ ಗ್ರಾಮದ 58 ಮಂದಿಗೆ ಕೊರೋನಾ ದೃಢ! BREAKING:ಸೋಮವಾರದಿಂದ 100% ಲಾಕ್ಡೌನ್? ದೆಹಲಿಯಲ್ಲಿ ಸಾವಿನ ರೌದ್ರಾವತಾರ!

 ಆಕ್ಸಿಜನ್ ಸಾಗಾಟಕ್ಕೆ 
ಅಡ್ಡಿಪಡಿಸಿದರೆನೇಣು:

ಹೈಕೋರ್ಟ್ ಎಚ್ಚರಿಕೆ



ಆಕ್ಸಿಜನ್ ಟ್ಯಾಂಕರ್‌ ಭರ್ತಿ, ಸಾಗಾಟಕ್ಕೆ ಕೇಂದ್ರ ಅಥವಾ

ರಾಜ್ಯ ಸರ್ಕಾರದ ಯಾರಾದರೂ ಅಡ್ಡಿಪಡಿಸಿದರೆ

ಅಂಥವರನ್ನು ಸುಮ್ಮನೆ ಬಿಡುವುದಿಲ್ಲ. ಕ್ರಮ ಕೈಗೊಂಡು

ನೇಣಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಇಂದು

ಖಡಕ್ ಎಚ್ಚರಿಕೆ ನೀಡಿದೆ. ಈ ನಡುವೆ ಆಕ್ಸಿಜನ್

ಕೊರತೆಯಿಂದ ಕೊರೋನಾ ಸೋಂಕಿತರು ಸಾವನ್ನಪ್ಪಿದಲ್ಲಿ

ಅದಕ್ಕೆ ಆಸ್ಪತ್ರೆ ಹೊಣೆಯಲ್ಲ, ರೋಗಿಯ ಸಂಬಂಧಿಕರೇ

ಹೊಣೆ ಎಂದಿರುವ ಘೋಷಣಾ ಪತ್ರಕ್ಕೆ ದೆಹಲಿಯ

ಆಸ್ಪತ್ರೆಗಳು ಸಹಿ ಹಾಕಿಸಿಕೊಳ್ಳುತ್ತಿರುವುದು ಕಂಡು

ಬಂದಿದೆ.


ಒಂದೇ ಗ್ರಾಮದ 58 ಮಂದಿಗೆ ಕೊರೋನಾ ದೃಢ



ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ

ವೆಂಕಟಾಪುರದಲ್ಲಿ 58 ಮಂದಿಗೆ ಕೊರೋನಾ ಸೋಂಕು

ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಡೀ

ಗ್ರಾಮವನ್ನು ಸೀಲ್‌ ಡೌನ್ ಮಾಡಿದ್ದು, ಗ್ರಾಮದಿಂದ

ಯಾರೊಬ್ಬರೂ ಹೊರ ಬರದಂತೆ ನಿರ್ಬಂಧ ವಿಧಿಸಿದ್ದಾರೆ.

ಗ್ರಾಮದಲ್ಲಿ ಪೊಲೀಸರು ಮತ್ತು ಹೋಂ ಗಾರ್ಡ್ ಗಳನ್ನು

ನಿಯೋಜಿಸಲಾಗಿದ್ದು, ಗ್ರಾಮದ ಒಳ ಪ್ರವೇಶಕ್ಕೂ ಕೂಡ

ಯಾರಿಗೂ ಅವಕಾಶ ಮಾಡಿಕೊಡಲಾಗುತ್ತಿಲ್ಲ. ಗ್ರಾಮದಲ್ಲಿ

ಒಟ್ಟು 350 ಮಂದಿ ವಾಸಿಸುತ್ತಿದ್ದಾರೆ.


BREAKING:ಸೋಮವಾರದಿಂದ 100% ಲಾಕ್ಡೌನ್?



ಕರ್ನಾಟಕದಲ್ಲಿ ಕೊರೋನಾ ಸೋಂಕು ಪ್ರಕರಣಗಳು

ಏರಿಕೆಯಾಗುತ್ತಲೇ ಇರುವ ಕಾರಣ ಸರ್ಕಾರವು ಗಂಭೀರ

ಚಿಂತನೆ ನಡೆಸಿದ್ದು, ಶೇ.100ರಷ್ಟು ಲಾಕ್ ಡೌನ್ ಹೇರಲು

ಚಿಂತನೆ ನಡೆಸುತ್ತಿದೆ ಎಂದು ಸಿಎಸ್ ಪಿ.ರವಿಕುಮಾರ್

ಅವರೇ ಮಾಧ್ಯಮಗಳಿಗೆ ಸುಳಿವು ನೀಡಿದ್ದಾರೆ. ಹಾಗಾಗಿ

ಸೋಮವಾರದಿಂದ ಸಂಪೂರ್ಣ ಲಾಕ್ ಡೌನ್ ಹೇರಲು

ಸರ್ಕಾರ ಚಿಂತನೆ ನಡೆಸಿದ್ದು, ಸದ್ಯ ಲಾಕ್ ಡೌನ್

ಹೇರುವುದು ಅನಿವಾರ್ಯ ಕೂಡ ಎಂದು ಹೇಳಲಾಗುತ್ತಿದೆ.

ಆದರೆ ಈ ಬಗ್ಗೆ ಸರ್ಕಾರ ಇನ್ನಷ್ಟೇ ಅಧಿಕೃತವಾಗಿ ಘೋಷಣೆ

ಮಾಡಬೇಕಿದೆ. ಇದಕ್ಕೆ ನೀವೇನಂತೀರಿ?


ದೆಹಲಿಯಲ್ಲಿ ಸಾವಿನ ರೌದ್ರಾವತಾರ!



ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ತುಂಬಾ

ಹದಗೆಟ್ಟಿದೆ. ಆಮ್ಲಜನಕದ ಕೊರತೆಯು ಇಲ್ಲಿನ

ಕೊರೋನಾ ರೋಗಿಗಳನ್ನು ತೀವ್ರವಾಗಿ ಬಾಧಿಸುತ್ತಿದೆ.

ಆಮ್ಲಜನಕ ಕೊರತೆ ಅನೇಕ ಜೀವಗಳನ್ನು

ಕಸಿದುಕೊಳ್ಳುತ್ತಿದೆ. ರೋಗಿಗಳಿಗೆ ಆಮ್ಲಜನಕ ಪೂರೈಕೆ

ಲಭ್ಯವಿಲ್ಲದಿದ್ದರೆ 24 ಗಂಟೆಗಳ ಒಳಗೆ ಆರೋಗ್ಯ

ವ್ಯವಸ್ಥೆಯು ಸಂಪೂರ್ಣ ಕುಸಿಯಬಹುದು ಎಂದು ದೆಹಲಿ

ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇನ್ನು, ಆಮ್ಲಜನಕ

ಸ್ಥಾವರ ಸ್ಥಾಪನೆಗೆ ಮುಂದಾಗಬೇಕೆಂದು ಹೈಕೋರ್ಟ್

ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.





Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು