ಬೆಡ್, ಲಸಿಕೆ ಕೊರತೆ ಇದೆ: ಜಾರ್ಜ್‌ ಆರೋಪ!3000 ಸೋಂಕಿತರು ನಾಪತ್ತೆ!ಆಕ್ಸಿಜನ್ ಸಿಗದೇ ಐವರು ಸಾವು: ನ್ಯಾಯಮೂರ್ತಿಗೆ ರಾಜಣ್ಣ ದೂರು

ಬೆಡ್, ಲಸಿಕೆ ಕೊರತೆ ಇದೆ: ಜಾರ್ಜ್‌ ಆರೋಪ

 



ನಮ್ಮ ಕ್ಷೇತ್ರದಲ್ಲಿ ಬೆಡ್ ಕೊರತೆ ಇದ್ದು, ಸೋಂಕಿತರು ಬೆಡ್
ಸಿಗದೇ ಪರದಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ
ಕೆ.ಜೆ.ಜಾರ್ಜ್ ಇಂದು ಆರೋಪಿಸಿದ್ದಾರೆ. ಬೆಂಗಳೂರಿನ
ಪೂರ್ವ ವಲಯದ ಸಭೆಯಲ್ಲಿ ಮಾತನಾಡಿ, ಬೆಡ್

 

ಸಿಗದ ಕಾರಣ ನಮ್ಮ ಸಂಬಂಧಿಕರೊಬ್ಬರು ಇಹಲೋಕ
ತ್ಯಜಿಸಿದ್ದಾರೆ. ಸಚಿವರು ಬೆಡ್, ಲಸಿಕೆ ಇದೆ ಎಂದು
ಹೇಳುತ್ತಾರೆ. ಆದರೆ ಬೆಡ್, ಲಸಿಕೆ ಯಾವುದೂ ಇಲ್ಲ.
ಈ ಬಗ್ಗೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಂಡು ಲಸಿಕೆ
ರವಾನಿಸಬೇಕು, ಬೆಡ್ ಸಿಗುವಂತೆ ನೋಡಿಕೊಳ್ಳಬೇಕು
ಎಂದು ಆಗ್ರಹಿಸಿದರು. 

 


3000 ಸೋಂಕಿತರು ನಾಪತ್ತೆ!

 



ಕರ್ಪ್ಯೂಗೆ ಹೆದರಿ ನಗರಪ್ರದೇಶಗಳ ಲಕ್ಷಾಂತರ ಜನ ಹಳ್ಳಿ
ಸೇರಿದ ಬೆನ್ನಲ್ಲೇ ಬೆಂಗಳೂರಿನ 3 ಸಾವಿರ ಸೋಂಕಿತರು
ಮೊಬೈಲ್ ಸ್ವಿಚ್ ಆಫ್ ಮಾಡಿರುವುದು ಸರ್ಕಾರಕ್ಕೆ ಹೊಸ
ತಲೆನೋವು ತಂದಿಟ್ಟಿದೆ. ಹೀಗೆ ನಾಪತ್ತೆಯಾದವರು
ಕೊರೋನಾ ಮಾರಿಯನ್ನು ಅಂಟಿಸಿಕೊಂಡೆ ಸ್ವಗ್ರಾಮಗಳಿಗೆ
ತೆರಳಿರಬಹುದಾದ ಸಾಧ್ಯತೆ ಹೆಚ್ಚಾಗಿರುವುದರಿಂದ ಹಳ್ಳಿ
ಹಳ್ಳಿಗಳಲ್ಲೂ ಸೋಂಕು ತಾಂಡವವಾಡುವ ಆತಂಕ
ಇಮ್ಮಡಿಯಾಗಿದೆ. ಮೊಬೈಲ್ ಆಫ್ ಮಾಡಿರುವವರು
ಮನೆ ಖಾಲಿ ಮಾಡಿದ್ದು, ಈಗ ಎಲ್ಲಿದ್ದಾರೆ ಎಂಬ ಮಾಹಿತಿ
ಇಲ.



ಆಕ್ಸಿಜನ್ ಸಿಗದೇ ಐವರು ಸಾವು: ನ್ಯಾಯಮೂರ್ತಿಗೆ ರಾಜಣ್ಣ ದೂರು

 



ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ಐವರು
ಕೊರೋನಾ ಸೋಂಕಿತರು ಸಾವನ್ನಪ್ಪಿದ್ದ ಹಿನ್ನೆಲೆ
ಮಾಜಿ ಶಾಸಕ ಕೆ.ಸಿ.ರಾಜಣ್ಣ ಇಂದು ಹೈಕೋರ್ಟ್
ನ್ಯಾಯಮೂರ್ತಿಗಳಿಗೆ ಇ-ಮೇಲ್ ಮುಖೇನ ದೂರು
ಸಲ್ಲಿಸಿದ್ದಾರೆ. ದೂರಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯ
ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಹಾಗೂ
ಡಿಹೆಚ್‌ಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ
ಮಾಡಿದ್ದಾರೆ. ಇನ್ನು ಘಟನೆ ಸಂಬಂಧ ಇಬ್ಬರು
ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆಂದು ಈ ಹಿಂದೆ
ಆರೋಗ್ಯ ಸಚಿವರು ಹೇಳಿಕೆ ನೀಡಿದ್ದರು.

Reactions

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು